- Advertisement -
ನವದೆಹಲಿ: ಚುನಾವಣೋತ್ತರ ಸಮೀಕ್ಷಾ ವರದಿಗಳಲ್ಲಿ ಬಿಜೆಪಿ ಬಹುಮತ ಗಳಿಸಿದ್ದೇ ತಡ ಬಿಜೆಪಿ ಕಾರ್ಯಕರ್ತರಲ್ಲಿ ಅದೇನೋ ಉತ್ಸಾಹ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಹೊರತಾಗಿಲ್ಲ. ಸಮೀಕ್ಷಾ ವರದಿಯಿಂದ ಖುಷಿಯಾಗಿರೋ ಅಮಿತ್ ಶಾ ನಾಳೆ ಭರ್ಜರಿ ಔತಣಕೂಟ ಏರ್ಪಡಿಸಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುಂಚೆಯೇ ವಿಜಯೋತ್ಸವ ಆಚರಿಸುವ ರೀತಿ ಅಮಿತ್ ಶಾ ಪಾರ್ಟಿ ಆಯೋಜಿಸಿದ್ದಾರೆ. ಎನ್ ಡಿಎ ನಾಯಕರು ಈ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದು, ಕೇಂದ್ರ ಸಚಿವರನ್ನೂ ಅಮಿತ್ಆ ಶಾ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಕೇಂದ್ರದಲ್ಲಿ ಗೆಲ್ಲೋರು ಯಾರು… ?ಸಮೀಕ್ಷಾ ವರದಿ ಏನ್ ಹೇಳ್ತಿದೆ? ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ತಿಳಿದುಕೊಳ್ಳೋಕೆ ಈ ವಿಡಿಯೋ ತಪ್ಪದೇ ನೋಡಿ.
- Advertisement -