ಕರ್ನಾಟಕ ಟಿವಿ : ಕೊರೊನಾ ಹಿನ್ನೆಲೆ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ.. ಪದವಿ, ಸ್ನಾತ್ತಕೋತ್ತರ ಪದವಿ ಮಾಡಿದವರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಸ್ಕಿಲ್ ಬೇಸ್ ಮೇಲೆ ಕೆಲಸ ಪಡೆದವರು ಹೇಗೋ ಕೆಲಸ ಮಾಡಿಕೊಂಡು ಹೋಗ್ತಿದ್ದಾರೆ.. ಈ ಹಿನ್ನೆಲೆ ಕೇಂದ್ರ ಸರ್ಕಾರ ಇದೀಗ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡ್ತಿದೆ.. ಪಿಯುಸಿ ಪಾಸಾದ.. ಅಂದ್ರೆ, ಸೈನ್ಸ್, ಕಾಮರ್ಸ್, ಆರ್ಟ್ಸ್ ಯಾವುದೇ ವಿಭಾಗದಲ್ಲಿ ಪಾಸಾದವರಿಗೆ ಅಪರೆಲ್ಸ್ ಟ್ರೈನಿಂಗ್ ಹಾಗೂ ಡಿಸೈನ್ಸ್ ಕೋರ್ಸ್ ನಡಿ ಡಿಪ್ಲೋಮೋ ಹಾಗೂ ಪದವಿ ಶಿಕ್ಷಣ ನೀಡ್ತಿದೆ.. ಖಾಸಗಿ ಕಾಲೇಜುಗಳಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಲು ಲಕ್ಷಾಂತರ ಡೋನೇಷನ್ ಕಟ್ಟಬೇಕು ಆದ್ರೆ ಸರ್ಕಾರ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡ್ತಿದೆ..
ಮುದ್ರಾ ಯೋಜನೆ, ಸ್ಟಾರ್ಟ್‍ಅಪ್‍ನಡಿ ಸಾಲ ಸಿಗುತ್ತೆ..!
ಒಂದು ವರ್ಷದ ಡಿಪ್ಲೋಮೋ ಕೋರ್ಸ್ ಮಾಡಿದ್ರೆ ನಿಮಗೆ ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ ಹಾಗೂ ಸ್ಟಾರ್ಟ್‍ಅಪ್‍ನಡಿ ಲೋನ್ ಸಿಗಲಿದೆ.. ಮೂರು ವರ್ಷದ ಪದವಿ ಬಿವೋಕ್ ಮಾಡಿದ್ರೆ ಓದಲು ಸಾಲಸೌಲಭ್ಯವಲ್ಲದೇ ಪದವಿ ನಂತರ ಉದ್ಯಮ ಶೂರು ಮಾಡಲು ಸಾಲದ ವ್ಯವಸ್ಥೆ ಸಿಗಲಿದೆ.. ಮುದ್ರಾ ಹಾಗೂ ಸ್ಟಾರ್ಟ್‍ಅಪ್ ನಡಿ ಲೋನ್ ಸಿಗಲಿದೆ..
ಬಿವೋಕ್ ಕೋರ್ಸ್ ಇತರೆ ಪದವಿಗಳಿಗೆ ಸರಿಸಮ
ಪಿಯುಸಿ ನಂತರ ಬಿಎ ಮಾಡುವ ವಿದ್ಯಾರ್ಥಿಗಳು.. ಬದಲಾಗಿ ಬಿವೋಕ್ ಮಾಡಿದ್ರೆ ಇದು ಸಹ ಪದವಿಗೆ ಸಮ ಹಾಗೂ ಕೆಎಎಸ್ ಐಎಎಸ್ ಸೇರಿದಂತೆ ಸ್ಪರ್ಧಾತ್ಮಾಕ ಪರೀಕ್ಷೆಗಳನ್ನ ಬರೆಯಬಹುದಾಗಿದೆ.. ನಿಮ್ಮ ಮನೆಯಲ್ಲಿ, ಊರಿನಲ್ಲಿ ಅಥವಾ ಪರಿಚಯಸ್ಥ ವಿದ್ಯಾರ್ಥಿಗಳು ಯಾರಾದ್ರೂ ಪಿಯುಸಿ ಪಾಸಾದವರು ಇದ್ದರೆ ಈ ವಿಷಯವನ್ನ ತಿಳಿಸಿ ಎಟಿಡಿಸಿಯಲ್ಲಿ ಡಿಪ್ಲೋಮೋ ಹಾಗೂ ಡಿಗ್ರಿ ಕೋರ್ಸ್ ಸೇರಲು ತಿಳಿಸಿ.. ಪದವಿಯೂ ಮುಗಿಯುತ್ತೆ. ಜೊತೆಗೆ 100% ಕೆಲಸ ಗ್ಯಾರಂಟಿ.. ಕನಿಷ್ಠ ಸಂಬಳ 17 ಸಾವಿರದಿಂದ ಶುರುವಾಗುತ್ತೆ..
ಸಂಪರ್ಕಿಸಬೇಕಾದ ವಿಳಾಸ..
ಈ ಕೂಡಲೇ ಸಂಪರ್ಕಿಸಿ : ಎಟಿಡಿಸಿ ಬೆಂಗಳೂರು
ದೂರವಾಣಿ ಸಂಖ್ಯೆ : 9916807401 / 9731004040
ಕರೆ ಮಾಡಬೇಕಾದ ಸಮಯ ( ಬೆಳಗ್ಗೆ 10 ರಿಂದ ಸಂಜೆ 6 )
ಕೆ.ಎಂ ಶಿವಕುಮಾರ್, ಕರ್ನಾಟಕ ಟಿವಿ, ಬೆಂಗಳೂರು