Political news: ಮುಡಾ ಹಗರಣದಲ್ಲಿ ಸಿಕ್ಕು ಆತಂಕದಲ್ಲಿರುವ ಸಿಎಂ ಸಿದ್ಧರಾಮಯ್ಯರ ಬೆನ್ನಿಗೆ ಅಹಿಂದ ಸಂಘಟನೆ ನಿಂತುಕೊಂಡಿದ್ದು ಹುಬ್ಬಳ್ಳಿಯಿಂದ ಬೆಂಗಳೂರು ವರೆಗೆ ಪಾದಯಾತ್ರೆ ಆರಂಭ ಮಾಡಲಾಗಿದೆ.
ಹೌದು.. ಯಾವುದೇ ಒತ್ತಡಕ್ಕೆ ಮಣಿದು ರಾಜಿನಾಮೆ ನೀಡಬಾರದು ಅವರು ಬೆಂಬಲ ಯಾವಾಗಲೂ ಇದೆ ಎನ್ನುವ ಸಂದೇಶ ನೀಡುವ ಉದ್ದೇಶದಿಂದ ರಾಷ್ಟ್ರೀಯ ಅಹಿಂದ ಸಂಘಟನೆಯಿಂದ ಈ ಒಂದು ಬೆಂಗಳೂರು ಚಲೋ ಆರಂಭಗೊಂಡಿದೆ.
ರಾಷ್ಟ್ರೀಯ ಸಂಘಟನೆ ಕರೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಹಿಂದ ಜಾಗೃತಿ ಜಾಥಕ್ಕೆ ಹುಬ್ಬಳ್ಳಿಯಲ್ಲಿ ಇಂದು ಜಾಲನೆ ನೀಡಲಾಯಿತು. ಇಂದು ಮತ್ತು ನಾಳೆ ಈ ಜಾಥ ನಡೆಲಿದ್ದು, ಹುಬ್ಬಳ್ಳಿಯಿಂದ ಬೆಂಗಳೂರಿನ ವರೆಗೆ ವಿವಿಧ ಜಿಲ್ಲೆಗಳಲ್ಲಿ ಬಹಿರಂಗ ಸಮಾವೇಶ ಮೂಲಕ ಸಿಎಂಗೆ ಬೆಂಬಲ ನೀಡಲಾಗುತ್ತದೆ.
ನಾಳೆ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶದ ಮೂಲಕ ಜಾಥ ಸಮಾರೋಪಗೊಳ್ಳಲಿದೆ. ಹೀಗಾಗಿ ಇಂದು ಉತ್ತರ ಕರ್ನಾಟಕ ಎಲ್ಲಾ ಜಿಲ್ಲೆಯ ಅಹಿಂದ ಕಾರ್ಯಕರ್ತರು ವಾಹನಗಳ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳಸಿದರು. ನಗರದ ಅಂಬೇಡ್ಕರ್ ಸರ್ಕಲ್ ದಿಂದ ಬೃಹತ್ ಪ್ರಮಾಣದ ರಾಲಿ ಆರಂಭಗೊಂಡಿತು.