Bollywood News: ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಸ್ಲಿಂ ಆಗಿದ್ದರೂ, ವಿವಾಹವಾಗಿದ್ದು ಹಿಂದೂ ಧರ್ಮದವರಾದ ವಿಕಿ ಕೌಶಲ್ ಅವರನ್ನು.
ಹಾಗಾಗಿ ಕತ್ರೀನಾ ಮುಸ್ಲಿಂ ಮತ್ತು ಹಿಂದೂ ಧರ್ಮವೆರಡನ್ನೂ ಗೌರವಿಸುತ್ತಾರೆ. ಜುಲೈ 16ಕ್ಕೆ ಕತ್ರೀನಾ ಬರ್ತ್‌ಡೇ ಆಗಿದ್ದು, ಜುಲೈ 14ರಂದು ಕತ್ರೀನಾ, ಕ್ರಿಕೇಟಿಗ ಕೆ.ಎಲ್.ರಾಹುಲ್ ಮತ್ತು ಅವರ ಪತ್ನಿ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿಯೊಂದಿಗೆ ಮಂಗಳೂರಿಗೆ ಆಗಮಿಸಿದ್ದರು.
ಈ ಮೊದಲೇ ಕುತ್ತಾರಿನಲ್ಲಿ ನಿಗದಿಯಾಗಿದ್ದ ಕೊರಗಜ್ಜನ ಕೋಲದಲ್ಲಿ ಭಾಗಿಯಾಗಿದ್ದರು. ನಿನ್ನೆ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹವಿದ್ದು, ಕತ್ರೀನಾ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ 6 ಗಂಟೆಗೆ ಕುತ್ತಾರಿಗೆ ಆಗಮಿಸಿ, ಕೊರಗಜ್ಜನ ದರ್ಶನ ಮಾಡಿದ್ದಾರೆ.
ಬಳಿಕ ಅತಿಯಾ ಮತ್ತು ಕತ್ರೀನಾ ದೇವಸ್ಥಾನದ ಹೊರಗೆ ನಿಂತು ಕೋಲ ವೀಕ್ಷಿಸಿದ್ದಾರೆ. ಏಕೆಂದರೆ, ಸಂಜೆ ಬಳಿಕ ಹೆಣ್ಣು ಮಕ್ಕಳನ್ನು ಕೊರಗಜ್ಜನ ದೇವಸ್ಥಾನದ ಒಳಗೆ ಬಿಡಲಾಗುವುದಿಲ್ಲ. ಹಾಗಾಗಿ ಇವರಿಬ್ಬರು ಸೇರಿ, ಮಹಿಳೆಯರೆಲ್ಲ ಹೊರಗೆ ನಿಂತು ಕೋಲ ವೀಕ್ಷಿಸಿದ್ದಾರೆ.
ಇನ್ನು ಕೆ.ಎಲ್. ರಾಹುಲ್, ಸುನೀಲ್ ಶೆಟ್ಟಿ ಪುತ್ರ ಸೇರಿ ಇನ್ನು ಕೆಲ ಗಣ್ಯರು ದೇವಸ್ಥಾನಕ್ಕೆ ಹೋಗಿ, ಕೋಲ ವೀಕ್ಷಿಸಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಗೆ ಮಾಧ್ಯಮದವರಿಗೆ ವಿಷಯ ತಿಳಿಸಬೇಡಿ ಎಂದು ಮನವಿ ಮಾಡಲಾಗಿತ್ತು. ಹಾಾಗಾಗಿ ಈ ಸುದ್ದಿ ಎಲ್ಲೂ ವೈರಲ್ ಆಗಿರಲಿಲ್ಲ.
ಇನ್ನು ಇದಕ್ಕೂ ಮುನ್ನ, ರಾಹುಲ್ ಮತ್ತು ಆತಿಯಾ, ಬಪ್ಪನಾಡು ದುರ್ಗಾ ಪರಮೇಶ್ವರಿಯ ಸನ್ನಿಧಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದಿದ್ದಾರೆ. ಸುನೀಲ್ ಶೆಟ್ಟಿ ಕೂಡ ಆಗಾಗ ಮಂಗಳೂರಿಗೆ ಬಂದು, ಬಪ್ಪನಾಡು ದುರ್ಗೆಯ ಆಶೀರ್ವಾದ ಪಡೆಯುತ್ತಾರೆ.