Monday, December 23, 2024

Latest Posts

ಮತ್ತೆ ಅಡುಗೆ ಸಿಲಿಂಡರ್ ಬೆಲೆ ಏರಿಕೆ…!

- Advertisement -

www.karnatakatv.net :ಬೆಂಗಳೂರು: ಅಡುಗೆ ಸಿಲಿಂಡರ್ ಬೆಲೆ ಮತ್ತೆ 25 ರೂಪಾಯಿ ಏರಿಕೆಯಾಗಿದೆ. ಕಳೆದ 15 ದಿನಗಳ ಹಿಂದಷ್ಟೇ  ಏರಿಕೆ ಕಂಡಿದ್ದ ಗ್ಯಾಸ್ ಸಿಲಿಂಡರ್ ನ ಬೆಲೆ ಏರಿಕೆ ಜನಸಾಮಾನ್ಯರಿಗೆ ಶಾಕ್ ನೀಡಿದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಈ ಮಧ್ಯೆ ಇದೀಗ ರಾಜ್ಯದ ಜನತೆಗೆ ಕೇಂದ್ರ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಮತ್ತೆ 25 ರೂಪಾಯಿ ಏರಿಕೆ ಮಾಡಿ ಶಾಕ್ ನೀಡಿದೆ. ಇನ್ನು ಅಡುಗೆ ಸಿಲಿಂಡರ್ ಬೆಲೆಯನ್ನ ಕಳೆದ ಆಗಸ್ಟ್ 17 ರಂದಷ್ಟೇ 25 ರೂಪಾಯಿ ಏರಿಕೆ ಮಾಡಲಾಗಿತ್ತು. ಇದೀಗ ನೂತನ ಪರಿಷ್ಕೃತ ದರ ಪ್ರಕಾರ ಬೆಂಗಳೂರಿನಲ್ಲಿ 862 ರೂ ಇದ್ದ ಅಡುಗೆ ಸಿಲಿಂಡರ್ ಬೆಲೆ ಈಗ 887 ರೂ.ಗೆ ಏರಿಕೆಯಾಗಿದೆ. ಈ ಮೂಲಕ ಹದಿನೈದೇ ದಿನಗಳ ಅಂತರದಲ್ಲಿ ಬರೋಬ್ಬರಿ 25 ರೂ. ಏರಿಕೆ ಕಂಡಂತಾಗಿದೆ.

ಇನ್ನು ಈ ವರ್ಷ ಜನವರಿ ತಿಂಗಳಿನಿಂದ ಸೆ.1ರವರೆಗೂ ಲೆಕ್ಕಹಾಕಿದ್ರೆ 9 ತಿಂಗಳಿಗೆ 14 ಕೆ.ಜಿ ಎಲ್ ಪಿಜಿ ಸಿಲಿಂಡರ್ ನ ಬೆಲೆ ಬರೋಬ್ಬರಿ 190 ರೂ. ಹೆಚ್ಚಳವಾಗಿದೆ. ಇದರಿಂದ ಬಡವರು ಮತ್ತು ಮಧ್ಯಮವರ್ಗದವರಿಗೆ ಹೊರೆಯಾಗಲಿದ್ದು ಕೇಂದ್ರಕ್ಕೆ ಜನತೆ ಹಿಡಿಶಾಪ ಹಾಕ್ತಿದ್ದಾರೆ. ಇನ್ನು ಉತ್ತರಪ್ರದೇಶದ ಲಖನೌನಲ್ಲಿ ಒಂದು ಸಿಲಿಂಡರ್ ಗೆ 922.50 ಪೈಸೆ ಇದ್ದು, ಇಡೀ ದೇಶದಲ್ಲೇ ಗೃಹೋಪಯೋಗಿ ಅನಿಲಕ್ಕೆ ಅತ್ಯಧಿಕ ಬೆಲೆ ಪಾವತಿಸುತ್ತಿರೋ ರಾಜ್ಯವಾಗಿದೆ.

ಕರ್ನಾಟಕ ಟಿವಿ- ಬೆಂಗಳೂರು

https://www.youtube.com/watch?v=SjZXtwxtTME

- Advertisement -

Latest Posts

Don't Miss