- Advertisement -
www.karnatakatv.net : ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿಯ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಕಾರ್ಮಿಕ ಇಲಾಖೆ ಕಾರ್ಡ್ ಮಾಡಿಸಿಕೊಡಲು ಒನ್ ಟು ಡಬಲ್ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಮೊಬೈಲ್‌ನಲ್ಲಿ ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ.
ಹೌದು.. ಹಣ ವಸೂಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದೊಂದು ಕಾರ್ಡ್ ಗೆ 600-700 ರೂಪಾಯಿ ವಸೂಲಿ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರೇ ಸೆರೆ ಹಿಡಿದ್ದಾರೆ.
ಸರ್ಕಾರಿ ಶುಲ್ಕ ಇರುವುದೇ 25-30 ರೂಪಾಯಿ. ಆದರೆ ಏಜೆಂಟರ್ ಬಡ ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೇ ಸರ್ಕಾರಿ ಕಚೇರಿಯಲ್ಲಿಯೇ ರಾಜರೋಷವಾಗಿ ವ್ಯವಹಾರ ಮಾಡುತ್ತಿದ್ದು, ಏಜೆಂಟರ ಹಾವಳಿಗೆ ಜನರು ಬೇಸತ್ತಿದ್ದಾರೆ.
- Advertisement -