Wednesday, October 22, 2025

Latest Posts

ಅಹಿಂದ ದಾಳ – ಜಾರಕಿಹೊಳಿ ಹೆಸರು ಮುಂದಕ್ಕೆ : ಡಿಕೆಶಿವಕುಮಾರ್ ಮುಂದಿನ ಹೆಜ್ಜೆ ಏನು?

- Advertisement -

ರಾಜ್ಯ ರಾಜಕೀಯದಲ್ಲಿ ದಲಿತ ನಾಯಕರಿಗೆ ಉನ್ನತ ಹುದ್ದೆ ಸಿಕ್ಕಿಲ್ಲ ಅನ್ನುವ ಕೊರಗಿತ್ತು. ಆ ಕೊರಗಿಗೆ ಕೊನೆಗಾಲ ಬಂದಿದೆ ಅನ್ಸತ್ತೆ. ಸಿದ್ದರಾಮಯ್ಯ ಪುತ್ರ ಯತೀಂದ್ರರ ಆ ಒಂದು ಹೇಳಿಕೆ, ಅಹಿಂದ ನಾಯಕರೇ ಮುಂದಿನ ಸಿಎಂ ಎಂಬುದನ್ನ ಸಾರಿ ಸಾರಿ ಹೇಳುತ್ತಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಬದಲಾವಣೆ ಕುರಿತ ಚರ್ಚೆಗಳು ವೇಗ ಪಡೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಹೆಸರುಗಳು ಕೇಳಿಬರುತ್ತಿವೆ. ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಕುರಿತು ಸಾಕಷ್ಟು ಊಹಾಪೋಹಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯ ಕಪ್ಪಲಗುದ್ದಿಯಲ್ಲಿ ನಡೆದ ಕನಕದಾಸ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯತೀಂದ್ರ ನೀಡಿದ ಈ ಹೇಳಿಕೆ, ಅಹಿಂದ ನಾಯಕರ ಒಗ್ಗೂಡುವ ಪ್ರಯತ್ನ ಹಾಗೂ ಡಿಕೆಶಿಗೆ ಕೌಂಟರ್‌ ಎಂದು ವಿಶ್ಲೇಷಿಸಲಾಗಿದೆ. ಸಿದ್ದರಾಮಯ್ಯ ಬಳಿಕ ಜಾರಕಿಹೊಳಿ ಕುಟುಂಬಕ್ಕೆ ಸಿಎಂ ಪಟ್ಟ ಒಲಿಯುವ ಮುನ್ಸೂಚನೆಯೂ ಇದರಲ್ಲಿ ಕಾಣಿಸಿದೆ.

ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅಗತ್ಯವಿಲ್ಲ. ನಾನು ಪಾರ್ಟಿಯ ನಿರ್ಧಾರಕ್ಕೆ ಬದ್ದನಾಗಿದ್ದೇನೆ ಎಂದಿದ್ದಾರೆ. ನಾನು ಪಕ್ಷದಲ್ಲಿ ದೊಡ್ಡ ದೊಡ್ಡ ಜವಾಬ್ದಾರಿ ನಿಭಾಯಿಸಿದ್ದೇನೆ, ರಾಜ್ಯದಲ್ಲಿ ಇತಿಹಾಸ ಬರೆಯುತ್ತಾ ಇದ್ದೀನಿ ಎಂದು ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ. ಸಿಎಂ ಸ್ಥಾನಕ್ಕಾಗಿ ತಾಳ್ಮೆಯಿಂದ ಕಾದಿರುವ ಡಿಕೆಶಿಯ ಮುಂದಿನ ಹೆಜ್ಜೆ ಏನಾಗಬಹುದು ಎಂಬುದು ಈಗ ರಾಜ್ಯ ರಾಜಕೀಯದಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss