Wednesday, October 29, 2025

Latest Posts

ಸಿದ್ದು ಪರ ಪೋಸ್ಟ್‌ ಕಾರ್ಡ್ ಚಳವಳಿ

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ಅಹಿಂದ ಸಂಘಟನೆಗಳು ನಿಂತಿದ್ದು, ಪತ್ರ ಚಳವಳಿಯನ್ನು ಆರಂಭಿಸಿವೆ. 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದು, ದಲಿತ ಸಂಘಟನೆಗಳು ಪತ್ರ ಚಳವಳಿ ಆರಂಭಿಸಿದ್ದಾರೆ.

ಹೈಕಮಾಂಡ್‌ ಮತ್ತು ರಾಹುಲ್‌ ಗಾಂಧಿಗೆ ಪತ್ರ ಬರೆಯಲು, ಅಹಿಂದ ಸಂಘಟನೆಗಳು ಮುಂದಾಗಿವೆ. ಪವರ್‌ ಶೇರಿಂಗ್‌ ವಿಚಾರವಾಗಿ ಭಾರೀ ಗೊಂದಲ ಎದ್ದಿವೆ. ಹೀಗಾಗಿ ಎಲ್ಲಾ ಗೊಂದಲಗಳಿಗೂ ಶೀಘ್ರವೇ ತೆರೆ ಎಳೆಯಿರಿ ಮತ್ತು ಸಿದ್ದರಾಮಯ್ಯ ಅವರೇ ಸಿಎಂ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಘೋಷಿಸಲಿ ಎಂದು ಒತ್ತಾಯಿಸಿವೆ.

ಇಷ್ಟು ದಿನ ನಾನೇ 5 ವರ್ಷ ಸಿಎಂ ಅಂತಿದ್ದ ಸಿದ್ದರಾಮಯ್ಯ, ಈಗ ವರಸೆ ಬದಲಿಸಿದ್ದಾರೆ. ಹೈಕಮಾಂಡ್‌ ತೀರ್ಮಾನಿಸಿದ್ರೆ ಅನ್ನೋದನ್ನು ಹೇಳಿದ್ದಾರೆ. ಇದು ಪರೋಕ್ಷವಾಗಿ ನಾಯಕತ್ವ ಬದಲಾವಣೆಯ ಸುಳಿವು ನೀಡಿದೆ. ಇದ್ರಿಂದ ಅಸಮಾಧಾನಗೊಂಡಿರುವ ಸಿದ್ದು ಅಭಿಮಾನಿಗಳು, ಬೆಂಬಲಿಗರು, ನೇರವಾಗಿ ಹೈಕಮಾಂಡ್‌ ಮೇಲೆ ಒತ್ತಡ ಹಾಕಲು ನಿರ್ಧರಿಸಿದ್ದಾರೆ.

ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ರಾಮಸ್ವಾಮಿ ವೃತ್ತದಿಂದಲೇ ಪೋಸ್ಟ್‌ ಕಾರ್ಡ್‌ ಚಳವಳಿ ಆರಂಭಿಸಲಾಗಿದೆ. ಯಾವ ಕಾರಣಕ್ಕೆ 5 ವರ್ಷ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರೇ ಇರಬೇಕೆಂಬ ಬಗ್ಗೆ, ಪತ್ರದಲ್ಲಿ ಉಲ್ಲೇಖಿಸಲಿದ್ದಾರೆ.

ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಗುರುತಿಸಿಕೊಂಡಿದ್ದು, ಅಹಿಂದ ಚಳವಳಿಗಳ ಮೂಲಕವೇ ಮುನ್ನೆಲೆಗೆ ಬಂದಿದ್ದಾರೆ. ಹೀಗಾಗಿ ಅಹಿಂದ ನಾಯಕರು, ಸಂಘಟನೆಗಳು, ಸಿದ್ದರಾಮಯ್ಯ ಜೊತೆ ನಿಂತಿದ್ದಾರೆ.

- Advertisement -

Latest Posts

Don't Miss