Monday, October 13, 2025

Latest Posts

3ನೇ ತರಗತಿಯಿಂದಲೇ AI ಪಾಠ ಶುರು – ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ಬದಲಾವಣೆ!

- Advertisement -

ದೇಶದ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡಲು ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದೆ. 2026–27ನೇ ಶೈಕ್ಷಣಿಕ ವರ್ಷದಿಂದ 3ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆಯನ್ನು ಪಠ್ಯಕ್ರಮದಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ. ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮುಂದಿನ 2-3 ವರ್ಷಗಳಲ್ಲಿ AI ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವ ಮತ್ತು ಉಪಯೋಗಿಸುವ ಬಗ್ಗೆ ಸಜ್ಜಾಗುವಂತೆ ತರಬೇತಿ ನೀಡಲಾಗುವುದು. ಈ ಸಲುವಾಗಿ ದೇಶದಾದ್ಯಂತ ಒಂದು ಕೋಟಿಗೂ ಹೆಚ್ಚು ಶಿಕ್ಷಕರಿಗೆ ತಲುಪಲಿದೆ. AI ಸಂಬಂಧಿತ ಪಾಠಗಳನ್ನು ಕಲಿಸಲು ಅವರನ್ನು ಸಿದ್ಧಪಡಿಸುವುದು ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆ ಯಶಸ್ವಿಯಾಗಲು ಅಗತ್ಯವಿರುವ ಮಾರ್ಗದರ್ಶನಕ್ಕಾಗಿ 18,000 ಕ್ಕೂ ಹೆಚ್ಚು CBSE ಸಂಯೋಜಿತ ಶಾಲೆಗಳು ಈಗಾಗಲೇ ಪಠ್ಯ ಚೌಕಟ್ಟನ್ನ ಅಭಿವೃದ್ಧಿಪಡಿಸುತ್ತಿದೆ. ಸದ್ಯ 6ನೇ ತರಗತಿಯಿಂದ AI ಪಾಠಗಳನ್ನ 15 ಗಂಟೆಗಳ ಶ್ರೇಣಿಯಲ್ಲಿ ಕೌಶಲ್ಯ ವಿಷಯವಾಗಿ ಪರಿಚಯಿಸಲಾಗುತ್ತಿದೆ. 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವಾಗಿ ನೀಡಲಾಗುತ್ತಿದೆ.

AI ಪಾಠದ ಪ್ರಾಯೋಗಿಕ ಅನುಭವಕ್ಕಾಗಿ ಶಿಕ್ಷಕರಿಗೆ ಸಹಾಯಮಾಡುವ ಪೈಲಟ್ ಯೋಜನೆಯು ಈಗಾಗಲೇ ಪ್ರಗತಿಯಲ್ಲಿದೆ ಎಂದು ಕುಮಾರ್ ತಿಳಿಸಿದ್ದಾರೆ. ಡಿಜಿಟಲ್ ಆರ್ಥಿಕತೆಯಲ್ಲಿ ಸ್ಪರ್ಧಿಸಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಬ್ಬರು ಸಮರ್ಥರಾಗಬೇಕು ಎಂಬುದು ನಮ್ಮ ದೀರ್ಘಕಾಲೀನ ಗುರಿಯಾಗಿದೆ ಎಂದಿದ್ದಾರೆ.

ಭಾರತ AI-ಚಾಲಿತ ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸಲು ತಯಾರಾಗುತ್ತಿದೆ. ಬಲವಾದ ಕಂಪ್ಯೂಟಿಂಗ್ ಮೂಲಸೌಕರ್ಯ, ದಾಖಲೆ ಆಧಾರಿತ ಶಿಕ್ಷಣ ವಿಧಾನ ಮತ್ತು ಏಕೀಕೃತ ಕ್ಷೇತ್ರೀಯ ಸಹಕಾರ ಅಗತ್ಯವಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಸರಿಯಾದ ಕ್ರಮ ಕೈಗೊಳ್ಳುವುದರ ಮೂಲಕ ಭಾರತವು ಜಾಗತಿಕ AI ಲ್ಯಾಂಡ್‌ಸ್ಕೇಪ್ ಅನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂಬ ನಂಬಿಕೆಯನ್ನೂ ವ್ಯಕ್ತಪಡಿಸಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss