ಮಂಡ್ಯ: ಏಡ್ಸ್ ರೋಗವನ್ನು ಸಂಪೂರ್ಣವಾಗಿ ಅಂತ್ಯಗೊಳಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ. ನಳಿನಿ ಕುಮಾರಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
2022 ಮುಗಿಯುವ ಮೊದಲು ಈ 5 ವಸ್ತುಗಳನ್ನು ಮನೆಗೆ ತನ್ನಿ..!!
ಸಂವಿಧಾನವನ್ನು ಡಾ: ಬಿ.ಆರ್.ಅಂಬೇಡ್ಕರ್ ಅವರು ನೀಡಿದ್ದಾರೆ. ಸಂವಿಧಾನದ ಅವಶ್ಯಕತೆ, ಪ್ರಜಾಪ್ರಭುತ್ವ, ಸಂವಿಧಾನದ ಪೀಠಿಕೆ ಕುರಿತಂತೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸಲಹೆಗಳನ್ನು ನೀಡಿದರು. ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಆಶಾಲತಾ ಅವರು ಮಾತನಾಡಿ ಏಡ್ಸ್ ಅಂತ್ಯಗೊಳಿಸಲು ಅಸಮಾನತೆಯನ್ನು ಕೊನೆಗಾಣಿಸಲು ಪ್ರತಿಯೊಬ್ಬರ ಆರೋಗ್ಯವನ್ನು ಕಾಪಾಡಲು ಹಾಗೂ ಪ್ರತಿಯೊನ್ನರನ್ನು ಖುಷಿಯಾಗಿಡಲು ವಿಶ್ವವು ಒಂದಾಗಬೇಕಿದೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಆಂಜನೇಯನ ಸನ್ನಿಧಿಯಲ್ಲಿ “ವರ್ಣಂ” ಮುಹೂರ್ತ ಶುರು
ಮಂಡ್ಯ ಜಿಲ್ಲೆಯಲ್ಲಿ ಏಡ್ಸ್ ರೋಗಿಗಳಿಗೆ ಆಪ್ತ ಸಮಾಲೋಚನೆ ಮಾಡಿ ಪರೀಕ್ಷೆ ಮಾಡಲು 14 ಕೇಂದ್ರಗಳಿವೆ. ಹೆಚ್.ಐ.ವಿ ಪತ್ತೆಯಾದ ನಂತರ ಅವರಿಗೆ ಉಚಿತವಾಗಿ ಮಂಡ್ಯ ವೈದ್ಯಕೀಯ ಕಾಲೇಜು ಹಾಗೂ ಎ.ಐ.ಎಮ್.ಎಸ್ ವೈದ್ಯಕೀಯ ಕಾಲೇಜಿನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಎರಡು ಎ.ಆರ್.ಟಿ ಕೇಂದ್ರಗಳಿವೆ ಎಂದರು. 2022-23 ನೇ ಸಾಲಿನಲ್ಲಿ ಅಕ್ಟೋಬರ್ ಅಂತ್ಯದವರೆಗೆ 56,824 ಸಾಮಾನ್ಯ ಜನರು ಪರೀಕ್ಷೆಗೆ ಒಳಗಾಗಿದ್ದು, ಅವರಲ್ಲಿ 217 ಜನರಿಗೆ ಹೆಚ್.ಐ.ವಿ ಸೋಂಕಿತರು ಕಂಡುಬಂದಿರುತ್ತಾರೆ. 16,784 ಗಭೀರ್ಣಿ ಸ್ತ್ರೀಯರನ್ನು ಪರೀಕ್ಷೆಗೊಳಪಡಿಸಿದ್ದು, ಇಬ್ಬರಲ್ಲಿ ಹೆಚ್.ಐ.ವಿ ಸೋಂಕು ಕಂಡುಬಂದಿರುತ್ತದೆ. 2015 ರಿಂದ ವರದಿಯನ್ನು ಪರಿಗಣಿಸಿದರೆ ಹೆಚ್.ಐ.ವಿ ಸೋಂಕು ಕಡಿಮೆಯಾಗುತ್ತಿದೆ. ಆದರೆ ಯುವ ಜನರಲ್ಲಿ ಹೆಚ್ಚು ಏಡ್ಸ್ ಸೋಂಕು ಕಂಡು ಬರುತ್ತಿದೆ. ಯುವ ಜನತೆ ಏಡ್ಸ್ ರೋಗ ಹರಡದಂತೆ ಇರುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಎಂದರು.
ಅಡವಿ ಶೇಷ್ ‘ಹಿಟ್ -2’ ಸಿನಿಮಾ ಡಿಸೆಂಬರ್ 2ಕ್ಕೆ ಬಿಡುಗಡೆ
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ: ಧನಂಜಯ್, ಮಿಮ್ಸ್ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕ ಡಾ. ಸುಭಾಷ್ ಬಾಬು, ಮಿಮ್ಸ ನಿರ್ದೇಶಕ ಡಾ. ಬಿ.ಜಿ ಮಹೇಂದ್ರ, ವಕೀಲರ ಸಂಘದ ಅಧ್ಯಕ್ಷ ನಾಗರಾಜು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಲಿಂಗೇಗೌಡ, ಆರ್.ಸಿ.ಎಚ್. ಅಧಿಕಾರಿ ಡಾ. ಅನಿಲ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.