Friday, June 20, 2025

Latest Posts

ಸಿಸಿಬಿ ವಿಚಾರಣೆಯಲ್ಲಿ ಪಾಲ್ಗೊಂಡ ಸ್ಯಾಂಡಲ್ ವುಡ್ ದೂದ್ ಪೇಡಾ ದಂಪತಿ..!

- Advertisement -

ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ವಿಚಾರದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಇಬ್ಬರೂ ಸಹ ಸಿಲುಕಿರುವ ಬೆನ್ನಲ್ಲೇ, ಇದೀಗ ದೂದ್ ಪೇಡ ದಂಪತಿ ಐಂದ್ರಿತಾ ರೇ ಹಾಗೂ ದಿಗಂತ್ ಗೂ ಸಹ ಡ್ರಗ್ ಜಾಲದ ನಂಟಿದೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬರ್ತಿದೆ.. ಈ ಬಗ್ಗೆ ಈಗಾಗ್ಲೇ ಐಂದ್ರಿತಾ ರೇ ಹಾಗೂ ದಿಗಂತ್ ಗೂ ಸಿಸಿಬಿ ನೋಟಿಸ್ ನೀಡಿತ್ತು.. ಹಾಗಾಗಿ ಇಂದು ಇಬ್ಬರೂ ಸಿಸಿಬಿ ಕಛೇರಿಗೆ ಬಂದು ವಿಚಾರಣೆಯಲ್ಲಿ ಪಾಲ್ಗೊಂಡಿದ್ರು.. ಇಬ್ಬರೂ ಕೂಡ ಇತ್ತೀಚೆಗೆ ಯಾವೆಲ್ಲ ವ್ಯಕ್ತಿಗಳ ಜೊತೆಗೆ ಮೊಬೈಲ್ ನಲ್ಲಿ ಸಂಪರ್ಕ ಹೊಂದಿದ್ರು ಅನ್ನೋದ್ರ ಬಗ್ಗೆ ಸಾಕಷ್ಟು ಮಾಹಿತಿಗಳನ್ನ ಕಲೆ ಹಾಕಿದ್ರು.. ಅದರ ಆಧಾರ ಮೇಲೆ ಐಂದ್ರಿತಾ ಹಾಗೂ ದಿಗಂತ್ ಗೆ ಸಿಸಿಬಿ ಪೊಲೀಸ್ ಅಧಿಕಾರಿಗಳು ಪ್ರಶ್ನೆಗಳನ್ನ ಕೇಳಿ ವಿಚಾರಣೆ ನಡೆಸಲಿದ್ದಾರೆ.. ಈ ವಿಚಾರಣೆ ಬಳಿಕ ಐಂದ್ರಿತಾ ಹಾಗೂ ದಿಗಂತ್ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿಗಳು ಯಾವ ರೀತಿಯ ಕ್ರಮ ತೆಗೆದುಕೊಳ್ಳಲಿದ್ದಾರೆ ಅನ್ನೋದು ಸದ್ಯ ಭಾರೀ ಕುತೂಹಲ ಮೂಡಿಸಿದೆ..

ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss