Tuesday, April 15, 2025

Latest Posts

ಏರ್ಲೈನ್ಸ್ ಆಪರೇಟರ್ ಗಳ ಶೇರು ಮಾರುಕಟ್ಟೆಯಲ್ಲಿ ಏರಿಕೆ..!

- Advertisement -

www.karnatakatv.net : ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಮಾರ್ಗಸೂಚಿಯನ್ನು ಸಡಿಲಗೊಳಿಸಿ ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳ ಫ್ಲೈಟ್ ಗಳ ಸಂಪೂರ್ಣ ಹಾರಾಟಕ್ಕೆ ಅನುಮತಿ ನೀಡಿರೋ ಹಿನ್ನೆಲೆಯಲ್ಲಿ ಇಂದು ಇಂಡಿಯನ್ ಏರ್ಲೈನ್ಸ್ ನ ಆಪರೇಟರ್ ಗಳ ಶೇರು ಮಾರುಕಟ್ಟೆಯಲ್ಲಿ ಜಿಗತಗೊಂಡಿದೆ.

ಏರ್ ಇಂಡಿಗೋ, ಸ್ಪೈಸ್ ಜೆಟ್ ಶೇರುಗಳು ಕ್ರಮಬದ್ಧವಾಗಿ 4.8 ಮತ್ತು 5.9% ಏರಿಕೆಯಾಗಿವೆ. ಇನ್ನು ಕೋವಿಡ್ ಸೋಂಕು ಹರಡೋ ಭೀತಿಯಿಂದಾಗಿ ಕಳೆದ ವರ್ಷದಿಂದ ವಿಧಿಸಲಾಗಿದ್ದ ಲಾಕ್ ಡೌನ್ ಮತ್ತಿತರ ಕಾರಣಗಳಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ತೀವ್ರ ನಷ್ಟ ಎದುರಿಸಿತ್ತು. ಸದ್ಯ ಅಕ್ಟೋಬರ್ 18 ರಿಂದ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ.

- Advertisement -

Latest Posts

Don't Miss