ಕಲ್ಕಿ ಕೃಷ್ಣಮೂರ್ತಿ ಅವರ ಜನಪ್ರಿಯ ಕಾದಂಬರಿಯಾದ ‘ಪೊನ್ನಿಯಿನ್ ಸೆಲ್ವನ್’ನ್ನು ಅದೇ ಹೆಸರಿನಲ್ಲಿ ಮಣಿರತ್ನಂ ಅವರು ಸಿನಿಮಾ ಮಾಡುತ್ತಿದ್ದಾರೆ. ಕಳೆದ ಮೂರು– ನಾಲ್ಕು ವರ್ಷಗಳಿಂದ ಈ ಚಿತ್ರ ಸುದ್ದಿಯಲ್ಲಿದೆ. ಈಗ ಚಿತ್ರತಂಡವು ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಬಹು ಕಾತುರದಿಂದ ಮಣಿರತ್ನಂ ಚಿತ್ರಕ್ಕಾಗಿ ಕಾಯುತ್ತಿರುವವರು ಸೆಪ್ಟೆಂಬರ್ 30ರಂದು ಇದನ್ನು ವೀಕ್ಷಿಸಬಹುದು.
ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಸರಣಿ ಟ್ವೀಟ್‌ಗಳ ಮೂಲಕ ಟ್ವಿಟ್ಟರ್‌ನಲ್ಲಿ ಚಿತ್ರತಂಡ ಬಿಡುಗಡೆ ಮಾಡಿದ್ದು, ಅದರಲ್ಲಿ ಎಲ್ಲಾ ಪ್ರಮುಖ ಪಾತ್ರಧಾರಿಗಳ ಫೋಟೊಗಳ ಜೊತೆಗೆ ಸೆಪ್ಟೆಂಬರ್ 30ರಂದು ಚಿತ್ರ ಬಿಡುಗಡೆ ಎಂಬ ಮಾಹಿತಿ ನೀಡಿದ್ದಾರೆ. ಚಿತ್ರದಲ್ಲಿ ರಾಣಿಯ ಪಾತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ನಟಿಸಿದ್ದು, ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಐಶ್ವರ್ಯಾ ಪಾತ್ರದ ಹೆಸರು ಬಹಿರಂಗಪಡಿಸಿದ್ದು, ನಂದಿನಿದೇವಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಷಾ ಕೃಷ್ಣನ್ ಮೊದಲಾದವರು ನಟಿಸಿದ್ದಾರೆ. ಮಣಿರತ್ನಂ ಅವರ ಸಿನಿ ನಿರ್ಮಾಣ ಸಂಸ್ಥೆ ಮದ್ರಾಸ್ ಟಾಕೀಸ್ ಹಾಗೂ ಅಲ್ಲಿರಾಜ ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ ಬ್ಯಾನರ್‌ನಡಿ ಬಂಡವಾಳ ಹೂಡಲಾಗಿದೆ.
ಈ ಚಿತ್ರದ ಟೈಟಲ್ ಪೋಸ್ಟರ್‌ನ್ನು 2020ರ ಜನವರಿಯಲ್ಲಿ ಬಹಿರಂಗಪಡಿಸಿದ್ದರು. ಅದಾದ ಬಳಿಕ ತಕ್ಷಣ ಥಾಯ್ಲೆಂಡ್‌ನಲ್ಲಿ ಚಿತ್ರದ ಮೊದಲ ಭಾಗದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಬಳಿಕ ಕೊರೊನಾ ಸಾಂಕ್ರಾಮಿಕ ಆತಂಕದಿಂದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.
ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮನ್ ಅವರ ಸಿನಿಮಾಟೋಗ್ರಫಿಯಿದೆ.

