‘ಕೃಷ್ಣ’ ಅಜಯ್ ರಾವ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಫರ್ ದ ಫಸ್ಟ್ ಟೈಮ್ ಒಟ್ಟಿಗೆ ನಟಿಸ್ತಿರೋ ಸಿನಿಮಾ ‘ಲವ್ ಯೂ ರಚ್ಚು’. ಕೆಲ ದಿನಗಳ ಹಿಂದಷ್ಟೇ ಅನೌನ್ಸ್ ಆಗಿದ್ದ ಈ ಸಿನಿಮಾದ ಮುಹೂರ್ತ ನಿನ್ನೆ ಅಜಯ್ ರಾವ್ ಹುಟ್ಟುಹಬ್ಬಕ್ಕೆ ನೆರವೇರಿಸಲಾಗಿದೆ. ವಿಶೇಷ ಅಂದ್ರೆ ಹಾರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಲವ್ ಯೂ ರಚ್ಚು ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ.

ಗುರೂಜಿ ಆರ್ಶೀವಾದಿಂದ ಖುಷಿಯಾಗಿದೆ-ರಚಿತಾ
ರವಿಶಂಕರ್ ಗುರೂಜಿ ಆರ್ಶೀವಾದ ಸಿಕ್ಕಿದ್ದು ಬಹಳ ಖುಷಿಯಾಗಿದೆ. ನಾನು ಇದೇ ಮೊದಲ ಬಾರಿಗೆ ಗುರೂಜಿಯನ್ನು ಭೇಟಿ ಮಾಡಿದ್ದು, ಅಜಯ್ ರಾವ್ ಹುಟ್ಟುಹಬ್ಬ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಇಡೀ ಚಿತ್ರತಂಡದೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಶೀರ್ಷಿಕೆ ಕೇಳಿ ತುಂಬ ಖುಷಿಪಟ್ಟೆ. ಲವ್ ಯೂ ರಚ್ಚು ಸಿನಿಮಾ ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಜೊತೆ ಸಸ್ಪೆನ್ಸ್ ಕೂಡ ಇದೆ ಎಂದು ರಚಿತಾ ರಾಮ್ ಹೇಳಿದ್ದಾರೆ.

ನನಗೆ ದೊಡ್ಡ ಉಡುಗೊರೆ-ಅಜಯ್ ರಾವ್
ನನ್ನ ಹುಟ್ಟುಹಬ್ಬದ ದಿನ ಈ ಸಿನಿಮಾದ ಮಹೂರ್ತ ನೆರವೇರಿರೋದು ನನಗೆ ದೊಡ್ಡ ಉಡುಗೊರೆ. ನನ್ನ ಹುಟ್ಟುಹಬ್ಬದ ಸಮಯದಲ್ಲಿ ಲಾಂಚ್ ಆದ ಮೂರನೇ ಸಿನಿಮಾವಿದು. ಪೋಸ್ಟರ್ ತುಂಬಾ ರೋಮ್ಯಾಂಟಿಕ್ ಆಗಿವೆ ಎಂದು ನಟ ಅಜಯ್ ರಾವ್ ಹೇಳಿದ್ದಾರೆ.

ಇನ್ನೂ ಲವ್ ಯೂ ರಚ್ಚು ಸಿನಿಮಾಕ್ಕೆ ಯುವ ನಿರ್ದೇಶಕ ಶಂಕರ್ ರಾಜ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಜಿ ಸಿನಿಮಾಸ್ ಪ್ರೊಡಕ್ಷನ್ ನಡಿಯಲ್ಲಿ ನಿರ್ದೇಶಕ ಕಂ ನಿರ್ಮಾಪಕ ಗುರುದೇಶ್ ಪಾಂಡೇ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಮಣಿಕಾಂತ್ ಕದ್ರಿ ಮ್ಯೂಸಿಕ್ ಜೊತೆಗೆ ಡೈರೆಕ್ಟರ್ ಶಶಾಂಕ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.



