ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಾನು ಸಿಎಂ ಆಗೇ ಆಗ್ತೀನಿ ಅನ್ನೋ ವಿಶ್ವಾಸದಲ್ಲಿದ್ದಾರೆ. ಮದ್ದೂರು ಕಲ್ಲು ತೂರಾಟದ ಪ್ರಕರಣದ ಬಳಿಕ ಫೈರ್ಬ್ರ್ಯಾಂಡ್ ಖ್ಯಾತಿ, ಯತ್ನಾಳ್ ಹುಮ್ಮಸ್ಸನ್ನ ಮತ್ತಷ್ಟು ಹೆಚ್ಚಿಸಿದೆ. ಸದ್ಯ, ದಾವಣಗೆರೆಯಲ್ಲಿ ನಡೆದ ದಸರಾ ಉತ್ಸವಕ್ಕೆ ಯತ್ನಾಳ್ ಹೋಗಿದ್ರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಲ್ಲದೇ, ನಾನು ಮುಖ್ಯಮಂತ್ರಿಯಾದ್ರೆ ಹಿಂದೂ ವಿರೋಧಿಗಳನ್ನು ಎದುರಿಸಲು, ಪೊಲೀಸರಿಗೆ ಎಕೆ-47 ನೀಡುವ ಭರವಸೆ ನೀಡಿದ್ದಾರೆ.
ಹಿಂದೂಗಳ ವಿರುದ್ಧ ಯಾರಾದರೂ ಕಮಕ್ ಗಿಮಕ್ ಅಂದ್ರೆ, ಗುಂಡು ಹಾರಿಸೋದು ಗ್ಯಾರಂಟಿ. ಹಿಂದೂಗಳ ಮನೆ, ದೇವಸ್ಥಾನ, ಮೆರವಣಿಗೆ ಮೇಲೆ ಕಲ್ಲು ಹೊಡೆಯುತ್ತಾರೆ. ಅವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಬನ್ನಿ ಮಹಾಂಕಾಳಿ, ನರಸಿಂಹ ಸ್ವಾಮಿ, ಆಂಜನೇಯ ಸ್ವಾಮಿ, ಹೀಗೆ ನಮ್ಮ ಯಾವುದೇ ದೇವರುಗಳು ಬರೀಗೈಯಲ್ಲಿ ಕುಳಿತಿಲ್ಲ. ಎಲ್ಲಾ ದೇವರ ಕೈಯಲ್ಲೂ ಆಯುಧಗಳಿವೆ. ಸಮಯ ಬಂದ್ರೆ, ಹಿಂದೂ ಹುಲಿಗಳು ಎದ್ದರೆ ನಡೆಯುವುದೇ ಬೇರೆ ಎಂದು, ವಾರ್ನ್ ಮಾಡಿದ್ರು.
ನಾನೀಗ ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಸಮಗ್ರ ಕರ್ನಾಟಕ ನನ್ನ ವ್ಯಾಪ್ತಿಯಾಗಿದೆ. ಮಂಡ್ಯದ ಮದ್ದೂರಿನಲ್ಲೂ ಹಿಂದುತ್ವದ ಅಲೆ ಎದ್ದಿದೆ. ಸುಮಾರು 20 ಸಾವಿರ ಯುವಕರು, ಸ್ವಯಂಪ್ರೇರಿತರಾಗಿ ಬೈಕ್ ರ್ಯಾಲಿಯಲ್ಲಿ ನನ್ನನ್ನು ಸ್ವಾಗತಿಸಿದ್ರು. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಅತಿಯಾಗಿದೆ. ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಸಿದ್ದರಾಮಯ್ಯ ಇನ್ನು 2 ವರ್ಷ ಹಾರಾಡಲಿ. ಮುಂದೆ ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಮಾಡುವ ಸರ್ಕಾರ ಬಂದೇ ಬರುತ್ತದೆ.
ಸರ್ಕಾರದ ಮಾತು ಕೇಳಬೇಕಾಗಿರೋದು ಪೊಲೀಸರ ಕರ್ತವ್ಯ. ನಮ್ಮ ಸರ್ಕಾರ ಬಂದಾಗ, ಈಗ ಡಿಜೆ ಹಾಕಲು ತೊಂದರೆ ಕೊಟ್ಟವರ ಮನೆ ಮುಂದೆಯೇ 1 ತಾಸು ಡಿಜೆ ಹಾಕುವಂತೆ ಆದೇಶ ಮಾಡುತ್ತೇನೆ. ಹೀಗಂತ ಪರೋಕ್ಷವಾಗಿ ಕಾಂಗ್ರೆಸ್ಸಿಗರಿಗೆ ಯತ್ನಾಳ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.




