Sunday, September 8, 2024

Latest Posts

ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ…! ಏನದರ ಮಹತ್ವ..?!

- Advertisement -

Navaratri special:

ನವರಾತ್ರಿ ಹಬ್ಬದ 9 ದಿನವೂ ಅಖಂಡ ದೀಪವನ್ನು ಅಥವಾ ಅಖಂಡ ಜ್ಯೋತಿಯನ್ನು ಬೆಳಗುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ, ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ. ಕೆಲವು ಕಠಿಣ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ. ಹಾಗಾದರೆ ನವರಾತ್ರಿಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗುವುದು ಹೇಗೆ..? ಅಖಂಡ ಜ್ಯೋತಿಯನ್ನು ಬೆಳಗುವಾಗ ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು..? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ .

ನವರಾತ್ರಿಯಲ್ಲಿ, ಅನೇಕ ಜನರು ಅಖಂಡ ಜ್ಯೋತಿಯನ್ನು ತಮ್ಮ ಮನೆಗಳಲ್ಲಿ ಬೆಳಗಿಸುತ್ತಾರೆ.ಅಖಂಡ ಜ್ಯೋತಿಯು ಸತತವಾಗಿ ನವರಾತ್ರಿ ಆರಂಭವಾದಾಗಲಿಂದ ಮುಗಿಯುವ ವರೆಗೂ 9 ದಿನಗಳ ಕಾಲ ನಿರಂತರವಾಗಿ ಉರಿಯಬೇಕೆಂಬ ನಿಯಮವಿದೆ. ಅಖಂಡ ಜ್ಯೋತಿಯನ್ನು ಬೆಳಗುವುದು ಎಂದರೆ ಸಾಕ್ಷಾತ್ ದುರ್ಗೆಯ ಆರಾಧನೆಗೆ ಮಾಡುವುದಾಗಿದೆ ಎನ್ನಲಾಗಿದೆ .

ಅಖಂಡ ಜ್ಯೋತಿಯನ್ನು ಹಿತ್ತಾಳೆ ಅಥವಾ ಮಣ್ಣಿನ ದೊಡ್ಡ ದೀಪದಲ್ಲಿ ಬೆಳಗಿಸಲಾಗುತ್ತದೆ. 9 ದಿನಗಳ ಕಾಲ ಅದನ್ನು ನಂದಿಸದೆ ಉರಿಯುತ್ತಿರುವ ಹಾಗೆ ನೋಡಿಕೊಳ್ಳಬೇಕು. ಅಖಂಡ ಜ್ಯೋತಿ ದೀಪವನ್ನು ನೆಲದ ಮೇಲೆ ಇಡಬಾರದು ,ಬದಲಾಗಿ ಪೂಜೆಯ ಪೀಠದಲ್ಲಿ ಮಾತೆ ದುರ್ಗೆಯ ವಿಗ್ರಹದ ಮುಂದೆ ಇಡಬೇಕು. ದೀಪಕ್ಕೆ ಹಸುವಿನ ತುಪ್ಪವನ್ನು ಬಳಸಬೇಕು,ತುಪ್ಪವಿಲ್ಲದಿದ್ದರೆ ಶುದ್ಧ ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಕೂಡ ಬಳಸಬಹುದು.ಹಾಗು ದೇವಿಯ ವಿಗ್ರಹದ ಬಲಭಾಗದಲ್ಲಿ ದೀಪವನ್ನು ಇಡಬೇಕು .ಅಖಂಡ ಜ್ಯೋತಿಯನ್ನು ಬೆಳಗಿಸುವ ಮೊದಲು, 9 ದಿನಗಳ ಕಾಲ ದೇವಿಯನ್ನು ಭಕ್ತಿಯಿಂದ ಪೂಜಿಸುವ ಪ್ರತಿಜ್ಞೆಮಾಡಿ ಕೊಳ್ಳಬೇಕು. ಹಾಗು ಬೆಳಗಿಸುವ ಮೊದಲು, ಗಣೇಶ, ಶಿವ ಮತ್ತು ಪಾರ್ವತಿ ದೇವಿಯನ್ನು ಸ್ಮರಿಸಿ ,ನಿಮ್ಮ ಸಂಕಲ್ಪ ನೆರವೇರಲೆಂದು ಪ್ರಾರ್ಥನೆಮಾಡಿಕೊಂಡು ದೀಪವನ್ನು ಬೆಳಗಿಸಬೇಕು .ದೀಪದ ಬತ್ತಿಯನ್ನು ಪದೇ ಪದೇ ಬದಲಾಯಿಸಬಾರದು. ಬತ್ತಿಯು 9 ದಿನಗಳವರೆಗೆ ಆಗುವಷ್ಟು ದೊಡ್ಡದಾಗಿ ಇರಬೇಕು ದೀಪವನ್ನು ಅಗ್ನಿಕೋನದಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುವುದು. ದೀಪವನ್ನು ಪೂರ್ವಾಭಿಮುಖವಾಗಿ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು .ಹಾಗು ಅಶುದ್ಧ ಕೈಗಳಿಂದ ಅಖಂಡ ಜ್ಯೋತಿಯನ್ನು ಮುಟ್ಟಬಾರದು ಮತ್ತು ಮನೆಯಲ್ಲಿ ಎಲ್ಲರೂ ಬ್ರಹ್ಮಚರ್ಯವನ್ನು ಅನುಸರಿಸಬೇಕು.ದೀಪ ಹಚ್ಚಿದ ನಂತರ ಮನೆ ಬೀಗ ಹಾಕಬಾರದು ,ನವರಾತ್ರಿಯ 9 ದಿನಗಳು ಮುಗಿದ ನಂತರ ಅಖಂಡ ಜ್ಯೋತಿಯನ್ನು ನೀವೇ ನಂದಿಸಲು ಪ್ರಯತ್ನಿಸಬೇಡಿ. ಅದು ತನ್ನಷ್ಟಕ್ಕೆ ತಾನೇ ಆರಿಹೋಗಲು ಬಿಡಿ.

ಅಖಂಡ ಜ್ಯೋತಿ ಬೆಳಗುವುದರಿಂದ ಆಗುವ ಲಾಭಗಳು ;
. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ .
. ನಕಾರಾತ್ಮಕ ಶಕ್ತಿ ನಾಶವಾಗುತ್ತದೆ
. ಶನಿಯ ಮಹಾದಶಾದಿಂದ ಮುಕ್ತಿ ಸಿಗುತ್ತದೆ
. ವಾಸ್ತು ದೋಷಗಳಿಂದ ಕೂಡ ಪರಿಹಾರ ಸಿಗುತ್ತದೆ.

ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಪ್ರಯೋಜನಗಳೇನು…?

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…!

ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!

 

- Advertisement -

Latest Posts

Don't Miss