Friday, November 22, 2024

Latest Posts

Akshata Murty: ಸುಧಾಮೂರ್ತಿ ಮಗಳು ಫುಲ್ ಟ್ರೋಲ್! : ಅಕ್ಷತಾ ಡ್ರೆಸ್‌ ಮೇಲೆ ಎಲ್ಲರ ದೃಷ್ಟಿ!

- Advertisement -

ಬ್ರಿಟನ್ ಪಾರ್ಲಿಮೆಂಟ್​ ಚುನಾವಣೆಯಲ್ಲಿ ರಿಷಿ ಸುನಕ್​​​ ನೇತೃತ್ವದ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಇನ್ನು ಇದುವರೆಗೆ ಪ್ರಧಾನಿಯಾಗಿದ್ದ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌ ಅವರು ರಾಜೀನಾಮೆ ನೀಡಿದ್ದಾರೆ. ರಿಷಿ ರಾಜೀನಾಮೆ ಬಳಿಕ ವಿದಾಯದ ಭಾಷಣ ಮಾಡುವಾಗ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಧರಿಸಿದ್ದ ಡ್ರೆಸ್‌ ಹಾಗೂ ಅದರ ಮೌಲ್ಯದ ಕುರಿತು ಭಾರೀ ಚರ್ಚೆ ಶುರುವಾಗಿದೆ.

ಸೋಲಿನ ಬೆನ್ನಲ್ಲೇ ಪ್ರಧಾನಿ ಹುದ್ದೆಯನ್ನು ತೊರೆದಿರುವ ರಿಷಿ ಸುನಕ್​​, ಲಂಡನ್ನಿನ ಡೌನಿಂಗ್ ಸ್ಟ್ರೀಟ್​​ನಲ್ಲಿ ವಿದಾಯದ ಭಾಷಣ ಮಾಡಿದರು. ಈ ವೇಳೆ ಭಾಗಿಯಾಗಿದ್ದ, ಸುನಕ್ ಪತ್ನಿ ಅಕ್ಷತಾ ಮೂರ್ತಿಯವರು ಪತಿಯ ಹಿಂದೆ ಶಾಂತವಾಗಿ ನಿಂತು ಭಾಷಣ ಕೇಳುತ್ತಿರುವುದು ಕಂಡುಬಂತು. ಆದರೆ ಈ ವೇಳೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರವಾಗಿ ಅವರೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಕೂಡ ಆಗಿದ್ದಾರೆ.

ಅಕ್ಷತಾ ಅವರು ಕಡು ನೀಲಿ, ಬಿಳಿ ಮತ್ತು ಕೆಂಪು ಬಣ್ಣವಿರುವ ಉಡುಪನ್ನು ಧರಿಸಿದ್ದರು. ಸುನಕ್‌ ಅವರ ಭಾಷಣದ ಸಮಯದಲ್ಲಿ ಎಲ್ಲರ ಕಣ್ಣುಗಳು ಅಕ್ಷತಾ ಉಡುಪಿನತ್ತ ನೆಟ್ಟಿದೆ. ಈ ಡ್ರೆಸ್ ಬೆಲೆ ಕೇಳಿ ಕೆಲವರು ಶಾಕ್ ಆಗಿದ್ದಾರೆ. ಯಾಕೆಂದರೆ ಅದರ ಬೆಲೆ 395 ಪೌಂಡ್ ಅಂದರೆ ಬರೋಬ್ಬರಿ 42 ಸಾವಿರ ರೂಪಾಯಿ ಆಗಿದೆ. ಹಾಗಾದ್ರೆ ಈ ಡ್ರೆಸ್‌ನಲ್ಲಿ ವಿಶೇಷವೇನಿತ್ತು? ಟ್ರೋಲ್‌ ಆಗುತ್ತಿರುವುದಕ್ಕೆ ಕಾರಣವೇನು? ಎಂಬುದನ್ನು ನೋಡೋದಾದ್ರೆ… ವಾಸ್ತವವಾಗಿ ನೀಲಿ, ಬಿಳಿ ಮತ್ತು ಕೆಂಪು ಬಣ್ಣಗಳು ಬ್ರಿಟಿಷ್ ಧ್ವಜವನ್ನು ಹೋಲುತ್ತವೆ. ಜೊತೆಗೆ ಒಂದು ಛತ್ರಿಯನ್ನು ಹಿಡಿದುಕೊಂಡು ಅವರು ತುಂಬಾ ಗಂಭೀರವಾಗಿ ನಿಂತಿದ್ದರು. ಅವರು ಧರಿಸಿದ್ದ ಡ್ರೆಸ್​​ ನೋಡಿದ ನೆಟ್ಟಿಗರು, ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.

ಅಕ್ಷತಾ ಧರಿಸಿರುವ ಡ್ರೆಸ್‌ ಕೆಂಪು, ನೀಲಿ ಮತ್ತು ಬಿಳಿ ಪಟ್ಟೆಗಳನ್ನು ಹೊಂದಿತ್ತು, ಅವುಗಳು ಟೋರಿ ಧ್ವಜದ ಬಣ್ಣಗಳಾಗಿವೆ. ಹೀಗಿರುವಾಗ ಅಕ್ಷತಾ ಮೂರ್ತಿ ಈ ಡ್ರೆಸ್ ತೊಡುವ ಮೂಲಕ ಟೋರಿಯ ಸದ್ಯದ ಪರಿಸ್ಥಿತಿಯನ್ನು ಬಿಂಬಿಸಿದ್ದಾರೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.
ದುಬಾರಿ ಡ್ರೆಸ್ ಮೂಲಕ ಇನ್ಫೋಸಿಸ್ ನಾರಾಯಣ್ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳ ಮಗಳು ಹಾಗೂ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿಯವರು ಟ್ರೋಲ್ ಆಗುತ್ತಿದ್ದಾರೆ. ಕೆಲವರು ಅವರು ಧರಿಸಿದ್ದ ಬಟ್ಟೆಯ ಬಣ್ಣಗಳ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಡ್ರೆಸ್​​ನ ಮಾದರಿಯ ಬಗ್ಗೆ ಗೇಲಿ ಮಾಡಿದ್ದಾರೆ.

- Advertisement -

Latest Posts

Don't Miss