ಅತಿ ಹೆಚ್ಚು ತೆರಿಗೆ ಪಾವತಿಸಿ ಅವಾರ್ಡ್ ಪಡೆದ ತಲೈವಾ, ಅಕ್ಷಯ್..!
ತಲೈವಾ..ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ರಿಲೀಸಾಗುತ್ತೆ ಅಂದ್ರೆ ಅಲ್ಲಿ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸ್ತಾರೆ, ಸೆಲೆಬ್ರೇಟ್ ಮಾಡ್ತಾರೆ. ಏಜ್ ಈಸ್ ಜಸ್ಟ್ ಎ ನಂಬರ್ ಅನ್ನುವಂತೆ ನಟ ರಜನಿಕಾಂತ್ ಈಗಲೂ ಸಹ ಸೂಪರ್ ಹಿಟ್ ಚಿತ್ರಗಳನ್ನ ಕೊಡುತ್ತಾ ತಮ್ಮ ಎಲ್ಲಾ ಅಭಿಮಾನಿಗಳನ್ನ ರಂಜಿಸುತ್ತಲೇ ಇದ್ದಾರೆ.
ಇದ್ರ ಬೆನ್ನಲ್ಲೇ ತಲೈವಾ ಫ್ಯಾನ್ಸ್ಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು, ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟಿರೋ ಟಾಪ್ ಒನ್ ಸ್ಟಾರ್ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್ ಆಗಿದ್ದು, ಆದಾಯ ತೆರಿಗ ಇಲಾಖೆ ಸನ್ಮಾನಿಸಿದೆ. ಎಲ್ರಿಗೂ ಗೊತ್ತಿರುವಂತೆ ತಮಿಳುನಾಡಿನಲ್ಲಿ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಂದ್ರೆ ರಜನಿಕಾಂತ್, ಹೀಗಾಗಿ ತಎರಿಗೆ ಕಟ್ಟುವ ವಿಚಾರದಲ್ಲೂ ರಜನಿ ಮುಂದಿದ್ದಾರೆ. ಅಲ್ಲದೇ ತೆರಿಗೆ ಕಟ್ಟುವ ವಿಚಾರದಲ್ಲಿ ತಲೈವಾ ಪ್ರಾಮಾಣಿಕವಾಗಿದ್ದು, ಇದನ್ನ ಮೆಚ್ಚಿ ಆದಾಯ ತೆರಿಗೆ ಇಲಾಖೆ ನಟ ರಜನಿಕಾಂತ್‌ಗೆ ಅವಾರ್ಡ್ ನೀಡಿದ್ದಾರೆ. ತಂದೆಯ ಪರವಾಗಿ ಮಗಳು ಐಶ್ವರ್ಯಾ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇತ್ತ ಬಾಲಿವುಡ್‌ನಲ್ಲೂ ಅತಿ ಹೆಚ್ಚು ತೆರಿಗೆ ಕಟ್ಟಿ ಅವಾರ್ಡ್ ಪಡೆದುಕೊಂಡಿದ್ದಾರೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್. ಬಾಲಿವುಡ್‌ನಲ್ಲಿ ತಮ್ಮ ಪ್ರತಿ ಸಿನಿಮಾಗೂ ಕೋಟಿ ಕೋಟಿ ಸಂಭಾವನೆ ಪಡೆಯೋ ನಟ ಅಕ್ಷಯ್ ಕುಮಾರ್, ಆದಾಯ ತೆರಿಗೆ ಇಲಾಖೆ ಗೌರವ ಸಲ್ಲಿಸಿದ್ದಾರೆ.
ಭಾರತದ ಶ್ರೀಮಂತ ನಟರಲ್ಲಿ ಒಬ್ಬರಾಗಿರೋ ನಟ ಅಕ್ಷಯ್ ಕುಮಾರ್, ತೆರಿಗೆ ಕಟ್ಟುವ ವಿಚಾರದಲ್ಲಿ ಅತಿ ಹೆಚ್ಚು ಪ್ರಾಮಾಣಿಕತೆಯನ್ನ ತೋರಿದ್ದಾರೆ. ಸದ್ಯ ಅಕ್ಕಿ ಇಂಗ್ಲೆAಡ್‌ನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋದ್ರಿಂದ , ತಮ್ಮ ಟೀಂನವರೇ ಈ ಅವಾರ್ಡ್ ಹಆಗೂ ಮೆಚ್ಚುಗೆ ಪತ್ರವನ್ನ ಸ್ವೀಕರಿಸಿದ್ದಾರೆ. ಸದ್ಯ ಅಕ್ಕಿ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಸಖತ್ ವೈರಲ್ ಆಗ್ತಿದೆ.