Udupi News: ಉಡುಪಿಯಲ್ಲಿ ಮದ್ಯ ಪ್ರಿಯರು ಬಜೆಟ್ ಮದ್ಯ ದರ ಏರಿಕೆ ವಿರುದ್ಧವಾಗಿ ವಿಭಿನ್ನ ಪ್ರತಿಭಟನೆಯನ್ನು ಮಾಡಿದ್ದಾರೆ. ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು.
ನಾಗರಿಕ ಸಮಿತಿ ನಿತ್ಯಾನಂದ ಒಳಕಾಡು ಗೋವಿಂದ ಶೆಟ್ಟಿ ಒಳಕಾಡು ಈ ಬಗ್ಗೆ ಮಾತನಾಡಿ ಮದ್ಯಪ್ರಿಯರಿಗೂ ಸರಕಾರ ಬೆಳಗ್ಗೆ 90 ಮಿಲಿ ಸಂಜೆ 90 ಮಿಲಿ ಉಚಿತವಾಗಿ ಮದ್ಯವನ್ನು ನೀಡಬೇಕು, ಸರಕಾರಕ್ಕೆ ಅಧಿಕವಾಗಿ ಸುಂಕ ನೀಡುತ್ತಿರುವವರೇ ಮದ್ಯ ಪ್ರಿಯರು ಎಂಬುವುದಾಗಿ ತಮ್ಮ ಬೇಡಿಕೆ ಮುಂದಿಟ್ಟರು.
ಮದ್ಯಪ್ರಿಯರಿಗೆ ಸರಕಾರ ಅನ್ಯಾಯ ಮಾಡಿದೆ. ಒಂದೋ ಮದ್ಯ ಉಚಿತ ಕೊಡಿ ಇಲ್ಲವೇ ಮದ್ಯ ನಿಲ್ಲಿಸಿ ಎಂಬುವುದಾಗಿ ಬೇಡಿಕೆ ಮುಂದಿಟ್ಟು ವಿಭಿನನ್ನ ಪ್ರತಿಭಟನೆ ಮಾಡಿದರು.
Ashwath Narayan : ವೇಣುಗೋಪಾಲ್ ಹತ್ಯೆಗೆ ಸರ್ಕಾರವೇ ನೇರ ಹೊಣೆ : ಅಶ್ವತ್ಥ್ ನಾರಾಯಣ್
Crocodiles : ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ…! ಮುಂದೇನಾಯ್ತು..?!