www.karnatakatv.net: ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತಕ್ಕೀಡಾಗಿ ನಿಧನರಾದ ಸುದ್ದಿ ತಿಳಿದು ಇಡೀ ಕರುನಾಡು ಶೋಕ ಸಾಗರದಲ್ಲಿ ಮುಳುಗಿದೆ. ನಟನ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸರ್ಕಾರ ಅಂತಿಮ ದರ್ಶನ ವ್ಯವಸ್ಥೆಗೆ ಕ್ರಮ ಕೈಗೊಂಡಿದೆ.
ಮೇರು ನಟ, ತಮ್ಮ ತಂದೆ ಡಾ. ರಾಜ್ ಕುಮಾರ್ ರವರ ಸಮಾಧಿ ಇರುವ ಸ್ಥಳ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಕಂಠೀರವ ಸ್ಟುಡಿಯೋ ಬಳಿ ಸಕಲ ಸಿದ್ಧತೆ ಕೈಗೊಂಡಿದ್ದು, ಅಲ್ಲಿಗೆ ಆಗಮಿಸುವ ಅಪಾರ ಅಭಿಮಾನಿಗಳನ್ನು ನಿಯಂತ್ರಿಸೋ ಸಲುವಾಗಿ ಪೊಲೀಸರನ್ನ ನಿಯೋಜಿಸಲಾಗಿದೆ. ಈಗಾಗಲೇ ಅಪಾರ ಸಂಖ್ಯೆಯಲ್ಲಿ ವಿಕ್ರಂ ಆಸ್ಪತ್ರೆಯತ್ತ ದೌಡಾಯಿಸುತ್ತಿರೋ ಅಭಿಮಾನಿಗಳು ನೆಚ್ಚಿನ ನಟನ ಅಗಲಿಕೆಗೆ ಕಂಬನಿ ಧಾರೆ ಸುರಿಸುತ್ತಿದ್ದಾರೆ.




