Saturday, April 19, 2025

Latest Posts

ಅಣ್ಣಿಗೇರಿ ಪುರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವ ಆರೋಪ, ಪ್ರತಿಭಟನೆ

- Advertisement -

Annigeri news: ಅಣ್ಣಿಗೇರಿ: ಅಣ್ಣಿಗೇರಿ ಪುರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ನೇರವಾಗಿ ಪುರಸಭೆಯ ಅಧ್ಯಕ್ಷರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಪುರಸಭೆಯ ಕೆಲ ಸದಸ್ಯರು ಪ್ರತಿಭಟನೆ ನಡೆಸಿದರು.

ಈ ವೇಳೆ ಅಧ್ಯಕ್ಷೆ ಮೆಹಬೂಬಿ ನವಲಗುಂದ ಅವರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಅಧ್ಯಕ್ಷರು ಹಣ ಪಡೆದು ಲೇಔಟ್ ಅಭಿವೃದ್ಧಿಗೆ ಅನುಮತಿ ನೀಡಿದ್ದಾರೆಂದು ಆರೋಪಿಸಿದರು.

ಇನ್ನು ಸಾಮಾನ್ಯ ಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆ ಬಗ್ಗೆ ಚರ್ಚೆಗಳೇ ನಡೆದಿಲ್ಲ. ಕೇವಲ ದುಡ್ಡು ತಿನ್ನಲು ಠರಾವು ಪಾಸು ಮಾಡುವ ವಿಷಯಗಳನ್ನು ಮಾತ್ರ ಸಭೆಯಲ್ಲಿ ಚರ್ಚಿಸಲಾಗಿದೆ. ಮಳೆಯಾದರೇ ಸಾಕು ಪಟ್ಟಣದ ರಸ್ತೆ, ಗಟಾರು ಸಮಸ್ಯೆ ಹೇಳತೀರದಾಗಿವೆ. ಪಟ್ಟಣದಲ್ಲಿ ಯಾವೊಂದು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತಾಗಿ ಕಾನೂನು ಹೋರಾಟ ಮಾಡುವುದಾಗಿ ಪ್ರತಿಭಟನಾನಿರತ ಸದಸ್ಯರು ತಿಳಿಸಿದರು.

ಪ್ರತಿಭಟನೆಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷೆ ಗಂಗಾ ಕರೆಣ್ಣವರ, ಸದಸ್ಯರಾದ ನಾಗರಾಜ್ ದಳವಾಯಿ, ಇಮಾಮಸಾಬ ದರವಾನಿ, ರೆಹಮಾನಸಾಬ ಹೊರಗಿನಮನಿ, ಬಣವಣ್ಣೆವ್ವ ದಿಡ್ಡಿ, ಅಮೀನಾಬೇಗಂ ಬಾರಿಗಿಡದ, ರಜೀಯಾಬೇಗಂ ರೊಕ್ಕದಕಟ್ಟಿ, ಶೋಭಾ ಗೋಲ್ಲರ ಇದ್ದರು.

- Advertisement -

Latest Posts

Don't Miss