ಚಾನೆಲ್ ಮೇಲೆ ಆರೋಪ :ಎಡವಟ್ಟು ಮಾಡಿಕೊಂಡ್ರಾ ಜಾನ್ವಿ ?

ಬಿಗ್ ಬಾಸ್ ಮನೆಯಲ್ಲಿರೋ ಜಾನ್ವಿ ಒಂದಲ್ಲ ಒಂದು ಎಡವಟ್ಟನ್ನ ಮಾಡ್ಕೊಂಡು ನೋಡುಗರ ಕೆಂಗಣ್ಣಿಗೆ ಗುರಿಯಾಗ್ತಿದಾರೆ, ಕಲರ್ಸ್ ಕನ್ನಡ ವಾಹಿನಿಯ ಶೋಗಳಿಗೆ ಆಂಕರಿಂಗ್ ಮಾಡಿದ್ದ ಜಾಹ್ನವಿ ಇದೀಗ ಅದೇ ಚಾನೆಲ್‌ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ಚಾನೆಲ್‌ ಕಡೆಯಿಂದ ಸ್ಪಂದನಾ ಸೋಮಣ್ಣಗೆ ಪುಶ್‌ ಸಿಗುತ್ತಿದೆ ಅಂತ ಆರೋಪಿಸಿದ ಜಾಹ್ನವಿ ಮೇಲೆ ವೀಕ್ಷಕರು ಗರಂ ಆಗಿದ್ದಾರೆ.

ಮೊದಲು ನ್ಯೂಸ್‌ ಆಂಕರ್‌ ಆಗಿದ್ದವರು ಜಾಹ್ನವಿ. ಆನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದ ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಪುತ್ರನೊಂದಿಗೆ ಸ್ಪರ್ಧಿಸಿದರು. ಬಳಿಕ ಇದೇ ಚಾನೆಲ್‌ನಲ್ಲಿ ಪ್ರಸಾರವಾದ ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋನಲ್ಲಿ ಜಾಹ್ನವಿ ರನ್ನರ್ ಅಪ್ ಆದರು. ಕಲರ್ಸ್ ಕನ್ನಡ ವಾಹಿನಿ ಜೊತೆಗೆ ಕೆಲಸ ಮಾಡುತ್ತಿದ್ದ ಜಾಹ್ನವಿ ‘ಸವಿರುಚಿ’ ಮುಂತಾದ ಶೋಗಳ ಆಂಕರಿಂಗ್‌ ಸಹ ಮಾಡಿದ್ದರು. ಇದೀಗ ‘ಬಿಗ್ ಬಾಸ್’ ಮನೆಯಲ್ಲಿ ಲಾಕ್ ಆಗಿದ್ದಾರೆ. ಹೀಗಿರುವಂತ ಜಾಹ್ನವಿ ಈಗ ಕಲರ್ಸ್ ಕನ್ನಡ ವಾಹಿನಿ ಮೇಲೆಯೇ ಗಂಭೀರ ಆರೋಪ ಹೊರಿಸಿದ್ದಾರೆ…

ಚಾನೆಲ್‌ ವತಿಯಿಂದ ಸೂರಜ್ – ರಾಶಿಕಾ ಮತ್ತು ಸ್ಪಂದನಾಗೆ ಪುಶ್‌ ಸಿಗುತ್ತಿದೆ ಎಂದು ಜಾಹ್ನವಿ ಬೆಟ್ಟು ಮಾಡಿ ತೋರಿಸಿದ್ದಾರೆ. ಇದನ್ನ ಗಮನಿಸಿದ ವೀಕ್ಷಕರು ಟ್ರೋಲ್ ಮಾಡಿ, ಕಾಮೆಂಟ್ ಮಾಡಿಯೇ ಜಾಹ್ನವಿಗೆ ಕಿವಿ ಹಿಂಡುತ್ತಿದ್ದಾರೆ. ಜಾಹ್ನವಿ ತಮ್ಮ ಹಳ್ಳವನ್ನ ತಾವೇ ತೋಡಿಕೊಳ್ಳುತ್ತಿದ್ದಾರೆ, ವೀಕೆಂಡ್‌ನಲ್ಲಿ ಜಾಹ್ನವಿಗೆ ಹಬ್ಬ ಕಾದಿದೆ ಎಂದು ವೀಕ್ಷಕರು ತಮ್ಮ ಅಭಿಪ್ರಾಯವನ್ನ ಹೊರಹಾಕುತ್ತಿದ್ದಾರೆ.

ಅಷ್ಟಕ್ಕೂ ಜಾನ್ವಿ ಏನಂದ್ರು ಅಂದ್ರೆ ರಾಶಿಕಾ – ಸೂರಜ್‌ದು ಏನೋ ಟ್ರ್ಯಾಕ್ ನಡೆಯುತ್ತಿದೆ, ಚಾನೆಲ್‌ನವರು ನಿಮ್ಮಿಬ್ಬರನ್ನ ಎಲಿಮಿನೇಟ್ ಆಗೋಕೆ ಬಿಡಲ್ಲ ಅನ್ನೋ ಅರ್ಥದಲ್ಲಿ ಮಾತಾಡುದ್ರು, ಇನ್ನು ಸ್ಪಂದನ ಬಗ್ಗೆ ಮಾತಾಡಿ ಆಕೆಗೆ “ಮಾತಾಡೋಕೆ ಬರಲ್ಲ, ಟಾಸ್ಕ್‌ನಲ್ಲೂ ಇಲ್ಲ, ಆದರೂ ಸೇವ್ ಆಗ್ತಿದ್ದಾಳೆ. ಸೀರಿಯಲ್ ಹೀರೋಯಿನ್ ಆಗಿ ಫ್ಯಾನ್ ಫಾಲೋವಿಂಗ್‌ನಿಂದ ಉಳ್ಕೊಳ್ತಿದ್ದಾರೆ” ಎಂದು ಆರೋಪಿಸಿದರು.‘’ಇದು ವೀಕೆಂಡ್‌ನಲ್ಲಿ ಟಾಪಿಕ್ ಬಂದು, ಚಾನೆಲ್‌ ವತಿಯಿಂದ.. ಇವರು ಹೋಗ್ತಾರೆ, ಹೋಗಲ್ಲ ಅಂದ್ರೆ, ನಿಮ್ಮ ಹಳ್ಳವನ್ನ ನೀವೇ ತೋಡಿಕೊಳ್ಳಬೇಡಿ’’ ಎಂದು ಸೂರಜ್‌ ಸಹ ಜಾಹ್ನವಿಗೆ ತಿಳಿಹೇಳಿದರು.ಇದನ್ನೆಲ್ಲಾ ನೋಡ್ತಿರೋ ಅಭಿಮಾನಿಗಳಿಗೆ ಏನ್ ಅನ್ನಿಸಿರಬಹುದು , ಟಿವಿ ಮುಂದೆ ಕೂತು ನಿಮ್ಮನ್ನೆಲ್ಲ ನೋಡಿ ,ವೋಟ್ ಹಾಕಿ ನಿಮ್ಮನ್ನೆಲ್ಲ ಸೇವ್ ಮಾಡ್ತಿರೋ ನಾವ್ ಲೆಕ್ಕಕ್ಕೆ ಇಲ್ವಾ ಹಂಗಿದ್ರೆ , ಅಂತ ಅನ್ನಿಸಿರೋದ್ರಲ್ಲಿ ತಪ್ಪೇ ಇಲ್ಲ,

ಹೊರಗಡೆ ಇರುವವರಿಗೆ ನೀವು ಹೇಳಿರುವುದು ಸತ್ಯ ಎನಿಸಬಹುದು. ಆದರೆ, ಸ್ಪಂದನಾ ಮಾಡಿದ್ದು ಒಂದು ಧಾರಾವಾಹಿ. ಹಾಗೇ ನೀವು ಚಾನೆಲ್ ಹಿರಿ ಮಗಳು ಇದ್ದ ಹಾಗೆ. ನಮ್ಮಮ್ಮ ಸೂಪರ್ ಸ್ಟಾರ್ ಮಾಡಿದ್ರಿ. ಆಂಕರ್ ಆಗಿದ್ರಿ. ಈಗ ನೇರವಾಗಿ ಬಿಗ್ ಬಾಸ್ ಟೀಮ್ ಮೇಲೆ ಆರೋಪ ಮಾಡಿದ್ದೀರಾ.‘’ಜಾಹ್ನವಿ ವೀಕೆಂಡ್‌ ಕ್ಲಾಸ್‌ಗೆ ರೆಡಿ ಇರಿ, ಅಂತಿದ್ದಾರೆ ಬಿಗ್ ಬಾಸ್ ಅಭಿಮಾನಿಗಳು.

ವರದಿ : ಗಾಯತ್ರಿ

About The Author