Wednesday, October 15, 2025

Latest Posts

ಅಲ್ಲು ಅರ್ಜುನ್ ಭಾವುಕ ಯಾಕೆ?

- Advertisement -

ಪುಷ್ಪ ದಿ ರೈಸ್ ಮೊದಲ ಭಾಗದಲ್ಲಿ ಸದ್ದು ಮಾಡಿದ್ದ ಅಲ್ಲು ಅರ್ಜುನ್ ಈಗ ಪುಷ್ಪ ದಿ ರೂಲ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಚಿತ್ರದ ಶೂಟಿಂಗ್ ಹಂತ ಹಂತವಾಗಿ ಪೂರ್ತಿಯಾಗುತ್ತಿದೆ. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ ಸುಕುಮಾರ್, ಇದೀಗ ವೈಜಾಗ್ ಶೆಡ್ಯೂಲ್ ಅನ್ನು ಕೂಡ ಮುಗಿಸಿದ್ದಾರಂತೆ.

ಪುಷ್ಪ 2 ಚಿತ್ರದ ಶೂಟಿಂಗ್ ವೈಜಾಗ್‌ನಲ್ಲಿ ಆರಂಭವಾಗಿತ್ತು. ಈ ಶೆಡ್ಯೂಲ್ ನಲ್ಲಿ ಚಿತ್ರದ ಹಲವು ಪ್ರಮುಖ ದೃಶ್ಯಗಳ ಜೊತೆಗೆ ಇಂಟ್ರೊ ಸಾಂಗ್ ಅನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ
ಈ ಶೆಡ್ಯೂಲ್ ಮುಗಿಯುತ್ತಿದ್ದಂತೆ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ.

ಅಲ್ಲು ಅರ್ಜುನ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ “ಧನ್ಯವಾದ ವೈಜಾಗ್” ಎಂದು ಪೋಸ್ಟ್ ಅಪ್ಡೇಟ್ ಮಾಡಿದ್ದಾರೆ.

- Advertisement -

Latest Posts

Don't Miss