Friday, November 22, 2024

Latest Posts

Amazon: ಹೇಳದೆ ಕೇಳದೆ ಅಮೇಜಾನ್ ನಿಂದ ಮನೆ ಬಾಗಿಲಿಗೆ ವಸ್ತುಗಳು.

- Advertisement -

ಅಂತರಾಷ್ಟ್ರೀಯ ಸುದ್ದಿ: ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಗಾದೆ ನಿಮಗೆಲ್ಲ ಗೊತ್ತಿರಬಹುದು ಇಲ್ಲಿ ನಾವು ಹೇಳುವ ಕಥೆ ಕೂಡಾ ಹಾಗೆಯೆ ಇದೆ. ನಾವು ಅಮೇಜಾನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದರೂ ಸರಿಯಾದ ಸಮಯಕ್ಕೆ ಕಳುಹಿಸದ ಡೆಲವರಿ ಬಾಯ್ಸ್ ಗಳು ಏನು ಆರ್ಡರ್ ಮಡದೇ ಇದ್ದರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತಗಳ್ನು ಹೇಳದೆ ಕೇಳದೆ ಮನೆ ಬಾಗಿಲಲ್ಲಿ ಬಂದು ಇಟ್ಟು ಹೋಗುವುದೆಂದರೆ ಏನು .ಅಮೇರಿಕಾದಲ್ಲಿಇಂತಹದೊಂದು ಘಟನೆ ನಡೆದಿದೆ.

ಅಮೇರಿಕಾದ ವರ್ಜಿನಿಯಾದ ಸಿಂಡಿ ಸ್ಮಿತ್ ತನ್ನ ಮನೆಯ ಮುಂದೆ 100 ಪಾರ್ಸೆಲ್‌ಗಳನ್ನು ನೋಡಿ ಒಂದು ಕ್ಷಣ ಅಚ್ಚರಿಗೆ ಒಳಪಟ್ಟಳು ಈ ಪಾರ್ಸೆಲ್‌ಗಳು ಫೆಡ್‌ಎಕ್ಸ್, ಅಮೆಜಾನ್ ಮತ್ತು ಇತರ ವಿತರಣಾ ಕಂಪನಿಗಳಿಂದ ಬಂದಿವೆ. ಬಾಗಿಲಿನ ಮುಂದೆ ಪಾರ್ಸೆಲ್‌ಗಳನ್ನು ರಾಶಿ ಹಾಕಲಾಗಿತ್ತು. ಆಕೆ ಅವುಗಳನ್ನು ಪರಿಶೀಲಿಸಿದಾಗ ಪಾರ್ಸೆಲ್‌ಗಳಲ್ಲಿರುವ ವಿಳಾಸ ಅವಳದೇ ಆಗಿತ್ತು.

ಪಾರ್ಸೆಲ್‌ಗಳನ್ನು ಓಪನ್ ಮಾಡಿದರೆ, 1,000 ಹೆಡ್‌ಲ್ಯಾಂಪ್‌ಗಳು, 800 ಅಂಟು ಗನ್‌ಗಳು, ಮಕ್ಕಳ ಬೈನಾಕ್ಯುಲರ್‌ಗಳು ಇವೆ. ಶ್ವಾನಾಲಯ, ಪಶು ಚಿಕಿತ್ಸಾಲಯಗಳಿಗೆ ತೆರಳಿ ಹೆಡ್‌ಲ್ಯಾಂಪ್‌ಗಳನ್ನು ಸಹ ವಿತರಿಸಿದರು. ನಂತರ ತನಗೆ ಬೇಡದ್ದನ್ನು ಎಲ್ಲರಿಗೂ ಹಂಚಿದಳು. ಆದರೆ ಅಷ್ಟೊಂದು ಪಾರ್ಸೆಲ್ ಗಳನ್ನು ಏಕೆ ಕಳುಹಿಸಲಾಗಿದೆ ಎಂದು ವಿಚಾರಿಸಿದಾಗ ಹಗರಣದ ಭಾಗವಾಗಿರುವುದು ಬೆಳಕಿಗೆ ಬಂದಿದೆ.

ಇನ್ನು ಈ ಹಗರಣದಲ್ಲಿ ಇ-ಕಾಮರ್ಸ್ ಮಾರಾಟಗಾರರು ಯಾವುದೇ ವಿಳಾಸಕ್ಕೆ ಪಾರ್ಸೆಲ್‌ಗಳನ್ನು ತಲುಪಿಸುತ್ತಾರೆ. ಅವುಗಳ ಮೇಲೆ ನಕಲಿ ರಿವೀವ್​ಗಳನ್ನು ಪೋಸ್ಟ್ ಮಾಡಲಾಗುತ್ತದೆ. ತಮ್ಮ ಉತ್ಪನ್ನಗಳ ರೇಟಿಂಗ್‌ಗಳನ್ನು ಹೆಚ್ಚಿಸಲು ಅವರು ಇದನ್ನು ಮಾಡುತ್ತಾರೆ. ರೇಟಿಂಗ್‌ಗಳಿಗಾಗಿ ಉತ್ಪನ್ನಗಳನ್ನು ಉಚಿತವಾಗಿ ವಿತರಣೆ ಮಾಡುತ್ತಾರೆ.

ಇದರಲ್ಲಿ ಯಾವುದೆ ರೀತಿಯ ಅಹಿತಕರ ಘಟನೆ ನಡೆಯುವ ವಸ್ತಗಳು ಇರಲಿಲ್ಲ ಸರಿಹೋಯಿತು ಒಂದು ವೇಳೆ ಇದ್ದಿದ್ದರೆ ಏನಾಗಬೇಡ ನಿಮಗೂ ಈ ರೀತಿಯ ವಸ್ತಗಳು ಬರಬಹುದು ಪುಕ್ಕಟ್ಟೆ ಬಂದಿದೆಯೆಂದು ಅನುಭವಿಸಲು ಹೊಗಬೇಡಿ ತಾಳ್ಮೆಯಿಂದ ಪರಿಶೀಲಿಸಿ.

Japan: ಜಾದು ಎಂಬಂತೆ ನಾಯಿಯಂತಾದ ಮನುಷ್ಯ

Apple mobile: ಐಫೋನ್ ನಿಂದ ಕೊಳೆವೆ ಬಾವಿಯಲ್ಲಿ ಬಿದ್ದವನ ರಕ್ಷಣೆ

Gender : ರಷ್ಯಾದಲ್ಲಿ ಇನ್ನುಮುಂದೆ ಲಿಂಗ ಪರಿವರ್ತನೆ ಕಾನೂನು ಬಾಹಿರ

- Advertisement -

Latest Posts

Don't Miss