Sunday, December 22, 2024

Latest Posts

ಇಂಡಿಯಾದಲ್ಲಿ ಅಮೆಜಾನ್ ಜಬರ್ದಸ್ತ್ ಆಟ ಶುರು, ಹೊಸ ಸಿನಿಮಾಗಳು ರಿಲೀಸ್ ಗೆ ರೆಡಿ.

- Advertisement -

ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಸಿನಿಮಾ ಇಂಡಸ್ಟ್ರಿ ಕಂಪ್ಲೀಟ್ ಕಂಗಾಲಾಗಿತ್ತು. ಸಾವಿರಾರು ಕೋಟಿ ಬಂಡವಾಳ ಉದ್ಯಮ ಸಿನಿಮಾ ರೆಡಿ ಮಾಡಿದ್ರು ರಿಲೀಸ್ ಮಾಡಲಾಗದೆ ನಷ್ಟಕ್ಕೆ ಸಿಲುಕುವ ಭೀತಿಯಲ್ಲಿತ್ತು ಇದೀಗ ಅಮೆಜಾನ್ ಪ್ರೈಂ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಆಶಾಕಿರಣವಾಗಿದೆ.

6 ಸಿನಿಮಾಗಳು ನೇರವಾಗಿ ಅಮೆಜಾನ್ ಪ್ರೈಂನಲ್ಲಿ ರಿಲೀಸ್

ಇನ್ನು ನಟಿ ವಿದ್ಯಾಬಾಲನ್ ರ “ಶಕುಂತಲಾ ದೇವಿ” ಹಾಗೂ ತಮಿಳಿನಲ್ಲಿ ಪೊನ್ ಮಗಳ್ ವಂದಾಳ್, ಕೀರ್ತಿ ಸುರೇಶ್ ಅಭಿನಯದ ಪೆಂಗ್ವಿನ್ ಚಿತ್ರ ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗ್ತಿದೆ. ಮಲಯಾಳಂ ನ ಸೂಫಿಯುಮ್ ಸುಜಾತೆಯುಮ್ ಸಹ ಅಮೆಜಾನ್ ನಲ್ಲಿ ತೆರೆಕಾಣಲಿದೆ. ಇದಲ್ಲದೇ  ನಟ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ೆರಡು ಸಿನಿಮಾಗಳು ರಿಲೀಸ್ ಆಗ್ತಿವೆ. ‘ಲಾ’  ಸಿನಿಮಾದಲ್ಲಿ ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್ ಹಾಗೂ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿನಯಿಸಿದ್ದು ಜೂನ್ 26 ಕ್ಕೆ ರಿಲೀಸ್ ಆಗಲಿದೆ. . ಇತ್ತ ಪಿಆರ್ ಕೆ ಪ್ರೊಡಕ್ಷನ್ ನ ಮತ್ತೊಂದು ಸಿನಿಮಾ ಫ್ರೆಂಚ್ ಬಿರಿಯಾನಿ ಜೂನ್ 24ಕ್ಕೆ ಅಮೆಜಾನ್ ಪ್ರೈಂ ನಲ್ಲಿ ತೆರೆಕಾಣಲಿದೆ.  ಫ್ರೆಂಚ್ ಬಿರಿಯಾನಿಯಲ್ಲಿ ಡ್ಯಾನಿಶ್ ಸೇಟ್, ಸಾಲ್ ಯೂಸಫ್ ಹಾಗೂ ಪಿತೋಬಶ್ ಮುಖ್ಯನಟನೆಯನ್ನ ಹೊಂದಿದ್ದಾರೆ. ಪನ್ನಗ ಭರಣ ಸಿನಿಮಾ ನಿರ್ದೇಶನ ಮಾಡಿದ್ದಾರೆ..

ಎಂಟರ್ ಟೈನ್ಮೆಂಟ್ ಬ್ಯೂರೋ, ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss