Sunday, September 8, 2024

Latest Posts

ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

- Advertisement -

ಬೆಂಗಳೂರು: ಕೆಲವು ದಿನದಿಂದ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ನಿಶ್ಚಿತಾರ್ಥದ ಸುದ್ದಿ ಹರಿದಾಡುತ್ತಿದ್ದು, ಇಂದು ಅದಕ್ಕೆ ತೆರೆ ಬಿದ್ದಿದೆ. ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸರಳವಾಗಿ ನೆರವೇರಿದೆ. ಖ್ಯಾತ ಪ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರ ಜೊತೆ ಇಂದು ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲವು ಕುಟುಂಬಸ್ಥರು, ಆಪ್ತರು ಮತ್ತು ಚಿತ್ರರಂಗದ ಕೆಲವು ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಗುಲಾಬಿ ಬಣ್ಣದ ಸೀರೆಯಲ್ಲಿ ಅವಿವಾ ಬಿದ್ದಪ್ಪ ಮತ್ತು ಗೋಲ್ಡನ್ ಬಣ್ಣದ ಜಾಕೇಟ್ ಜೊತೆ ಬಿಳಿ ಬಣ್ಣದ ಸಲ್ವಾರ್ ತೊಟ್ಟು ಜೋಡಿಗಳಿಬ್ಬರು ಮಿಂಚುತ್ತಿದ್ದರು. ಹೊಸ ಜೊಡಿಗೆ ಚಿತ್ರರಂಗದ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಶೀಘ್ರದಲ್ಲೆ ಸಪ್ತಪದಿ ತುಳಿಯಲು ಹೊಸ ಜೋಡಿ ಸಜ್ಜಾಗುತ್ತಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ನಾಳೆ ಸುಖವಿಂದರ್ ಸಿಂಗ್ ಪ್ರಮಾಣ ವಚನ ಸ್ವೀಕಾರ

ಹರಿವೆ ಸೊಪ್ಪನ್ನು ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ..

‘ನಾನ್ ಕೆಲ್ಸಾ ಮಾಡಿದೀನಿ ಅಂದ್ಮೇಲೆ ನೀವು ನನಗೆ ಕೂಲಿ ಕೊಡ್ಬೇಕು’

- Advertisement -

Latest Posts

Don't Miss