- Advertisement -
ಅಪ್ಪು ಅಂಬರೀಶ್(Appu-Ambarish)ಅವರನ್ನ ಮಾಮ ಅಂತಲೇ ಕರೆದು ಜೊತೆಯಲ್ಲೇ ಸಿನಿಮಾ ಮಾಡಿದ್ರು, ಅಂಬರೀಶ್ ಕೂಡ ಅಪ್ಪು ಜೊತೆ ಸಿನಿಮಾ ಮಾಡಿ ಎರಡೂ ಕುಟುಂಬ ಆತ್ಮೀಯ ಒಡನಾಟ ಹೊಂದಿದೆ. ಆದ್ರೀಗ ರಸ್ತೆಗೆ ಹೆಸರಿಡೋ ಕಾರಣಕ್ಕೆ ಅಭಿಮಾನಿಗಳಲ್ಲಿ ಪ್ರತಿಷ್ಠೆ ಶುರುವಾಗಿದೆ. ಈಗಾಗಲೇ ನಾಯಂಡಳ್ಳಿಯಿಂದ ಬನ್ನೇರುಘಟ್ಟ ರಸ್ತೆಗೆ(Bannerghatta Road) ಪುನೀತ್ ಹೆಸರಿಡೋದಾಗಿ ಬಿಬಿಎಂಪಿ ಘೋಷಿಸಿತ್ತು. ಇಂದು ಅಂಬರೀಶ್ ಅವರ ಅಬನಿಮಾನಿಗಳು ಆ ರಸ್ತೆಗೆ ಅಂಬರೀಶ್ ಹೆಸರಿಡಬೇಕು ಎಂದು ಆಕ್ಷೇಪ ವ್ಯಕ್ತಪಡಿಸ್ತಿದ್ದಸರೆ. ಇಂದು 11 ಘಂಟೆಗೆ ಬಿಬಿಎಂಪಿಗೆ ಆಗಮಿಸಿ ಅಂಬರೀಶ್ ಸಂಘಟನೆಗಳು ಮನವಿ ಮಾಡಲಿದ್ದಾರೆ. ಹೀಗಾಗಿ ಅಪ್ಪು ಅಂಬರೀಶ್ ಅಭಿಮಾನಿಗಳಲ್ಲಿ ಯಾವ ರೀತಿ ಬೆಳವಣಿಗೆಗಳಾಗುತ್ತವೆ ಅನ್ನೊದನ್ನ ಕಾದು ನೋಡಬೇಕಿದೆ.
- Advertisement -