ರಾಮನಗರ: ಬೈಕ್ನಲ್ಲಿ ಬರುವಾಗ ಆಯಾತಪ್ಪಿ ಬಿದ್ದು ಬೈಕ್ ಸವಾರ ಗಾಯಗೊಂಡಿರುತ್ತಾನೆ ಆದರೆ ಆಂಬ್ಯುಲೆನ್ಸ್ ಸಿಬ್ಬಂದಿ ಗಾಯಾಳು ಜೊತೆ ಯಾರು ಬರದೇ ಇದ್ದರಿಂದ ಸ್ಥಳದಲ್ಲಿಯೇ ಬಿಟ್ಟು ಹೋಗಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ನಡೆದಿದೆ.
ಬೈಕ್ನಿಂದ ಬಿದ್ದಿದ್ದ ಸವಾರನನ್ನು ನೋಡಿ ಊರಿನವರು ತಕ್ಷಣ 108 ಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ 108 ಅಲ್ಲಿ ಗಾಯಾಳುವನ್ನು ಮಲಗಿಸಿದ್ದಾರೆ. ಗಾಯಾಳು ಬೈಕ್ ಸವಾರನ ಜೊತೆ ಯಾರಾದರೂ ಸ್ಥಳೀಯರು ಆಸ್ಪತ್ರೆಗೆ ಬರುವಂತೆ ಸಿಬ್ಬಂದಿಗಳು ಒತ್ತಾಯ ಮಾಡಿದ್ದು, ಗ್ರಾಮಸ್ಥರು ತೆರಳದ ಹಿನ್ನೆಲೆ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಿಂದೇಟು ಹಾಕಿದ್ದಾರೆ ಹೀಗಾಗಿ ಗಾಯಾಳುವನ್ನು ಸ್ಥಳದಲ್ಲೇ ಬಿಟ್ಟು ಆಂಬುಲೈನ್ಸ್ ಸಿಬ್ಬಂದಿಗಳು ವಾಪಾಸ್ ಹೋಗಿದ್ದಾರೆ. ಜೆಸಿಬಿ ಚಾಲಕರೊಬ್ಬರು ಸ್ಥಳಕ್ಕೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ಚೀನಾ
ಮದ್ದೂರು ಸ್ಕ್ಯಾನಿಂಗ್ ಸೆಂಟರ್ ಯಡವಟ್ಟು: 15 ಲಕ್ಷ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
ಮದ್ದೂರು ಸ್ಕ್ಯಾನಿಂಗ್ ಸೆಂಟರ್ ಯಡವಟ್ಟು: 15 ಲಕ್ಷ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

