Saturday, July 5, 2025

Latest Posts

ಅಮೆರಿಕಾ 20 ಕೋಟಿ ಕೊರೊನಾ ಡೋಸ್ ಗಳನ್ನು ದೇಣಿಗೆಯಾಗಿ ನೀಡಿದೆ..!

- Advertisement -

www.karnatakatv.net: 20 ಕೋಟಿ ಡೋಸ್‌ಗಳಷ್ಟು ಕೊರೊನಾ ಲಸಿಕೆಯನ್ನು 100ಕ್ಕೂ ಹೆಚ್ಚು ದೇಶಗಳಿಗೆ ದೇಣಿಗೆಯಾಗಿ ನೀಡಿದ ಅಮೆರಿಕ ಸರ್ಕಾರ ಇಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಬೇರೆ ಬೇರೆ ರಾಷ್ಟ್ರಗಳಲ್ಲಿ ಜನರು ಮೊದಲ ಡೋಸ್ ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಿಂದ ಇರುವಾಗ ಅಮೆರಿಕದಲ್ಲಿ ಬೂಸ್ಟರ್ ಲಸಿಕೆಯ ಡೋಸ್‌ಗಳನ್ನು ನೀಡುತ್ತಿರುವುದಕ್ಕೆ ಅಧ್ಯಕ್ಷ ಜೋ ಬೈಡನ್ ಅವರು ವಿಶ್ವದ ಹಲವು ನಾಯಕರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಕೋವಿಡ್ ಲಸಿಕೆಯ ದೇಣಿಗೆಯನ್ನು ಹೆಚ್ಚಿಸಿದೆ. ಕಳೆದ ವಾರ ಅಮೆರಿಕ ಜಾನ್‌ಸನ್ ಅಂಡ್ ಜಾನ್‌ಸನ್ ಕಂಪನಿಯ ಲಸಿಕೆಯನ್ನು ಆಫ್ರಿಕಾ ಒಕ್ಕೂಟಕ್ಕೆ ದೇಣಿಗೆಯಾಗಿ ನೀಡಿರುವುದಾಗಿ ಅಧ್ಯಕ್ಷ ಬೈಡನ್, ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಟ್ಟಾಗೆ ತಿಳಿಸಿದ್ದಾರೆ. ಇಲ್ಲಿವರೆಗೂ ಅಮೆರಿಕ 20 ಕೋಟಿ ಡೋಸ್‌ಗಳಷ್ಟು ಕೋವಿಡ್ ಲಸಿಕೆಗಳನ್ನು 100ಕ್ಕೂ ಹೆಚ್ಚು ದೇಶಗಳಿಗೆ ದೇಣಿಗೆಯಾಗಿ ನೀಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಅಮೆರಿಕ ಮತ್ತು ಅಂತರರಾಷ್ಟ್ರೀಯ ಕೋವಾಕ್ಸ್ ಲಸಿಕೆ ಹಂಚಿಕೆ ಕಾರ್ಯಕ್ರಮ ಜಂಟಿಯಾಗಿ ಮುಂದಿನ ವರ್ಷದವರೆಗೂ ಯಾವ ದೇಶಕ್ಕೆ ಅಗತ್ಯವಿದೆಯೋ ಆ ಎಲ್ಲಾ ದೇಶಗಳಿಗೆ 100 ಕೋಟಿಗೂ ಹೆಚ್ಚು ಡೋಸ್‌ಗಳಷ್ಟು ಲಸಿಕೆಗಳನ್ನು ಪೂರೈಸುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

Latest Posts

Don't Miss