ಬೆಂಗಳೂರು:
ಬೆಂಗಳೂರು ಮೂಲದ ಏರೋಸ್ಪೇಸ್ ಕಂಪನಿ ಪಿಕ್ಸ್ಸೆಲ್ ಗುಪ್ತಚರ ಕಣ್ಗಾವಲು ಸಹಾಯಕ್ಕಾಗಿ ಅಮೆರಿಕ ಸರ್ಕಾರದಿಂದ ಐದು ವರ್ಷಗಳ ಒಪ್ಪಂದವನ್ನು ಪಡೆದುಕೊಂಡಿದೆ. ಪ್ರಸ್ತುತ ಹೈಪರ್-ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹ ಸಮೂಹವನ್ನು ಸ್ಥಾಪಿಸುವ ಕೆಲಸ ಮಾಡುತ್ತಿರುವ ಪಿಕ್ಸೆಲ್ (Pixxel), ಅಮೆರಿಕ ರಕ್ಷಣಾ ಇಲಾಖೆಯ ರಾಷ್ಟ್ರೀಯ ವಿಚಕ್ಷಣ ಕಚೇರಿ (NRO)ಯಿಂದ ಅಧ್ಯಯನ ಗುತ್ತಿಗೆ ಪಡೆದ ಏಕೈಕ ಭಾರತೀಯ ಕಂಪನಿಯಾಗಿದೆ.
ವಿಚಕ್ಷಣ ಕಚೇರಿ ತನ್ನ ಸ್ಟ್ರಾಟೆಜಿಕ್ ಕಮರ್ಷಿಯಲ್ ಎನ್‌ಹಾನ್ಸ್‌ಮೆಂಟ್ (SCE) ಬ್ರಾಡ್ ಏಜೆನ್ಸಿ ಅನೌನ್ಸ್‌ಮೆಂಟ್ ಫ್ರೇಮ್‌ವರ್ಕ್‌ನ ಭಾಗವಾಗಿ ವಿವಿಧ ಏರೋಸ್ಪೇಸ್ ಕಂಪನಿಗಳಿಗೆ ಆರು ಗುತ್ತಿಗೆಗಳನ್ನು ನೀಡಿದೆ. ಮಾಡೆಲಿಂಗ್, ಸಿಮ್ಯುಲೇಶನ್ ಮತ್ತು ದತ್ತಾಂಶ ಮೌಲ್ಯಮಾಪನದ ಮೂಲಕ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್‌ಗಾಗಿ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯಗಳನ್ನು ಒದಗಿಸಲು ಕಂಪನಿಯು ಸಹಾಯ ಮಾಡುತ್ತದೆ ಎಂದು ಅಹ್ಮದ್ ಹೇಳಿದರು.
ಒಪ್ಪಂದದ ಭಾಗವಾಗಿ, NRO ಹಲವಾರು ಅಮೆರಿಕ ಏಜೆನ್ಸಿಗಳಿಗೆ ಉಪಗ್ರಹ ಗುಪ್ತಚರವನ್ನು ಒದಗಿಸುವಲ್ಲಿ ಸಹಾಯ ಮಾಡಲು Pixxel ನ ಹೈಪರ್‌ಸ್ಪೆಕ್ಟ್ರಲ್ ಚಿತ್ರಗಳನ್ನು ಬಳಸಿಕೊಳ್ಳುತ್ತದೆ. ಸಂಸ್ಥೆ, ಅದರ ಪಾಲುದಾರರು ಮತ್ತು ಅಮೆರಿಕ ಜಿಯೋಸ್ಪೇಷಿಯಲ್ ಗುಪ್ತಚರ ಸಮುದಾಯಕ್ಕೆ ನಮ್ಮ ಇಮೇಜಿಂಗ್ ಸಾಮರ್ಥ್ಯಗಳನ್ನು ನೀಡಲು ನಾವು ಈ ಅವಕಾಶಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು Pixxel ಸಂಸ್ಥಾಪಕ ಅವೈಸ್ ಅಹ್ಮದ್ ಹೇಳಿದ್ದಾರೆ.
ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್” ಚಿತ್ರಮಂದಿರಕ್ಕೆ ಏಪ್ರಿಲ್ 28 ರಂದು