Thursday, November 21, 2024

Latest Posts

7 ಲಕ್ಷ ಸೋಂಕಿತರು, 37 ಸಾವಿರ ಸಾವು. ಏನಾಗ್ತಿದೆ ಅಮೆರಿಕಾದಲ್ಲಿ..?

- Advertisement -

ಕರ್ನಾಟಕ ಟಿವಿ : ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾ ಕೊರೊನಾ ದಾಳಿಗೆ ಕಂಗಾಲಾಗಿ ಹೋಗಿದೆ. 33 ಕೋಟಿ ಜನಸಂಖ್ಯೆ ಅಮೆರಿಕಾದಲ್ಲಿ 37 ಲಕ್ಷದ 80 ಸಾವಿರ ಜನರನ್ನ ಕೊರೊನಾ ಪರೀಕ್ಷೆ ಒಳಪಡಿಸಲಾಗಿದ್ದು ಈ ಕ್ಷಣಕ್ಕೆ ಸರಿಯಾಗಿ 7 ಲಕ್ಷದ 10 ಸಾವಿರ ಸೋಂಕಿತರಿದ್ದು 37 ಸಾವಿರದ 175 ಜನ ಸಾವನ್ನಪ್ಪಿದ್ದಾರೆ.. ಅಮೆರಿಕಾದ ಫಿನಾನ್ಸಿಯಲ್ ಸಿಟಿ ನ್ಯೂಯಾರ್ಕ್ ಅಕ್ಷರಶಃ ನಲುಗಿ ಹೋಗಿದೆ.. ಇಲ್ಲಿ 2 ಲಕ್ಷ ಸೋಂಕಿತರಿದ್ದು 14 ಸಾವವಿರ ಜನ ಸಾವನ್ನಪ್ಪಿದ್ದಾರೆ.. ಇನ್ನು ನ್ಯೂ ಜೆರ್ಸಿಯಲ್ಲಿ 78 ಸಾವಿರ ಸೋಂಕಿತರಿದ್ದು 3800 ಮಂದಿ ಸಾವನ್ನಪ್ಪಿದ್ದಾರೆ.. ಅಮೆರಿಕಾ ಎಷ್ಟೆ ಪ್ರಯತ್ನ ಪಟ್ಟರು  ಸಾವನ್ನ ತಡೆಗಟ್ಟಲು ಸಾಧ್ಯವಾಗ್ತಿಲ್ಲ.. ಸೋಂಕು ಹರಡದಂತೆ ಕ್ರಮಕೈಗೊಳ್ಳುಲು ತಡ ಮಾಡಿದ್ದೆ ಅಮೆರಿಕಾ ಈ ಸ್ಥಿತಿಗೆ ಕಾರಣವಾಗಿದೆ.  ಲಾಕ್ ಡೌನ್ ಮಾಡುವಲ್ಲಿ ಟ್ರಂಪ್ ತೋರಿದ ಉದಾಸೀನತೆ ಅಮೆರಿಕಾ ಸ್ಮಶಾನ ವಾಗುವಂತೆ ಮಾಡಿದೆ. ಇದೆಲ್ಲಾದೆ ನಡುವೆ ಲಾಕ್ ಡೌನ್ ವಾಪಾಸ್ ತೆಗೆದುಕೊಳ್ಳುವುದಾಗಿ ಟ್ರಂಪ್ ನಿನ್ನೆ ಘೋಷಣೆ ಮಾಡಿದ್ರು. ಯಾವಾಗ ಟ್ರಂಪ್ ನಿರ್ಧಾರಕ್ಕ ವಿರೋಧ ವ್ಯಕ್ತವಾಯ್ತೋ ಆಯ ಪ್ರದೇಶದ ಗವರ್ನರ್ ಗಳಿಗೆ ಇದೀಗ ಅಧಿಕಾರ ನೀಡಿದ್ದಾರೆ..  ಮತ್ತೊಂದು ಆತಂಕದ ವಿಚಾರ ಅಂದ್ರೆ ಕೆಲವೆಡೆ ಲಾಕ್ ಡೌನ್ ವಿರೋಧಿಸಿ ಅಮೆರಿಕಾ ಜನ ಪ್ರತಿಭಟನೆ ಮಾಡ್ತಿದ್ದಾರೆ.. ಅಮೆರಿಕಾ  ಸ್ಥಿತಿ ಇದೇ ರೀತಿ ಮುಂದುವರೆದ್ರೆ ಸೋಂಕಿತರು 10 ಲಕ್ಷ ದಾಟುವ ಸಾಧ್ಯತೆ ಇದ್ದು ಸಾವಿನ ಸಂಖ್ಯೆ ಲಕ್ಷ ಮುಟ್ಟುವ ಆತಂಕ ಎದುರಾಗಿದೆ,

ನ್ಯೂಸ್ ಡೆಸ್ಕ್ , ಕರ್ನಾಟಕ ಟಿವಿ

https://www.youtube.com/watch?v=W6348HAikMc
- Advertisement -

Latest Posts

Don't Miss