www.karnatakatv.net:ಅಂತರಾಷ್ಟ್ರೀಯ- ಸ್ಯಾಂಡಲ್ ವುಡ್ ನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ನಿಧನದಿಂದ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ನಷ್ಟವಾಗಿಲ್ಲ, ಇಡೀ ಭಾರತೀಯ ಚಿತ್ರರಂಗವೇ ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಂತೆ ಆಗಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಅವರ ಅಗಲಿಕೆಗೆ ಎಲ್ಲರೂ ನಮನ ಸಲ್ಲಿಸಿದ್ರು. ಇದೀಗ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ ಕೂಡ ಅವರಿಗೆ ಗೌರವ ಸೂಚಿಸಿದೆ. ಫ್ರಾಂಕ್ಲಿನ್ ಥಿಯೇಟರ್ ಮುಂದೆ ವಿಜಯ್‍ರವರನ್ನ ಸ್ಮರಿಸಿ ಬರಹವನ್ನ ಬಿತ್ತರಿಸಲಾಗಿದೆ. ಈ ಸುದ್ದಿಯನ್ನು ನಿರ್ದೇಶಕ ಬಿ.ಎಸ್.ಲಿಂಗದೇವರು ಹಂಚಿಕೊಂಡಿದ್ದಾರೆ. ‘ALWAYS IN OUR HEART, SANCHARI VIJAY,GONE YET NOT FORGETTEN’ ಎಂಬ ಸಾಲನ್ನು ಫ್ರಾಂಕ್ಲಿನ್ ಥಿಯೇಟರ್ ಮುಂಭಾಗದಲ್ಲಿ 24 ಗಂಟೆಗಳ ಕಾಲ ಬಿತ್ತರಿಸಲಾಯ್ತು.




