American News:
ಅಮೇರಿಕಾದಲ್ಲಿ ಭಾರತೀಯರ ಮೇಲೆ ನಿಂದನೆ ಆಗಿರೊ ಘಟನೆ ನಡೆದಿದೆ. ಅಮೇರಿಕಾದ ಟೆಕ್ಸಾಸ್ ರಾಜ್ಯದಲ್ಲಿ ಮೆಕ್ಸಿಕನ್-ಅಮೆರಿಕನ್ ಮಹಿಳೆಯೊಬ್ಬರು ನಾಲ್ಕು ಭಾರತೀಯ-ಅಮೆರಿಕನ್ ಮಹಿಳೆಯರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಮತ್ತು ಥಳಿಸಿ ನೀವು ಅಮೇರಿಕಾವನ್ನು “ಹಾಳು” ಮಾಡುತ್ತಿದ್ದೀರಿ “ಭಾರತಕ್ಕೆ ಹಿಂತಿರುಗಿ” ಎಂದು ಜನಾಂಗೀಯ ನಿಂದನೆ ಮಾಡಿರುವುದಾಗಿ ವರದಿಯಾಗಿದೆ.
ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮೆಕ್ಸಿಕನ್-ಅಮೆರಿಕನ್ ಮಹಿಳೆಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಎಸ್ಮೆರಾಲ್ಡಾ ಆಪ್ಟನ್ ಎಂಬ ಮಹಿಳೆಯು ಭಾರತೀಯ-ಅಮೆರಿಕನ್ ಮಹಿಳೆಯರನ್ನು ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, “ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ಎಲ್ಲಾ ಭಾರತೀಯರು ಅಮೇರಿಕಾಕ್ಕೆ ಬರುತ್ತಾರೆ ಏಕೆಂದರೆ ಅವರು ಉತ್ತಮ ಜೀವನವನ್ನು ಬಯಸುತ್ತಾರೆ ಎಂದಿದ್ದಾರೆ.
ಇನ್ನು ನೀವು ಭಾರತಕ್ಕೆ ಹಿಂತಿರುಗಿ. ಭಾರತೀಯರು ಈ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿರುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಡೆಲಿವರಿ ಬಾಯ್ ಗುಂಡು ಹಾರಿಸಿದ ಸಹೋದರರು…! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ…!
ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಎಕ್ಸ್-ಲೈನ್ ಕಾರು