- Advertisement -
ಕನ್ನಡ ಸಿನಿಮಾಗಳು ಇಂದು ಗಡಿಮೀರಿ..ದೇಶಮೀರಿ ಬೆಳೆಯುತ್ತಿವೆ. ಪರಭಾಷಾ ಮಾತ್ರವಲ್ಲ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿವೆ. ಈ ಪೈಕಿ ಕೆಜಿಎಫ್ ಸಿನಿಮಾವೂ ಒಂದು. ಅಂತರಾಷ್ಟ್ರೀಯ ಮಟ್ಟದಲ್ಲೂ ಕ್ರೇಜ್ ಸೃಷ್ಟಿಸಿರುವ ಕೆಜಿಎಫ್-2 ಸಿನಿಮಾ ನೋಡೋದಿಕ್ಕೆ ಅಮೆರಿಕ ಮೂಲದ ವೃತ್ತಿಪರ ಕುಸ್ತಿಪಟು ವಿಲ್ಲೀ ಮ್ಯಾಕ್ ಎಕ್ಸೈಟ್ ಆಗಿದ್ದಾರಂತೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಲ್ಲೀ ಮ್ಯಾಕ್, ಕೆಜಿಎಫ್ ಮೊದಲ ಭಾಗ ಅದ್ಭುತವಾಗಿ ಮೂಡಿಬಂದಿದ್ದು, ಕೆಜಿಎಫ್-2 ನೋಡಲು ಕಾತುರನಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಟೀಸರ್ ಮೂಲಕ ಹೊಸ ದಾಖಲೆ ಬರೆದಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಕೆಜಿಎಫ್-2 ಜುಲೈ 16ರಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿದೆ.

- Advertisement -