ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಕೇರಳ ಸಿನಿಮಾ ಲೋಕದಲ್ಲಿ ತಲ್ಲಣ ಮೂಡಿಸಿದೆ. ಇದರ ನಡುವೆಯೇ ನಟಿ ರೇವತಿ ಸಂಪತ್ ಅವರು ಮಲಯಾಳ ಚಲನಚಿತ್ರ ಕಲಾವಿದರ ಸಂಘದ ಪ್ರಧಾನಿ ಕಾರ್ಯದರ್ಶಿ ಸಿದ್ದಿಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಕುತೂಹಲದ ಸಂಗತಿ ಎಂದರೆ, ಸಿದ್ದಿಕ್ ಅವರು ಈಗ ರೇವತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಸಿದ್ದಿಕ್ ಒಬ್ಬ ಕ್ರಿಮಿನಲ್, ಅವರು ನನ್ನನ್ನು ಒಂದು ಗಂಟೆ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದ. ಅವರು ಆಫರ್ ಬಗ್ಗೆ ಚರ್ಚಿಸಲು ಹೋಟೆಲ್ಗೆ ಬರುವಂತೆ ಹೇಳಿದ್ದ. ಹೊಂದಾಣಿಕೆ ಮಾಡಿಕೊಳ್ಳಲು ರೆಡಿನಾ ಎಂದು ನನ್ನನ್ನು ಕೇಳಿದ್ದ. ಇದರಿಂದ ನನಗೆ ತೀವ್ರ ಆಘಾತವಾಗಿತ್ತು ಎಂದು ನಟಿ ಹೇಳಿಕೊಂಡಿದ್ದಾರೆ.
ಇನ್ನೂ ಮಲಯಾಳಂನ ಹಿರಿಯ ನಟ ಸಿದ್ದಿಕ್ ಅವರು ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಲಯಾಳಂ ಚಿತ್ರೋದ್ಯಮದಲ್ಲಿ ಲೈಂಗಿಕ ದೌರ್ಜನ್ಯದ ಹಲವು ಘಟನೆಗಳು ನಡೆದಿವೆ ಎಂದು ಹೇಮಾ ಸಮಿತಿ ವರದಿ ಬಿಡುಗಡೆ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆ ನಡೆದಿವೆ.