Thursday, July 25, 2024

Latest Posts

ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ, 2 ಲಕ್ಷ ಪ್ರೈಮರಿ ಡೇರಿ ನಿರ್ಮಿಸಲು ತೀರ್ಮಾನ : ಅಮಿತ್ ಶಾ

- Advertisement -

ಮಂಡ್ಯ: ಜಿಲ್ಲೆಗೆ ಹುಲಿಗೆರೆಪುರ ಹೆಲಿಪ್ಯಾಡ್ ಗೆ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದರು. ನಂತರ ಗೆಜ್ಜಲಗೆರೆಗೆ ತೆರೆಳಿ ಮನ್ಮುಲ್‌ ನ ಮೆಗಾ ಡೈರಿ ಉದ್ಘಾಟನೆ ಮಾಡಿದರು. ಉದ್ಘಾಟನೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಹಕಾರಿಸಂಘಗಳಿಂದ ರೈತರ ಅಭಿವೃದ್ಧಿ ಆಗಿದೆ. ಮೋದಿ ಸಹಕಾರಿ ಸಚಿವಾಲಯ ಮಾಡಿದರು,ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅಮೂಲ್ ಹಾಗೂ ನಂದಿನಿ ಒಟ್ಟಿಗೆ ಕೆಲಸ ಮಾಡಬೇಕು, ಪ್ರತಿ ಪಂಚಾಯತಿಯಲ್ಲಿಯೂ ಡೇರಿ ಘಟಕ ಸ್ಥಾಪನೆಯಾಗಬೇಕು ಎಂದು ಶಾ ಹೇಳಿದರು.

ಮಂಡ್ಯದ ಗೆಜ್ಜಲಗೆರೆಯಲ್ಲಿ ಅಮಿತ್ ಶಾ

5 ಎಕರೆ ವಿಸ್ತೀರ್ಣದಲ್ಲಿ ಹಾಲು ಉತ್ಪಾದಕ ಘಟಕ ನಿರ್ಮಾಣವಾಗಿದ್ದು, 260 ಕೋಟಿ ರೂಪಾಯಿ ವೆಚ್ಚದಲ್ಲಿ ಡೈರಿಯನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಡೈರಿಯಲ್ಲಿ ಒಂದು ದಿನಕ್ಕೆ 30 ಮೆಟ್ರಿಕ್ ಟನ್ ಹಾಲಿನ ಪೌಡರ್ ಉತ್ಪಾದನೆ ಮಾಡಲಾಗುತ್ತದೆ. ಕಟ್ಟಡದ ಹೊರಭಾಗದಲ್ಲಿ ಒಟ್ಟು 6 ಲಕ್ಷ ಲೀಟರ್ ಸಾಮರ್ಥ್ಯದ 4 ಬೃಹತ್ ಹಾಲು ಸಂಗ್ರಹಣಾ ಟ್ಯಾಂಕ್‌ಗಳಿವೆ.
ಪ್ರತಿ ಟ್ಯಾಂಕ್​ಗಳಲ್ಲಿ ತಲಾ 1.5 ಲಕ್ಷ ಲೀಟರ್ ಹಾಲು ಸಂಗ್ರಹ ಸಾಧ್ಯವಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

ನಮ್ಮೆಲ್ಲರ ಪ್ರೀತಿಯ ನೇತಾರ ಎಚ್ .ಡಿ ದೇವೇಗೌಡ ಎಂದು ಅಮಿತ್ ಶಾ ಅವರು ಹಿಂದಿಯಲ್ಲಿ ಭಾಷಣ ಪ್ರಾರಂಭಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಹಕಾರ ಕ್ಷೇತ್ರದ ಸದಸ್ಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಕರ್ನಾಟಕದಲ್ಲಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಚೆನ್ನಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ 15,210 ಸಹಕಾರಿ ಹಾಲು ಉತ್ಪಾದನಾ ಡೇರಿಗಳಿದ್ದು, 210 ಗ್ರಾಮಗಳು ಇದರಲ್ಲಿ ಭಾಗಿಯಾಗಿವೆ ಮತ್ತು 22 ಲಕ್ಷ ರೈತರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. 1975ರಿಂದ 2022ರವರೆಗೂ ಡೇರಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಆಗಿದೆ ಎಂದು ಅವರು ಹೇಳಿದರು. ಒಟ್ಟು 260 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣವಾಗಿದ್ದು, ಪ್ರತಿದಿನ 10 ಲಕ್ಷ ಲೀಟರ್ ಹಾಲು ಸಂಗ್ರಹದ ಸಾಮರ್ಥ್ಯವನ್ನು ಡೈರಿ ಹೊಂದಿದೆ.

ಜಾಯಿಕಾಯಿ ತೆಯ್ದು ಮಕ್ಕಳಿಗೆ ತಿನ್ನಿಸುವುದರಿಂದ ಏನಾಗತ್ತೆ ಗೊತ್ತಾ..?

ಇನ್ನು 14 ಲಕ್ಷ ಲೀಟರ್ ಹಾಲು ಸಂಗ್ರಹದ ಘಟಕ ನಿರ್ಮಾಣದ ಗುರಿ ಹೊಂದಿದ್ದೇವೆ. ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, 2 ಲಕ್ಷ ಪ್ರೈಮರಿ ಡೇರಿ ನಿರ್ಮಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ. ಗುಜರಾತ್ ಕರ್ನಾಟಕ ಎರಡು ರಾಜ್ಯಗಳು ದೇಶಕ್ಕಾಗಿ ಒಳ್ಳೆ ಕೆಲಸ ಮಾಡಬಹುದು. ಇದಕ್ಕೆ ಬೇಕಾದ ಸೌಲಭ್ಯವನ್ನು ನಮ್ಮ ಇಲಾಖೆ ನೀಡುತ್ತದೆ. ರೈತರ ಖಾತೆಗೆ ನೇರ ಹಣ ಜಮಾ ಮಾಡಿದಕ್ಕೆ ಅಭಿನಂದನೆ. ಮಕ್ಕಳಿಗೆ ಹಾಲಿನ ವ್ಯವಸ್ಥೆ ಮಾಡಿದಕ್ಕೂ ಬೊಮ್ಮಾಯಿ‌ ಸರ್ಕಾರಕ್ಕೆ ಶಾ ಅವರು ಅಭಿನಂದನೆ ತಿಳಿಸಿದರು. ನರೇಂದ್ರ ಮೋದಿ ತಾಯಿ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ,ಇಡೀ ದೇಶ ಮೋದಿ ಅವರ ಜೊತೆಗಿದೆ ಎಂದು ಅಮಿತ್ ಶಾ ಅವರು ಹೇಳಿದರು.

ಮಜ್ಜಿಗೆ ಕುಡಿಯುವುದರಿಂದ ಎಷ್ಟಲ್ಲಾ ಆರೋಗ್ಯಕರ ಲಾಭವಿದೆ..

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

Latest Posts

Don't Miss