Sunday, October 13, 2024

Latest Posts

ಅನರ್ಹ ಶಾಸಕರಿಗೆ ಅಮಿತ್ ಶಾ ಅರ್ಧ ಚಂದ್ರ ತೋರಿಸ್ತಿದ್ದಾರೆ..!

- Advertisement -

ಕರ್ನಾಟಕ : ಕಳೆದೊಂದು ತಿಂಗಳ ಹಿಂದೆ 17 ಶಾಸಕರಿಗೆ ಭಾರೀ ಡಿಮ್ಯಾಂಡ್.. ಬೆಂಗಳೂರಿನಿಂದ ಮುಂಬೈ ಗೆ ಪ್ರೈವೇಟ್ ಜೆಟ್ ವಿಮಾನದ ವ್ಯವಸ್ಥೆ, ಬಿಜೆಪಿ ಘಟಾನುಘಟಿ ನಾಯಕರೇ ಅನರ್ಹ ಶಾಸಕರಿಗೆ ಬಾಡಿ ಗಾರ್ಡ್.. ಕುಮಾರಸ್ವಾಮಿ, ಡಿ.ಕೆ ಶಿವ ಕುಮಾರ್ ಬನ್ರಪ್ಪ ವಾಪಸ್ ಬನ್ನಿ ನಿವೇ ಮಿನಿಸ್ಟರ್ ಆಗಿ. ಆ ಬಿಜೆಪಿಯವರ ಮಾತು ಕೇಳಿ ಹಾಳಾಗ್ಬೇಡಿ ಅಂತ ಕೋಳ್ಕೊಂಡ್ರು.. ಆದ್ರೆ, ಕುಮಾರಸ್ವಾಮಿ ಸರ್ಕಾರ ಪತನವಾದ ಮರು ಕ್ಷಣವೇ ನಾವೆಲ್ಲಾ ಮಿನಿಸ್ಟರ್ ಗಳಾಗಿ ಹೋಗ್ತಿವಿ ಅಂತ ಭಾವಿಸಿದ್ರು. ನಮ್ಮ ಮೇಲೆ ಎಂಥ ಕ್ರಮಕೈಗೊಂಡ್ರು ನಾವು ಸರ್ಕಾರ ಬೀಳುವ ವರೆಗೆ ವಾಪಸ್ ಬೆಂಗಳೂರಿಗೆ ಬರಲ್ಲಅಂತ ಬಿಲ್ಡಪ್ ತೆಗೆದುಕೊಂಡ್ರು.. ಅವರು ಹೇಳಿದಂತೆ ಸರ್ಕಾರ ಕೂಡ ಬೀಳ್ತು.. ಡಿಕೆಶೀ, ಸಿದ್ದರಾಮಯ್ಯ ಹೇಳಿದಂತೆ ಕೈಕೊಟ್ಟ ಶಾಸಕರು ಅನರ್ಹ ಕೂಡ ಆದ್ರು.. ನಂತರ  ಯಡಿಯೂರಪ್ಪ ಸರ್ಕಾರ ರಚನೆಯಾಯ್ತು.. ಆದ್ರೆ, ಸರ್ಕಾರ ರಚನೆ ಮಾಡಿದ ಯಡಿಯೂರಪ್ಪ ಸಂಫುಟ ವಿಸ್ತರಣೆ ಮಾಡೋದ್ರಲ್ಲೇ ಸಾಕುಸಾಕಾಗಿ ಹೋಗಿದ್ದಾರೆ.. ಸಂಪುಟ ವಿಸ್ತರಣೆ ಆಗುವ ವರೆಗೆ ಸ್ವಲ್ಪ ಟೆನ್ಶನ್ ನಲ್ಲಿದ್ದ ಅನರ್ಹ ಶಾಸಕರು ಇದೀಗ ಫುಲ್ ಕಂಗಾಲಾಗಿ ಹೋಗಿದ್ದಾರೆ.

ಆಪರೇಷನ್ ಮಾಡಿದವರೇ ಅತಂತ್ರ.. ಅನರ್ಹ ಶಾಸಕರು ಕಂಗಾಲು..!

ಇನ್ನೂ ರಾಜ್ಯದಲ್ಲಿ ಆಪರೇಷನ್ ಕಮಲದ ದೊಡ್ಡ ಡಾಕ್ಟರ್ ಸಿ.ಪಿ ಯೋಗೀಶ್ವರ್ ಅನ್ನೋದು ಓಪನ್ ಸೀಕ್ರೆಟ್.. ಆದ್ರೆ, ಮೊದಲ ಸಂಪುಟದಲ್ಲಿಆಪರೇಷನ್ ಮಾಡಿದ ಡಾಕ್ಟರ್ ಗೆ ಭರ್ಜರಿ ಗಿಫ್ಟ್ ಸಿಗುತ್ತೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ, ಸಂಪುಟ ವಿಸ್ತರಣೆಯಾದಾಗ ಆಪರೇಷನ್ ಸ್ಟಾರ್ ಸಿ.ಪಿ ಯೋಗೀಶ್ವರ್ ರಾಜಭವನದ ಬಳಿಯೂ ಸುಳಿಯಲಿಲ್ಲ. ಇದೇ ವೇಳೆ ಆಪರೇಷನ್ ಗೆ ಒಳಗಾದಅಥಣಿ ಶಾಸಕ ಮಹೇಶ್ ಕುಮಟಳ್ಳಿ ಎದುರು ಸೋತ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿ ಅತೃಪ್ತರಿಗೆ ಬಿಜೆಪಿ ಹೈಕಮಾಂಡ್ ಡಬಲ್ ಶಾಕ್ ನೀಡಿದೆ..

ಸುಪ್ರೀಂ ಕಡೆ ಮುಖಮಾಡದ ಮುಕುಲ್ ರೋಹ್ಟಗಿ ಅನರ್ಹರು ಅತಂತ್ರ

ಇನ್ನು ಅನರ್ಹ ಮಾಡಿದ 24 ಗಂಟೆಯಲ್ಲಿ ಅನರ್ಹತೆಯನ್ನ ವಾಪಸ್ ತೆಗೆಸ್ತೀನಿ ಅಂತ ಸುಪ್ರೀಂ ಕೋರ್ಟ್ ವಕೀಲ ಮುಕುಲ್ ರೋಹ್ಟಗಿ ಅನರ್ಹರ ಕೇಸ್ ವಿಚಾರಣೆ ತರುವಲ್ಲೇ ವಿಫಲರಾಗಿದ್ದಾರೆ.. ಒಂದು ತಿಂಗಳಾದ್ರೂ ಅನರ್ಹ ಶಾಸಕರ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮಾಡುವಲ್ಲಿಯೂ ಸಾಧ್ಯವಾಗಿಲ್ಲ.. ಇತ್ತ ಆಪರೇಷನ್ ಸ್ಟಾರ್ ನೇ ಕೇರ್ ಮಾಡದ ಹೈ ಕಮಾಂಡ್ ನಮ್ಮನ್ನ ಬೀದಿಗೆ ತಳ್ಳೋದು ಗ್ಯಾರಂಟಿ ಎಂದು ಭಾವಿಸಿದ ಅನರ್ಹ ಶಾಸಕರ ತಂಡ ಶಾಂಗ್ರೀಲಾ ಹೋಟೆಲ್ ಗೆ ಕರೆಸಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಸಿ.ಪಿ ಯೋಗೀಶ್ವರ್ ಗೆ ಒಂದು ರೌಂಡ್ ಫುಲ್ ಚಾರ್ಜ್ ಮಾಡಿದ್ರಂತೆ.. ಇದೀಗ ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ವಕೀಲರ ಭೇಟಿ ನೆಪದಲ್ಲಿ  ಬೀಡುಬಿಟ್ಟಿರುವ ಅನರ್ಹ ಶಾಸಕರು ನಮಗೆ ಅಮಿತ್ ಶಾ ಭೇಟಿ ಮಾಡಿಸಿ ನಮ್ಮ ಸಚಿವ ಸ್ಥಾನ ಹಾಗೂ ಬೈ ಎಲೆಕ್ಷನ್ ನಲ್ಲಿ ಟಿಕೆಟ್ ಕೊಡುವ ಬಗ್ಗೆ ಭರವಸೆ ಕೊಡಿಸಿ ಇಲ್ಲದಿದ್ರೆ ನಿಮ್ಮ ಸಿಎಂ ಸ್ಥಾನ 6 ತಿಂಗಳ ನಂತರ ಒಂದು ದಿನವೂ ಉಳಿಯೋದಿಲ್ಲಅಂತ ಚ್ಚರಿಕೆ ಕೊಟ್ಟದ್ದಾರೆ.. ಅನರ್ಹ ಶಾಸಕರು ಖಡಕ್ಕೆ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದಾರೆ.. ಅನರ್ಹ ಶಾಸಕರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅನರ್ಹ ಶಾಸಕರಿಗೆ ಅಮಿತ್ ಭೇಟಿ ಮಾಡಿಯೇ ವಾಪಸ್ ಬೆಂಗಳೂರಿಗೆ ತೆರಳಬೇಕು ಅಂತ ಹಠ ಮಾಡ್ತಿದ್ದಾರೆ. ಆದ್ರೆ ಅಮಿತ್ ಶಾ ಮಾತ್ರ ಬಿಎಸ್ ವೈ ಗೆ ಭೇಟಿಗೆ ಸಮಯ ನೀಡ್ತಿಲ್ಲ..

ಅಮಿತ್ ಶಾ ಮನಸ್ಸಿನಲ್ಲಿ ಏನಿದೆ..?

ಅಮಿತ್ ಶಾಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿ ಹೊಸದಾಗಿ ಚುನಾವಣೆಗೆ ಹೋಗುವ ಲೆಕ್ಕಾಚಾರ ಇತ್ತು.. ಆದ್ರೆ, ಯಡಿಯೂರಪ್ಪಅಮಿತ್ ಮಾತಿಗೆ ಬಿಲ್ ಕುಲ್ ಒಪ್ಪದೆ ಸರ್ಕಾರ ರಚನೆ ಮಾಡಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.. ಎಷ್ಟೇ ಕಾಡಿ ಬೇಡಿದ್ರು ಸಂಪುಟ ವಿಸ್ತರಣೆಗೆ ಅಮಿತ್ ಶಾ ಒಪ್ಪಿಗೆ ಕೊಟ್ಟಿದ್ದು 1 ತಿಂಗಳಾದ್ಮೇಲೆ.. ಹೀಗಿರಬೇಕಾದ್ರೆ ಅನರ್ಹ ಶಾಸಕರನ್ನ ಶಾ ಅಷ್ಟು ಸುಲಭವಾಗಿ ಭೇಟಿಯಾಗೋದು ಅಸಾಧ್ಯ..ಈ ಬಾರಿ ಬಿಎಸ್ ವೈ ಅನರ್ಹ ಶಾಸಕರಿಗೆ ಅಮಿತ್ ಶಾ ಬಳಿ ಮ್ಯಾಟರ್ ಸೆಟ್ಲ್ ಮೆಂಟ್ ಮಾಡಿದ್ರೆ ಇನ್ನಾರು ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ ಪತನ ಗ್ಯಾರಂಟಿ..

- Advertisement -

Latest Posts

Don't Miss