ದೆಹಲಿ: ಅಮಿತಾಬ್ ಬಚ್ಚನ್ ಅವರ ಹೆಸರು, ಚಿತ್ರ ಅಥವಾ ಧ್ವನಿಯನ್ನು ಅವರ ಅನುಮತಿ ಇಲ್ಲದೆ ಬಳಸಬಾರದು ಎಂದು ನಟನ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇಂದು ತೀರ್ಪು ನೀಡಿದೆ. ನಟನ ಅನಧಿಕೃತ ವಿಷಯವನ್ನು ತಕ್ಷಣವೇ ತೆಗೆದು ಹಾಕುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹತಿ ತಂತ್ರಜ್ಞಾನ ಸಚಿವಾಲಯು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಗೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಮೂರ್ತಿ ನವೀನ್ ಚಾವ್ಲಾ ಪ್ರಕರಣದ ಅಧ್ಯಕ್ಷತೆ ವಹಿಸಿದ್ದರು. ನಟ ಪ್ರಸಿದ್ಧ ವ್ಯಕ್ತಿ ಮತ್ತ ಅನೇಕ ಬ್ರಾಂಡ್ ಗಳನ್ನು ಅನುಮೋದಿಸುತ್ತಿದ್ದಾರೆ. ಅಥವಾ ಅವರ ಜಾಹೀರಾತುಗಳ ಮುಖವಾಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳೀದರು.
ಪ್ರಸಿದ್ಧ ವಕೀಲರಾದ ಹರೀಶ್ ಸಾಳ್ವೆ ಅವರು ಅಮಿತಾಬ್ ಬಚ್ಚನ್ ಅವರನ್ನು ಪ್ರತಿನಿಧಿಸಿ ಅವರ ಪರವಾಗಿ ಪ್ರಕರಣವನ್ನು ಮೇಲ್ಮನವಿ ಸಲ್ಲಿಸಿದರು ಮತ್ತು ಅರ್ಜಿಯೊಂದಿಗೆ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅಮಿತಾಬ್ ಬಚ್ಚನ್ ಅವರ ಲಿಖಿತ ಅನುಮತಿ ಇಲ್ಲದೆ ಅವರ ಹೆಸರು, ಫೋಟೋ, ಧ್ವನಿ ಮತ್ತು ವ್ಯಕ್ತಿತ್ವದ ಗುಣಲಕ್ಷಣಗಳನ್ನು ಬಳಸುವಂತಿಲ್ಲ. ವಕೀಲರು ಉದಾಹರಣೆ ಸಮೇತ ಅರ್ಥೈಸಿದ್ದು, ಜನರು ಅವರ ಫೋಟೋವಿರುವ ಟಿ-ಶರ್ಟ್ ಗಳನ್ನು ಮುದ್ರಿಸುತ್ತಾರೆ. ಕೆಲವರು ಅವರ ಚಿತ್ರವನ್ನು ಪೋಸ್ಟರ್ ಮಾಡಲು ಬಳಸಿದ್ದಾರೆ. ಇತರರು ಅವರ ಧ್ವನಿಯನ್ನು ಅನುಕರಿಸಿದ್ದಾರೆ. ಮತ್ತು ಆನ್ ಲೈನ್ ನಲ್ಲಿ ಜನರನ್ನು ಆಕರ್ಷಿಸಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದಿಂದ ಗೋವುಗಳ ರಕ್ಷಣೆಗೆ 100 ಕೋಟಿ ಸಹಾಯಧನ : ಸಚಿವ ಪ್ರಭು ಚೌಹಾಣ್