- Advertisement -
ಭಾರತದೆಲ್ಲೆಡೆ ಹರ್ ಘರ್ ತಿರಂಗ್ ಅಭಿಯಾನ ಸದ್ದು ಮಾಡುತ್ತಿದೆ. ಭಾರತೀಯರು ತನ್ನ ಮನೆಯಲ್ಲಿ ಇಂದಿನಿಂದಲೇ ಧ್ವಜವನ್ನು ಹಾರಿಸಿ ದೇಶ ಪ್ರೇಮವನ್ನು ಸಾರುತ್ತಿದ್ದಾರೆ.ಕೇಂದ್ರದ ಕರೆಗೆ ಗೌರವಿಸಿ ಭಾರತದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನ ಶುರುವಾಗಿದೆ.ಪ್ರತಿಯೊಬ್ಬ ಬಿಜೆಪಿ ನಾಯಕರು ಕೂಡಾ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶ ಪ್ರೇಮ ಸಾರುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ್ರು. ತಮ್ಮ ಮನೆಯ ಮೇಲೆ ಮಡದಿಯೊಂದಿಗೆ ರಾಷ್ಟ್ರ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿ ಧ್ವಜಾರೋಹಣ ಮಾಡುವ ಮೂಲಕ ದೇಶಾಭಿಮಾನ ಸಾರಿದರು. ಜೊತೆಗೆ ಈ ಹೆಮ್ಮೆಯ ದಿನದ ಸಂತಸವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡರು.
- Advertisement -