ಕರ್ನಾಟಕ ಟಿವಿ : ವಲಸಿಗ ಕಾರ್ಮಿಕರು ಒಂದೆಡೆ ನಮ್ಮೂರಿಗೆ ಕಳುಹಿಸಿ ಅಂತ ಸದ್ಯಕ್ಕೆ ತಾವಿರುವ ರಾಜ್ಯಗಳಲ್ಲಿ ಅಂಗಲಾಚುತ್ತಿದ್ದಾರೆ. ದುಡಿಮೆ ಇಲ್ಲದ ಕಾರಣ ಎಲ್ಲರೂ ಊರಿನ ಕಡೆ ಮುಖ ಮಾಡಿದ್ದಾರೆ. ಆದ್ರೆ, ತಮ್ಮ ಸ್ವಂತ ನೆಲವೇ ತಮ್ಮನ್ನ ಬೇಡಅಂದ್ರೆ ಹೇಗೆ ಆಗಬೇಡ ಹೇಲಿ. ಇಂಥಹ ಸನ್ನಿವೇಶ ನಿರ್ಮಾಣವಾಗಿರೋದು ಪಶ್ಚಿಮ ಬಂಗಾಳ ಜನರಿಗೆ. ಹೌದು, 8 ಶ್ರಮಿಕ್ ಸ್ಪೆಷಲ್ ರೈಲುಗಳು ಪಶ್ಚಿಮ ಬಂಗಾಳದ ಕಾರ್ಮಿಕರು ಊರಿಗೆ ಕರೆದುಕೊಂಡು ಹೋಗಲು ರೆಡಿ ಇವೆ. ಆದ್ರೆ, ರೈಲುಗಳನ್ನ ಪಶ್ಚಿಮ ಬಂಗಾಳಗೆ ಬಿಟ್ಟುಕೊಳ್ಳಲು ರೆಡಿ ಇಲ್ಲ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶ ಮಾಡಿದ್ದು ನಿಮ್ಮ ರಾಜ್ಯದ ಜನರನ್ನೇ ನೀವು ತಿರಸ್ಕಾರ ಮಾಡಿದ್ರೆ ಹೇಗೆ..? ಕೇಂದ್ರ ಸರ್ಕಾರ ವಲಸಿಗರನ್ನಅವರವರ ಊರುಗಳಿಗೆ ಕಳುಹಿಸಲು ಪ್ರತ್ನಿಸುತ್ತಿರುವಾಗ ನಿಮ್ಮ ವರ್ತನೆ ಸರಿ ಇಲ್ಲ. ಈ ಕೂಡಲೇ ಶ್ರಮಿಕ್ ಸ್ಪೆಷಲ್ ರೈಲು ಪಶ್ಚಿಮ ಬಂಗಾಳಕ್ಕೆ ಬರಲು ಅವಕಾಶ ಕೊಡಿ ಅಂತ ಪತ್ರ ಬರೆದಿದ್ದಾರೆ.. ಕೊರೊನಾ ಬಗ್ಗೆ ಕೇಂದ್ರ ಸರ್ಕಾರ ಕೊಟ್ಟ ಎಚ್ಚರಿಕೆ ತಿರಸ್ಕರಿಸಿ ಇದೀಗ ಬಂಗಾಳ ಕೊರೊನಾಗೆ ಬಲಿಯಾಗ್ತಿದೆ.. ಇದೀಗ ವಲಸಿಗರನ್ನೂ ಈ ರೀತಿ ಮಮತಾ ಹಿಂಸಿಸೋದು ಸರಿನಾ ಅನ್ನುವ ಪ್ರಶ್ನೆ ಉದ್ಭವವಾಗಿದೆ. ಒದುವರೆಗೂ ಪ. ಬಂಗಾಳದಲ್ಲಿ 1678 ಸೋಂಕಿತರಿದ್ದು 160 ಮಂದಿ ಸಾವನ್ನಪ್ಪಿದ್ದಾರೆ.. ದೇಶದಲ್ಲಿ ಸೋಂಕಿತರಿಗೆ ಕಂಪೇರ್ ಮಾಡಿದ್ರೆ ಅತಿ ಹೆಚ್ಚು ಸಾವು ಸಂಭವಿಸಿರೋದು ಮಮತಾ ನಾಡಿನಲ್ಲಿ ಅನ್ನೋದು ಆತಂಕಕ್ಕೆ ಕಾರಣವಾಗಿದೆ..
ಮಮತಾ ಹಠ, ವಲಸಿಗರಿಗೆ ಸಂಕಷ್ಟ. ಶಾ ಸ್ಪಷ್ಟ ಸಂದೇಶ
- Advertisement -
- Advertisement -