ಇಡೀ ದೇಶದಲ್ಲಿ ಮೋದಿ-ಅಮಿತ್ ಶಾ ಮುಂದೆ ವಿಪಕ್ಷದವರೆಲ್ಲಾ ಮಾತನಾಡದೆ ಬಿಲ ಸೇರುತ್ತಿರುವ ಸಂದರ್ಭದಲ್ಲಿ ಅಮಿತ್ ಶಾಗೆ ಸೆಡ್ಡುಹೊಡೆದು ನಿಂತದ್ದು ಕನಕಪುರದ ಬಂಡೆ ಡಿಕೆ ಶಿವಕುಮಾರ್.. ಗುಜರಾತ್ ನಲ್ಲಿ ಸೋನಿಯಾಗಾಂಧಿ ಆಪ್ತಅಹ್ಮದ್ ಪಟೇಲ್ ರನ್ನ ರಾಜ್ಯಸಭೆ ಮೆಟ್ಟಲು ಏರದಂತೆ ಮಾಡಲು ಅಮಿತ್ ಶಾ ಶಪಥ ಮಾಡಿದ್ರು. ಶಪಥ ಸತ್ಯ ಮಾಡಲು ಹೊರಟ ಅಮಿತ್ ಶಾ ಸಾಲು ಸಾಲು ಕಾಂಗ್ರೆಸ್ ಶಾಸಕರನ್ನ ರಾಜೀನಾಮೆ ಕೊಟ್ಟು ಅಹ್ಮದ್ ಪಟೇಲ್ ಗೆಲ್ಲಲು ಬೇಕಾಗುವ ನಂಬರ್ ಸಿಗದಂತೆ ಮಾಡಲು ಮುಂದಾದ್ರು.. ಈ ವೇಳೆ ಸೋನಿಯಾ, ರಾಹುಲ್ ಗಾಂಧಿ ಕಂಗಾಲಾಗಿ ಹೋದ್ರು. ಈ ವೇಳೆ ರಾತ್ರೋರಾತ್ರಿ ಕಾಂಗ್ರೆಸ್ ಶಾಸಕರನ್ನಅಮಿತ್ ಶಾ ಟೀಂ ನ ಆಪರೇಷನ್ ನಿಂದ ಬಚಾವ್ ಮಾಡಿದ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕರೆ ತಂದು ಕೂಡಿಹಾಕಿದ್ರು..
ಡಿಕೆಶಿಗೆ ಕರೆ ಮಾಡಿ ಆಫರ್ ಮಾಡಿದ್ದ ಶಾ..!
ಆ ರಾತ್ರಿ ಡಿ.ಕೆ ಶಿವಕುಮಾರ್ ಗೆ ಒಂದು ಕಾಲ್ ಬರುತ್ತೆ.. ಆ ದೂರವಾಣಿ ಧ್ವನಿ ಕೇಳಿದ ಡಿಕೆಶಿಗೆ ಒಂದು ರೀತಿಯ ಶಾಕ್ ಆದ್ರೂ ಸೌಜನ್ಯದಿಂದ ಮಾತು ಆರಂಭಿಸುವ ಡಿಕೆಶಿ ಮುಂದೆ ಆ ವ್ಯಕ್ತಿ ಇಟ್ಟ ಬೇಡಿಕೆ ಒಂದೇ.. ನೀನು ಕೂಡಿಟ್ಟಿರುವ ಶಾಸಕರಲ್ಲಿ ಐದು ಎಂಎಲ್ ಎ ಗಳನ್ನ ಕಳುಹಿಸು ನಿನಗೆ ಏನು ಬೇಕು ಹೇಳು ನಾನು ಕೊಡ್ತೀನಿ ಅಂತ.. ಆದ್ರೆ, ಡಿಕೆ ಶಿವಕುಮಾರ್ ಇಡೀ ದೇಶದಲ್ಲಿ ಅಮಿತ್ ಶಾ ಎದುರುಹಾಕಿಕೊಂಡು ಮೋದಿ ವಿರೋಧಿಗಳ ಪಾಲಿಗೆ ದೊಡ್ಡ ಹೀರೋ ಆಗಿಬಿಟ್ಟಿರ್ತಾರೆ. ಶಾಸಕರನ್ನ ಕರೆತಂದು ಕೂಡಿಟ್ಟು ಯುದ್ಧಗೆದ್ದ ಸಂಭ್ರಮದಲ್ಲಿದ್ದ ಡಿಕೆಶಿ ದೂರವಾಣಿಯಲ್ಲಿ ಆ ವ್ಯಕ್ತಿ ಇಟ್ಟ ಬೇಡಿಕೆಯ್ನ ನಯವಾಗಿ ತಿರಸ್ಕರಿಸ್ತಾರೆ. ಅಷ್ಟಕ್ಕೂ ಆ ಫೋನ್ ಕಾಲ್ ಯಾರದ್ದು ಅಂತೀರಾ..? ಅದೇ ರೀ ಒನ್ ಅಂಡ್ ಓನ್ಲಿ ಬಿಜೆಪಿ ಚಾಣಕ್ಯ.. ಅಮಿತ್ ಶಾರದ್ದು.. ಡಿಕೆಶಿ ತನ್ನ ಮಾತಿಗೆ ಒಪ್ಪದಿದ್ದಾಗ ಕರೆ ಕಟ್ ಮಾಡಿ ಅಮಿತ್ ಶಾ ಮಾಡಿದ್ದು ಒಂದೇ ಶಪಥ.. ಡಿಕೆಶಿ ಒಂದು ಬಿಜೆಪಿ ಸೇರಬೇಕು ಇಲ್ಲ ಜೈಲು ಸೇರಬೇಕು ಅಂತ.. ಮರುದಿನವೇ ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ರೇಡ್ ಆಗುತ್ತೆ ಅಲ್ಲಿಂದಲೇ ಶಿವಕುಮಾರ್ ಗೆ ಶನಿಕಾಟ ಶುರುವಾಗೋದು.. ಡಿಕೆಶಿಯನ್ನ ಮಾತಿನಲ್ಲೇ ಬಗ್ಗಿಸಬಹುದು ಎಂದು ಅಮಿತ್ ಶಾ ಅಂದುಕೊಂಡಿದ್ರು. ಆದ್ರೆ ಅದು ಸಾಧ್ಯವಾಗದಿದ್ದಾಗ ಐಟಿ ಅಸ್ತ್ರವನ್ನ ಪ್ರಯೋಗ ಮಾಡಿ ಭಯಬೀಳಿಸೋಕೆ ಟ್ರೈ ಮಾಡ್ತಾರೆ. ಯಾವುದಕ್ಕೂ ಜಗ್ಗದ ಕನಕಪುರದ ಬಂಡೆ ಗುಜರಾತ್ ಕಾಂಗ್ರೆಸ್ ಶಾಸಕರನ್ನ ಹೋಟೆಲ್ ನಿಂದ ಕದಲದಂತೆ ನೋಡಿಕೊಳ್ತಾರೆ.. ಅವತ್ತು ಡಿ.ಕೆ ಶಿವಕುಮಾರ್ ಗುಜರಾತ್ ಕಾಂಗ್ರೆಸ್ ಶಾಸಕರನ್ನ ಬೆಂಗಳೂರಿಗೆ ಕರೆತರದಿದ್ರೆ ಅಮಿತ್ ಶಾ ಟೀಂ ಹತ್ತಕ್ಕೂ ಹೆಚ್ಚು ಶಾಸಕರನ್ನ ಹೈಜಾಕ್ ಮಾಡಿ ಸೋನಿಯಾ ಗಾಂಧಿಯ ಆಪ್ತಅಹ್ಮದ್ ಪಟೇಲ್ ರನ್ನ ರಾಜ್ಯಸಭಾ ಚುನಾವಣೆಯಲ್ಲಿ ಹೀನಾಯವಾಗಗಿ ಸೋಲುವಂತೆ ಮಾಡ್ತಿತ್ತು.. ಇಷ್ಟಾದರೂ ಡಿಕೆಶಿ ಕರೆತಂದಿದ್ದ ಇಬ್ಬರು ಶಾಸಕರು ಕ್ರಾಸ್ ವೋಟಿಂಗ್ ಮಾಡ್ತಾರೆ. ಮತ ಹಾಕುವಾಗ ಬಿಜೆಪಿ ಏಜೆಂಟ್ ಗೆ ಬಿಜೆಪಿಗೆ ಮತಹಾಕಿರುವುದಾಗಿ ತೋರಿಸಿದ ಕಾಂಗ್ರೆಸ್ ಶಾಸಕ ಗುಪ್ತಮತದಾನ ಉಲ್ಲಂಘಿಸಿ ಮತ ಅಸಿಂಧುಗೊಂಡು ಅಮಿತ್ ಶಾ ಪ್ಲಾನ್ ಫ್ಲಾಪ್ ಆಗುತ್ತೆ..
ಡಿಕೆಶಿಗೆ ಸಿಎಂ ಸ್ಥಾನದ ಆಫರ್ ಮಾಡಿದ್ದಅಮಿತ್ ಶಾ..!
ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಮುಖಭಂಗವಾದ ಮೇಲೆ ಅಮಿತ್ ಶಾ ಸುಮ್ಮನಾಗೋದಿಲ್ಲ ದಕ್ಷಣ ಭಾರತದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಯಾರನ್ನ ಪಕ್ಷಕ್ಕೆ ಕರೆತಬೇಕು ಅನ್ನೋ ಪ್ರಶ್ನೆ ಎದುರಾದಾಗ ಮತ್ತೆ ಅಮಿತ್ ಶಾ ಲಿಸ್ಟ್ ನಲ್ಲಿ ಮೊದಲ ಹೆಸರು ಬರೋದು ಕನಕಪುರದ ಬಂಡೆ ಹೆಸರು.. ಕೇರಳಾ, ತೆಲಂಗಾಣ, ಆಂಧ್ರದಲ್ಲಿ ಡಿಕೆಶಿ ತಂತ್ರಗಾರಿಕೆ ಮಾಡುವಲ್ಲಿ ನಿಪುಣ ಹೀಗಾಗಿ ಲೋಕಸಭಾ ಚುನಾವಣೆ ಸಂದರ್ಭ ಮತ್ತೆ ಡಿಕೆಶಿಯನ್ನ ಬಿಜೆಪಿ ಸೇರ್ಪಡೆಯಾಗಲು ಆಹ್ವಾನ ಬರುತ್ತೆ.. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಪ್ರಧಾನಿಯಾಗೋದು ನಿಶ್ಚಿತ. ರಾಜ್ಯದಲ್ಲೂ ದೋಸ್ತಿ ಸರ್ಕಾರಕ್ಕೆ ಎಳ್ಳು ನೀರು ಬಿಟ್ಟು ಬಿಜೆಪಿ ಸೇರ್ಕೋ.. ಒಂದು ವರ್ಷಗಳ ಕಾಲ ಯಡಿಯೂರಪ್ಪ ಸಿಎಂ ಆಗಲಿ.. 2020ಗೆ ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಬಿಜೆಪಿಯ ಸಿಎಂ ಆಗೋದು ಪಕ್ಕಾ ಅಂತ ಅಮಿತ್ ಶಾ ಟೀಂ ಡಿಕೆ ಮುಂದೆ ಬಿಗ್ ಆಫರ್ ಇಡುತ್ತೆ. ಆದ್ರೆ ಕನಕಪುರದ ಬಂಡೆ ಈ ದೊಡ್ಡ ಆಫರ್ ಅನ್ನು ಕಾಲು ಕಸದಂತೆ ಕಂಡು ಸುಮ್ಮನಾಗುತ್ತೆ..
ಡಿಕೆಶಿ ಸಾಮ್ರಾಜ್ಯದ ಮೇಲೆ 3 ದಿನ ನಿರಂತರ ಐಟಿ ರೇಡ್..!
ಅಮಿತ್ ಶಾ ಕೊಟ್ಟ ಸಿಎಂ ಆಫರ್ ತಿರಸ್ಕಾರ ಮಾಡುವ ಡಿಕೆಶಿ ಮನೆ ಮೇಲೆ ಬಹುದೊಡ್ಡ ಐಟಿ ರೇಡ್ ಆಗುತ್ತೆ.. ಇಷ್ಟದ್ರೂ ಕನಕಪುರದ ಬಂಡೆ ಜಗ್ಗೋದಿಲ್ಲ.. ಡಿಕೆ ಸಹೋದರರಿಬ್ಬರು ಪ್ರೆಸ್ ಮಿಟ್ ಮಾಡಿ ಮೋದಿ-ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ಮಾಡ್ತಾರೆ.. ಐಟಿ ರೇಡ್ ಮಾಡಿ ಬೆದರಿಸಲು ಆಗಲ್ಲ ನಾವು ಕನಕಪುರದಿಂದ ರಾಜಕೀಯ ಮಾಡಲೇ ಬಂದಿದ್ದೇವೆ ಅಂತ ಶಾಗೆ ಸವಾಲು ಹಾಕ್ತಾರೆ..
ಡಿಕೆ ಬ್ರದರ್ಸ್ ಧೈರ್ಯಕ್ಕೆ ಮೋದಿ-ಶಾಗೆ ಫುಲ್ ಶಾಕ್
ಇನ್ನು ತಾನು ಪ್ರಯೋಗಿಸಿದ ಯಾವ ದಂಡಕ್ಕೂ ಡಿಕೆ ಬ್ರದರ್ಸ್ ಬಗ್ಗದ್ದನ್ನ ಕಂಡ ಮೋದಿ-ಅಮಿತ್ ಶಾ ದಂಗಾಗಿ ಹೋಗ್ತಾರೆ.. ಮುಂದೇನು ಅಂತ ಗೊತ್ತಾಗದೆ ಡಿಕೆಶಿ ವಿಚಾರದಲ್ಲಿ ಸುಮ್ಮನಾಗಿ ಹೋಗ್ತಾರೆ..
ಮೋದಿ ಮತ್ತೆ ಪ್ರಧಾನಿ ಆದ್ಮೇಲೂ ಸೈಲೆಂಟ್ ಆಗದ ಡಿಕೆಶಿ..!
ಮೋದಿ ಮತ್ತೆ ಪ್ರಧಾನಿ ಆದ್ಮೇಲೆ ಡಿಕೆ ಫುಲ್ ಸೈಲೆಂಟ್ ಆಗ್ತಾರೆ ಅಂತ ಎಲ್ರೂ ಭಾವಿಸಿದ್ರು. ಆದ್ರೆ ದೋಸ್ತಿ ಸರ್ಕಾರದ ಚೌಕಿದಾರ್ ರೀತಿ ಡಿಕೆಶಿ ಕುಮಾರಸ್ವಾಮಿ ಸರ್ಕಾರ ಸೇಫ್ ಮಾಡಲು ಪ್ರಾಮಾಣಿಕ ಪ್ರಯತ್ನ ಪಟ್ರು.. ಏಳನೇ ಬಾರಿ ಆಪರೇಷನ್ ಕಮಲದ ಪ್ರಯುಕ್ತ ಶಾಸಕರು ವಿಧಾನಸೌಧಕ್ಕೆ ಬಂದಾಗ ಆ ಕ್ಷಣ ಕನಕಪುರದಲ್ಲಿದ್ದ ಡಿಕೆಶಿ ಒಂದೇ ಉಸಿರಿನಲ್ಲಿ ಓಡೋಡಿ ಬಂದು ವಿಧಾನಸೌಧದ ಸ್ಪೀಕರ್ ಕೊಠಡಿಯಲ್ಲಿ ರಾಜೀನಾಮೆ ಪತ್ರವನ್ನ ಹರಿದು ಹಾಕಿ ಶಾಸಕರನ್ನ ಉಳಿಸಿಕೊಳ್ಳಲು ಯತ್ನಿಸಿದ್ರು. ನಂತರ ರೆಬಲ್ ಶಾಸಕರು ಮುಂಬೈ ಹೋಟೆಲ್ ಸೇರಿದಾಗ ಹೋಟೆಲ್ ಮುಂದೆ ದೊಡ್ಡ ಹೈಡ್ರಾಮಾ ಮಾಡಿದ್ರು. ಅಲ್ಲಿವರೆಗೂ ಅಮಿತ್ ಶಾಗೆ ಲವ್ವರ್ ಬಾಯ್ ಆಗಿದ್ದ ಡಿಕೆಶಿ ಕೆಂಗಣ್ಣಿಗೆ ಗುರಿಯಾದ್ರು..
ಕಾಫೀ ಡೇ ಸಿದ್ಧಾರ್ಥ ಸತ್ತ ಮೇಲೆ ಸೈಲೆಂಟ್ ಆದ ಡಿಕೆಶಿ..!
ಸಿದ್ಧಾರ್ಥ ಸಾವಿನ ದಿನ ಐಟಿ ಮೇಲೆ ಮುಗಿಬಿದ್ದಿದ್ದ ಡಿಕೆಶಿ ಮರುದಿನದಿಂದ ಐಟಿ, ಇಡಿ ಬಗ್ಗೆ ಫುಲ್ ಸೈಲೆಂಟ್ ಆದ್ರು.. ಐಎನ್ ಎಕ್ಸ್ ಮೀಡಿಯಾ ಕೇಸ್ ನಲ್ಲಿ ಪಿ ಚಿದಂಬರಂ ರನ್ನ ಗೇಟ್ ಹಾರಿ ಸಿಬಿಐ ಬಂಧಿಸಿದ ಮೇಲೆ ಕನಕಪುರದ ಬಂಡೆಗೂ ಢವಢವ ಶುರುವಾಗಿತ್ತು.. ಇದೀಗ ಬಿಜೆಪಿ ಚಾಣಾಕ್ಯಅಮಿತ್ ಶಾ ಜಾತಿಗೊಂದರಂತೆ ಮೂರು ಡಿಸಿಎಂ ಮಾಡಿ ಬಿಜೆಪಿಗೆ ಡಿಕೆಶಿ ಅವಶ್ಯಕತೆ ಇಲ್ಲ.. ಇನ್ನು ಡಿಕೆಶಿಯನ್ನ ತಾನು ಮೊದಲು ನಿಶ್ಚಯಿಸಿದಂತೆ ಜೈಲಿಗೆ ಕಳುಹಿಸಲು ಎಲ್ಲಾ ಅಸ್ತ್ರಗಳನ್ನ ಪ್ರಯೋಗ ಮಾಡಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಡಿಕೆಶಿ ವರ್ಷದ ಹಿಂದೆ ಬಂದ ಪ್ರಪೋಸಲ್ ಒಪ್ಪಿಕೊಂಡ್ರೆ, ಕಮಲವನ್ನಅಪ್ಪಿಕೊಂಡ್ರೆ ಭಾರೀ ಸಮಸ್ಯೆಯಿಂದ ಪಾರಾಗಬಹುದೇನೋ.. ಇಲ್ಲದಿದ್ದರೆ ಕರ್ನಾಟಕದ ಗಂಡೆದೆಯ ರಾಜಕಾರಣಿಯ ಜೀವನದಲ್ಲಿ ಜೈಲು ಸೇರಿದ ಕಪ್ಪುಚುಕ್ಕೆ ದೊಡ್ಡದಾಗಿ ಉಳಿದುಕೊಳ್ಳಬಹುದು..
ಈಗ ಎಲ್ಲರನ್ನೂ ಕಾಡ್ತಿರುವ ಪ್ರಶ್ನೆ ಡಿಕೆಶಿಗೆ ಕಮಲದ ಮೇಲೆ ಲವ್ ಆಗುತ್ತಾ..? ಇಲ್ಲ ಅಮಿತ್ ಶಾ ಖೆಡ್ಡಾದಲ್ಲಿ ಸಿಕ್ಕಿ ಬೀಳ್ತಾರಾ ಕಾದು ನೋಡಬೇಕಿದೆ..