Film News : ತೆರೆ ಮೇಲೆ ಅವರು ಬೆಸ್ಟ್ ಜೋಡಿಯಾಗಿ ಮಿಂಚಿದ್ರು. ಡಾಲಿ ಅಮೃತ ಕಾಂಬಿನೇಶನ್ ಕನ್ನಡಿಗರಿಗೆ ಅಚ್ಚು ಮೆಚ್ಚಾಗಿತ್ತು. ಇಬ್ರು ಹೀಗೆ ನಿಜ ಜೀವನದಲ್ಲಿ ಜೋಡಿಯಾಗಿಯೇ ಇರಲಿ ಅನ್ನೋದೆ ಅವರ ಅಭಿಮಾನಿಗಳ ಆರೈಕೆ ಆದ್ರೆ ಇದಕ್ಕೆಲ್ಲ ಫುಲ್ ಸ್ಟಾಪ್ ಇಡಲು ಅಮೃತಾ ಹೇಳಿಕೆಯೊಂಧನ್ನು ನೀಡಿದ್ದಾರೆ. ಹಾಗಿದ್ರೆ ಇಬ್ರೂ ಮದುವೆ ಆಗ್ತಿದ್ದಾರಾ ಏನದು ಅಮೃತಾ ಮಾತು ಹೇಳ್ತೀವಿ ಈ ಸ್ಟೋರಿಯಲ್ಲಿ…
ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ಹೊಯ್ಸಳ ಸಿನಿಮಾದಲ್ಲಿ ಡಾಲಿ- ಅಮೃತಾ ಒಟ್ಟಿಗೆ ನಟಿಸಿದ್ದರು. ಜನರಿಗೆ ಇವರಿಬ್ಬರ ಜೋಡಿ ತುಂಬಾನೆ ಹಿಡಿಸಿತ್ತು. ಇಬ್ಬರ ಜೋಡಿ ಇಷ್ಟವಾಗುತ್ತಿದ್ದಂತೆ ಗಾಸಿಪ್ ಕೂಡ ದೊಡ್ಡ ಮಟ್ಟದಲ್ಲಿ ಹಬ್ಬಿತ್ತು. ಸಾಕಷ್ಟು ಕಡೆ ಇಬ್ಬರಿಗೂ, ಮದುವೆ ಬಗ್ಗೆ ಸ್ನೇಹಿತರು & ಅಭಿಮಾನಿಗಳು ಕೇಳ್ತಾ ಇದ್ರು. ಇದಕ್ಕೆಲ್ಲಾ ನಟಿ ಉತ್ತರ ನೀಡಿದ್ದಾರೆ .
ಡಾಲಿ- ಅಮೃತಾ ಡೇಟಿಂಗ್ ಮಾಡ್ತಿದ್ದಾರಾ ಎಂಬ ಬಗ್ಗೆ ಅಮೃತಾ ನೇರವಾಗಿ ಸಂದರ್ಶನವೊಂದರಲ್ಲಿ ಸ್ಪಷ್ಟನೆ ಕೂಡಾ ನೀಡಿದ್ದಾರೆ. ನನಗೆ ಗೊತ್ತು ಅಭಿಮಾನಿಗಳು ನನ್ನ ಮತ್ತು ಡಾಲಿ ಜೋಡಿಯನ್ನ ತೆರೆಯ ಮೇಲೆ ನೋಡೋದಕ್ಕೆ ಇಷ್ಟಪಡ್ತಾರೆ ಅಂತಾ. ನಾವು ಮೂರು ಸಿನಿಮಾಗಳನ್ನ ಒಟ್ಟಿಗೆ ಮಾಡಿದ್ದೇವೆ. ಹಾಗಾಗಿ ನಮ್ಮನ್ನ ನೋಡಿ ನಮ್ಮ ನಡುವೆ ಏನೋ ಇದೆ ಅಂತಾ ಊಹೆ ಮಾಡುತ್ತಾರೆ.
ತೆರೆಮೇಲಿನ ಜೀವನಕ್ಕಿಂತ ತೆರೆಹಿಂದೆ ಬೇರೇ ಏನೋ ಇದೆ ಅಂತಾ ನಮ್ಮ ಬಗ್ಗೆ ಯೋಚಿಸುತ್ತಾರೆ. ನಾನು ಡಾಲಿ ಅವರೊಂದಿಗೆ ಕೆಲಸ ಮಾಡಲು ಕಂಫರ್ಟ್ ಆಗಿದ್ದೇನೆ. ನಮ್ಮ ನಡುವೆ ಒಳ್ಳೆಯ ಸ್ನೇಹವಿದೆ ಎಂದಿದ್ದಾರೆ. ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ನಟಿ ಅಮೃತಾ ಡಾಲಿ ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಮೂಲಕ ನಮ್ಮ ನಡುವೆ ಏನಿಲ್ಲ, ನಾವು ಒಳ್ಳೆಯ ಸ್ನೇಹಿತರು ಎಂಬುವುದಾಗಿ ನಟಿ ಅಮೃತಾ ಖಚಿತಪಡಿಸಿದ್ದಾರೆ. ಸದ್ಯ ನಟ ಶರಣ್‌ಗೆ ಅಮೃತಾ ನಾಯಕಿಯಾಗಿದ್ದಾರೆ. ಡಿಫರೆಂಟ್ ಆಗಿರೋ ಕಥೆಯಲ್ಲಿ ಅಮೃತಾ ಪಾತ್ರಕ್ಕೂ ಪ್ರಾಮುಖ್ಯತೆಯಿದೆ. ಸಿನಿಮಾಗಾಗಿ ಉತ್ತರ ಕರ್ನಾಟಕ ಭಾಷೆಯನ್ನ ನಟಿ ಕಲಿಯುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
Rashmika mandanna-ವಿಜಯ್ ದೇವರಕೊಂಡ ಹಾಕಿರುವ ಅಂಗಿ ತರಾ ಇದೆ ಅಲ್ವಾ ..?