- Advertisement -
www.karnatakatv.net :ಹುಬ್ಬಳ್ಳಿ: ಇಷ್ಟು ದಿನಗಳ ಕಾಲ ಗಣೇಶೋತ್ಸವದಲ್ಲಿ ತೀರ್ಥ, ಪ್ರಸಾದ ವಿತರಣೆ ಮಾಡಲಾಗುತ್ತಿತ್ತು ಆದರೆ ಕಿಲ್ಲರ್ ಕೊರೋನಾ ವೈರಸ್ ಬಂದಾಗಿನಿಂದ ತೀರ್ಥ, ಪ್ರಸಾದದ ತರಹ ವ್ಯಾಕ್ಸಿನ್ ಕೊಡಲು ಹುಬ್ಬಳ್ಳಿ ನಗರ ಮುಂದಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಶ್ರೀಕೃಷ್ಣ ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಭಕ್ತರಿಗೆ ಹಾಗೂ ಗಣೇಶ ಮಂಡಳಿಯವರಿಗೆ ಲಸಿಕೆ ವಿತರಣೆ ಮಾಡಲಾಯಿತು. ಮೂರ್ತಿ ವಿಸರ್ಜನೆಗೆ ಹೋಗುವವರಿಗೆ ಹಾಗೂ ದರ್ಶನಕ್ಕೆ ಬರುವವರಿಗೆ ಕಿಲ್ಲರ್ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಲು ವ್ಯಾಕ್ಸಿನ್ ಅಭಿಯಾನ ಕೈಗೊಳ್ಳಲಾಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ನೇತೃತ್ವದಲ್ಲಿ ಈ ಒಂದು ಲಸಿಕಾ ಅಭಿಯಾನ ಮಾಡುವ ಮೂಲಕ ಲಸಿಕಾ ವಿತರಣೆ ಮೂಲಕ ಗಣೇಶೋತ್ಸವ ಆಚರಣೆ ಮಾಡಲಾಯಿತು.
ಕರ್ನಾಟಕ ಟಿವಿ- ಹುಬ್ಬಳ್ಳಿ
- Advertisement -