ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ ಮೇಲೆ ಅಟ್ಯಾಕ್!‌

ಬೆಂಗಳೂರು : ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ ಅವರ ಮೇಲೆ ದುಷ್ಕರ್ಮಿಗಳು ಅಟ್ಯಾಕ್‌ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮ ಸಿನಿಮಾದ ಚಿತ್ರೀಕರಣಕ್ಕೆ ತೆರಳುವ ಮುನ್ನ ದೊಡ್ಡಬಳ್ಳಾಪುರದ ದೇವಸ್ಥಾನವೊಂದಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ದೇವಸ್ಥಾನದಿಂದ ವಾಪಸ್‌ ಆಗುತ್ತಿದ್ದಾಗ ಕಾರಿಗೆ ಅಡ್ಡ ಬಂದು ಪ್ರಥಮ್‌ರನ್ನು ಒತ್ತಾಯ ಪೂರ್ವಕವಾಗಿ ದುಷ್ಕರ್ಮಿಗಳು ಕರೆದೊಯ್ದಿದ್ದಾರೆ. ಅಲ್ಲದೆ ಅವ್ಯಾಚ್ಚವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಡ್ರ್ಯಾಗರ್‌ ತೋರಿಸಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ನಮ್ಮ ಬಾಸ್‌ಗೆ ಮಾತನಾಡ್ತೀಯಾ ಎಂದು ಗದರಿಸಿದ್ದಾರೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಥಮ್‌ ವ್ಯಕ್ತಿಯೊಬ್ಬರ ಜೊತೆ ಮಾತನಾಡಿರುವ ಆಡಿಯೋ ಕೂಡ ವೈರಲ್‌ ಆಗಿದೆ.

ಅಲ್ಲದೆ ಪ್ರಥಮ್‌ ಸಮೀಪದಲ್ಲಿದ್ದ‌‌ ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್‌ ಬುಲೆಟ್‌ ಪ್ರಥಮ್‌ ನೆರವಿಗೆ ಬರಲಿಲ್ಲ. ಪ್ರಥಮ್‌ ದರ್ಶನ್‌ ಬಗ್ಗೆ ಮಾತನಾಡಿದ್ದರು, ಇದೇ ಕಾರಣಕ್ಕಾಗಿಯೇ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಾನು ಆಡಿರುವ ಮಾತಿನಿಂದ ನಟ ದರ್ಶನ್‌ ಅಭಿಮಾನಿಗಳು ನನ್ನನ್ನು ಸುತ್ತುವರಿದಿದ್ದರು, ಆಗ ಡ್ರ್ಯಾಗರ್‌ ತೋರಿಸಿದ್ದಾರೆ ಎಂದು ಪ್ರಥಮ್‌ ಹೇಳಿದ್ದಾರೆ.

ಘಟನೆಯ ಬಳಿಕ ನೇರವಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ದೂರು ನೀಡುವಂತೆ ಬಾಬಾ ಅವರು ತಿಳಿಸಿದ್ದಾರೆ.

ಇನ್ನೂ ನಟ ಪ್ರಥಮ್‌ ಅವರ ಮೇಲೆ ಹಲ್ಲೆಗೆ ಯತ್ನ ಹಾಗೂ ಜೀವ ಬೆದರಿಕೆಯ ಆರೋಪ ಕೇಳಿ ಬಂದಿದೆ. ದೇವಸ್ಥಾನಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಅಂತೆ, ಅವರನ್ನು ಈಗಾಗಲೇ ಕರೆದು ಮಾತನಾಡಿದ್ದೇನೆ. ಈ ಬಗ್ಗೆ ದೂರು ನೀಡಲು ಅವರಿಗೆ ತಿಳಿಸಿದ್ದೇನೆ, ಆದರೆ ಈವರೆಗೂ ಯಾವುದೇ ದೂರನ್ನು ಸ್ವೀಕರಿಸಿಲ್ಲ. ದೂರಿನ ಬಳಿಕ ಪ್ರಕರಣದ ತನಿಖೆ ಮಾಡಲಾಗುವುದು ಎಂದು ಎಸ್ಪಿ ಸಿ ಕೆ ಬಾಬಾ ತಿಳಿಸಿದ್ದಾರೆ. ಆದರೆ ಪ್ರಥಮ್‌ ಮೇಲೆ ಅಟ್ಯಾಕ್‌ ನಡೆದಿರುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಿಜವಾಗಿಯೂ ಯಾವ ಕಾರಣಕ್ಕೆ ದಾಳಿ ನಡೆಯಿತು ಎನ್ನುವುದು ಪ್ರಥಮ್‌ ದೂರಿನ ಬಳಿಕ ಖಾಕಿ ತನಿಖೆಯಲ್ಲಿ ತಿಳಿಯಲಿದೆ.

About The Author