Saturday, May 10, 2025

Latest Posts

ಧರ್ಮಾಧಿಕಾರಿ ಸಾವಿನ ಪ್ರಕರಣದ ಬಗ್ಗೆ ಕುತೂಹಲಕಾರಿ ಸತ್ಯ ಬಾಯ್ಬಿಟ್ಟ ಆರೋಪಿ

- Advertisement -

Hubli News: ಹಾವಿನ ದ್ವೇಷ ಹನ್ನೆರಡು ವರ್ಷ..ನನ್ನ ರೋಷ ನೂರು ವರ್ಷ..ಇದು ನಾಗರಹಾವು ಸಿನಿಮಾದ ಹಾಡು… ಈ ಹಾಡಿನ ಸಾಲುಗಳು ಈ ಪ್ರಕರಣಕ್ಕೆ ಪಕ್ಕಾ ಮ್ಯಾಚ್ ಆಗುತ್ತೆ..ಮಾಟ, ಮಂತ್ರ, ತಂತ್ರದಿಂದ ಸತತ 26 ವರ್ಷದಿಂದ ನೆಮ್ಮದಿ ಹಾಳು ಮಾಡಿದ ವ್ಯಕ್ತಿಯನ್ನು ಹೊಂಚು ಹಾಕಿ‌ ಹತ್ಯೆ ಮಾಡಿ ಸೇಡು ತೀರಿಸಿಕೊಂಡ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಪೊಲೀಸ್ ಯಶಸ್ವಿಯಾಗಿದ್ದಾರೆ. ಆತಂಕ ಸೃಷ್ಟಿ ಮಾಡಿದ್ದ ಹುಬ್ಬಳ್ಳಿ ವೈಷ್ಣದೇವಿ ದೇವಸ್ಥಾನ ಧರ್ಮಾಧಿಕಾರಿ ಹತ್ಯೆ ಪ್ರಕರಣದ ಕುತೂಹಲಕಾರಿ ಸತ್ಯವನ್ನು ಆರೋಪಿ ಹೊರಹಾಕಿದ್ದಾನೆ..

ಪೊಲೀಸ್ ಬಲೆಗೆ ಸೆರೆ ಸಿಕ್ಕ ಹುಬ್ಬಳ್ಳಿ ವೈಷ್ಣದೇವಿ ದೇವಸ್ಥಾನ ಧರ್ಮಾಧಿಕಾರಿ ಹತ್ಯೆ ಹಂತಕ.

ಧರ್ಮಾಧಿಕಾರಿ ಶುದ್ರ ಪೂಜೆಯೇ ಹತ್ಯೆಗೆ ಮೂಲ ಕಾರಣ.

26 ವರ್ಷದಿಂದ ಮಾನಸಿಕ ನೆಮ್ಮದಿ ಹಾಳು ಮಾಡಿದ್ದ ಧರ್ಮಾಧಿಕಾರಿ ಮೇಲೆ ಸೇಡು ತೀರಿಸಿಕೊಂಡ ಆರೋಪಿ.

ಹತ್ಯೆಯ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಹೊರ ಹಾಕಿದ ಆರೋಪಿ ಸಂತೋಷ ಭೋಜಗಾರ.

ತೀವ್ರ ಆತಂಕ ಸೃಷ್ಟಿ ಮಾಡಿದ್ದ ಹುಬ್ಬಳ್ಳಿ ಈಶ್ವರಿ ನಗರದ ವೈಷ್ಣದೇವಿ ದೇವಸ್ಥಾನ ಧರ್ಮಾಧಿಕಾರಿ ದೇವೆಂದ್ರಪ್ಪಜ್ಜ ಹತ್ಯೆಯ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.. ಮಾಟ,ಮಂತ್ರದ ಹೆಸರನ್ನಲ್ಲಿ ದೇವೇಂದ್ರಪ್ಪಜ್ಜ ನೀಡಿದ ಮಾನಸಿಕ ಕಿರಿಕಿರಿಯೇ ಹತ್ಯೆಗೆ ಕಾರಣ ಅಂತ ಸ್ವತಃ ಆರೋಪಿ ಸಂತೋಷ ಭೋಜಗಾರ ಹೇಳಿಕೆ ನೀಡಿದ್ದಾನೆ..ಭಾನುವಾರ ರಾತ್ರಿ ವೈಷ್ಣದೇವಿ ದೇವಸ್ಥಾನ ಹಿಂಭಾಗದಲ್ಲಿಯೇ ದೇವೇಂದ್ರಪ್ಪಜ್ಜನನ್ನು ಕೊಲೆ ಮಾಡಿ, ಸಂತೋಷ ಪರಾರಿಯಾಗಿದ್ದ.. ಆರೋಪಿ ಪತ್ತೆಗಾಗಿ ಕಮಿಷನರ್ ಎನ್ ಶಶಿಕುಮಾರ್ ಏಂಟು ತಂಡಗಳನ್ನು ರಚನೆ ಮಾಡಿ ಶೋಧಕಾರ್ಯ ನಡೆಸಿದ್ದರು..ಕೊನೆಗೂ ಕಾನೂನು ಸುವ್ಯವಸ್ಥೆ ನಂದಗಾವಿ ಮತ್ತು ಎಸಿಪಿ ಶಿವಪ್ರಕಾಶ್ ನಾಯ್ಕ ತಂಡ ನಿನ್ನೆ ತಡರಾತ್ರಿ ಚೆನ್ನಮ್ಮ ವೃತ್ತದಲ್ಲಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ..

ಬಂಧನದ ವೇಳೆ ಹತ್ಯೆಗೆ ಕಾರಣವನ್ನು ಆರೋಪಿ ಸಂತೋಷ ಭೋಜಗಾರ ಹೊರಹಾಕಿದ್ದಾನೆ..ದೇವೇಂದ್ರಪ್ಪಜ್ಜ ಮಾಟ ಮಂತ್ರದ ವಿಚಾರ ಬಹಿರಂಗ ಮಾಡಿದ್ದಾನೆ. 1998 ರಲ್ಲಿ ಆರೋಪಿ ಸಂತೋಷ ಒಂದು ಹುಡುಗಿಯನ್ನ ಪ್ರೀತಿ ಮಾಡ್ತಿದ್ದ ಆ ಹುಡುಗಿಯನ್ನ ಆರೋಪಿ ದೂರ ಮಾಡಿದ್ದು ಇದೇ ದೇವೇಂದ್ರಪ್ಪಜ್ಜ.. ಸಂತೋಷನ ಹುಡುಗಿ ಮನೆಯವರ ತಲೆ ತುಂಬಿ ಶುದ್ರ ಪೂಜೆ ಮಾಡಿಸಿ ಹುಡುಗಿ ದೂರವಾಗುವಂತೆ ಮಾಡಿದ್ದ ಎನ್ನಲಾಗಿದೆ.. ಅಂದಿನಿಂದ ದೇವೇಂದ್ರಪ್ಪಜ್ಜ ಮತ್ತು ಸಂತೋಷನ ನಡುವೆ ದ್ವೇಷಕ್ಕೆ ಮೊದಲ‌ ಕಾರಣ..

ಇದಾದಮೇಲೆ ಸಂತೋಷ ಬೇರೆ ಮದುವೆ ಮಾಡಿಕೊಂಡು ಹೇಗೋ‌ ಜೀವನ ನಡೆಸುತ್ತಿದ್ದ, ಈ ಮಧ್ಯೆ ಸಂತೋಷ ಅತ್ತೆ-ಮಾವನ ಸಹ ದೇವೇಂದ್ರಪ್ಪಜ್ಜ ಜಪ ಮಾಡಲು ಶುರು ಮಾಡಿದ್ದರಂತೆ, ಸಂತೋಷ ಅತ್ತೆ- ಮಾವ ದೇವೇಂದ್ರಪ್ಪಜ್ಜನ ಜೊತೆಗೆ ಸೇರೆ ಮಾಟ,ಮಂತ್ರ ಪೂಜೆ ಮಾಡಿಸಿ, ಅವರ ಕುಟುಂಬಸ್ಥರ ಮಾನಸಿಕ ಕಿರಿಕಿರಿ ಉಂಟಾಗುವಂತೆ ಮಾಡಿದ್ದರಂತೆ.. ಇದರಿಂದಾಗಿ ದೇವೇಂದ್ರಪ್ಪ ಮೇಲೆ ತೀವ್ರ ಹತಾಶೆಗೊಂಡಿದ್ದ ಸಂತೋಷ ಕೊಲೆ ಮಾಡಲು ಪ್ಲಾನ್ ಮಾಡಿದ್ದ..2022 ರಲ್ಲಿ ಮೊದಲ ಬಾರಿಗೆ ವಿದ್ಯಾನಗರದ ದೇವೇಂದ್ರಪ್ಪನ ಮನೆಯ ಮುಂದೆಯೇ ಅಟ್ಯಾಕ್ ಮಾಡಿದ್ದ ಸಂತೋಷ್..

ಆದ್ರೆ ಅದೃಷ್ಟವಶಾತ್ ಅರ್ಚಕ ಬಚಾವ್ ಆಗಿದ್ದ..ಅದಕ್ಕೆ ಕಾರಣ ಚಾಕು ಆ ಸಮಯದಲ್ಲಿ ಕಡಿಮೆ ದುಡ್ಡಿನಿಂದ ಚಾಕು ಖರೀದಿ ಮಾಡಿದ್ದ ಸಂತೋಷ, ಚಾಕು ಹಾಕೋ ಸಮಯದಲ್ಲಿ ಅದು ಮುರಿದು ಹೋಗಿದೆ ಈ ಕಾರಣಕ್ಕೆ ಬಚಾವ್ ಆಗಿದ್ದ.ಅಲ್ಲಿಂದ ಇಲ್ಲಿವರೆಗೂ ದೇವೇಂದ್ರಪ್ಪಜ್ಜನ ಫಾಲೋ ಮಾಡಿದ ಸಂತೋಷ್ ಪ್ರತಿಯೊಂದು ಹೆಜ್ಜೆ ಗಮನಿಸುತ್ತಿದ್ದ.ಅದರಂತೆ ಕಳೆದ ಎರಡು ದಿನಗಳ ಹಿಂದೆ ಕೊಲೆ ಮಾಡಲು ಸ್ಕೆಚ್ ಹಾಕಿ,ದೇವೆಂದ್ರಪ್ಪ ದೇವಸ್ಥಾನದಿಂದ ಹೊರಗೆ ಬರುತ್ತಲೆ ಚಾಕು ಹಾಕಿ ಪರಾರಿಯಾಗಿದ್ದ,ಈ ಬಾರಿ 250 ರೂಪಾಯಿ ಕೊಟ್ಟು ಆರೋಪಿ ಹೊಸ ಚಾಕು ಖರೀದಿ ಮಾಡಿದ್ದನಂತೆ.

ಒಟ್ಟಿನಲ್ಲಿ ಹುಬ್ಬಳ್ಳಿ ಜನರ ಜೊತೆಗೆ ಪೊಲೀಸ್ ಇಲಾಖೆ ನಿದ್ದೆಗೆಡಿಸಿದ್ದ ಧರ್ಮಾಧಿಕಾರಿ ಹತ್ಯೆ ರಹಸ್ಯ 24 ಗಂಟೆಯಲ್ಲಿ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ದುಷ್ಟ ಶಕ್ತಿಗಳ ಆರಾಧನೆ ಮಾಡಿ ದೇವೇಂದ್ರಪ್ಪಜ್ಜ ಬಿದಿ ಹೆಣವಾಗಿದ್ರೆ, ಹತಾಶೆಯಿಂದ ಕಾನೂನು ಕೈಗೆತ್ತಿಕೊಂಡ ಆರೋಪಿ ಸಂತೋಷ ಜೈಲು ಸೇರಿದ್ದಾನೆ..

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ.

- Advertisement -

Latest Posts

Don't Miss