Wednesday, August 6, 2025

Latest Posts

ಆಪರೇಷನ್‌ ಅಸ್ಥಿಪಂಜರಕ್ಕೆ ಅಜ್ಞಾತ ಶಕ್ತಿಯ ಅಡ್ಡಗಾಲು!?

- Advertisement -

ಧರ್ಮಸ್ಥಳದ ನಿಗೂಢ ಸಾವುಗಳ ಪ್ರಕರಣ, ಅಂತಿಮ ಘಟ್ಟಕ್ಕೆ ಬಂದಿದೆ. ಇಂಥಾ ಹೊತ್ತಲ್ಲಿ GPR ಬಳಕೆ ವಿಚಾರದಲ್ಲಿ ಪ್ರಶ್ನೆಗಳು ಉದ್ಭವಿಸಿವೆ. ಮೃತ ಅನನ್ಯಾ ಭಟ್‌ ನ್ಯಾಯ ಸಿಗಬೇಕೆಂದು ತಾಯಿ ಸುಜಾತ ಭಟ್ ಹೋರಾಡ್ತಿದ್ದಾರೆ. ಅಸ್ಥಿಪಂಜರಗಳ ಶೋಧ ಕಾರ್ಯಾಚರಣೆಯಲ್ಲಿ, GPR ತಂತ್ರಜ್ಞಾನ ಬಳಕೆ ಮಾಡುವಂತೆ ಆಗ್ರಹಿಸಿದ್ರು.

ಆದ್ರೀಗ GPR ತಂತ್ರಜ್ಞಾನ ಬಳಕೆ ತಪ್ಪಿಸಲು ಷಡ್ಯಂತ್ರ್ಯ ನಡೀತಿದೆ ಅಂತಾ,
ಸುಜಾತ ಭಟ್‌ ಪರ ವಕೀಲ ಮಂಜುನಾಥ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರೆಸ್‌ ರಿಲೀಸ್‌ ಹೊರಡಿಸಿದ್ದಾರೆ. ಅಜ್ಞಾತ ಶಕ್ತಿಗಳಿಂದ GPR ಮುಂಗಡ ಬುಕ್ಕಿಂಗ್‌ ಆಗಿದ್ದು, ಕೃತಕ ಅಭಾವ ಸೃಷ್ಟಿಸಿದ್ದಾರೆ. GPR‌ ಖರೀದಿಗೆ ಕೆಲ ಶಕ್ತಿಗಳಿಂದ ಅಡ್ಡಿಯಾಗ್ತಿದೆ. ಕಂಪನಿಗಳ ಮೇಲೆ ಒತ್ತಡ ಹಾಕಿ ಬೆದರಿಕೆ ಹಾಕಿದ್ದಾರಂತೆ. SIT ತನಿಖೆಗೆ GPR ಸಿಗದಂತೆ ಪಿತೂರಿ ಮಾಡಲಾಗಿದೆ ಅಂತಾ, ಆರೋಪಿಸಲಾಗಿದೆ.

ಇಷ್ಟೇ ಅಲ್ಲದೇ, ಅನಾಮಿಕನಿಗೆ ಬೆದರಿಕೆ ಹಾಕಿದ್ದ ಇನ್ಸ್‌ಪೆಕ್ಟರ್‌, ಮಂಜುನಾಥ್‌ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಬೆದರಿಕೆ ಆರೋಪ ಕೇಳಿ ಬಂದ್ಮೇಲೆ, ಅನಾಮಿಕನಿಂದ ಮತ್ತು ತನಿಖೆಯಿಂದ ದೂರ ಇಡಲಾಗಿತ್ತು. ಇದೀಗ ಪ್ರಕರಣ ಸಂಬಂಧ ಬೇರೆ ಬೇರೆ ಕೆಲಸಗಳಿಗೆ, ಮಂಜುನಾಥ್‌ನನ್ನ ಬಳಸಿಕೊಳ್ಳಲಾಗ್ತಿದೆ. ಇಂದು ತನಿಖಾಧಿಕಾರಿ ಅನುಚೇತ್‌ ಜೊತೆಯಲ್ಲೂ ಕಾಣಿಸಿಕೊಂಡಿರೋದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇನ್ನು, ಸ್ಪಾಟ್‌ ನಂಬರ್‌ 13ರಲ್ಲಿ 8 ಶವ ಹೂತಿದ್ದಾಗಿ ಅನಾಮಿಕ ಹೇಳಿದ್ದಾನೆ. ಆದರೆ, ಆ ಜಾಗದಲ್ಲಿ ಸ್ಪಾಟ್‌ ನಂಬರ್‌ 13ರಲ್ಲಿ ಅಸ್ಥಿಪಂಜರಗಳು ಸಿಗಲ್ಲ ಅಂತಾ, ಸ್ಥಳೀಯರು ಹೇಳ್ತಿದ್ದಾರೆ. ಅಜಿಕುರಿ ಎಂಬಲ್ಲಿಗೆ ಸಂಪರ್ಕಿಸುವ ರಸ್ತೆಯಲ್ಲಿ, 13ನೇ ಸ್ಪಾಟ್‌ ಇದೆ. 2019ರಲ್ಲಿ ಇದೇ ಜಾಗದಲ್ಲಿ ಪ್ರವಾಹ ಬಂದಿತ್ತು. ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ, 80 ಲೋಡ್‌ನಷ್ಟು ಮಣ್ಣನ್ನು ಹಾಕಲಾಗಿದೆ. ಹೀಗಾಗಿ ಅಸ್ಥಿಪಂಜರ ಸಿಗೋದು ಡೌಟ್ ಎಂದು, ಸ್ಥಳೀಯರು ಹೇಳ್ತಿದ್ದಾರೆ.

ಇದೆಲ್ಲರ ಮಧ್ಯೆ, ಬೆಳ್ತಂಗಡಿಯ SIT ಕಚೇರಿಯಲ್ಲಿ, ಮುಖ್ಯಸ್ಥ ಪ್ರಣವ್‌ಮೊಹಾಂತಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. 13ನೇ ಸ್ಪಾಟ್‌ನಲ್ಲಿ ಶೋಧ ಮುಗಿದ್ಮೇಲೆ, ಮುಂದಿನ ನಡೆ ಏನು ಅನ್ನೋ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

- Advertisement -

Latest Posts

Don't Miss