Thursday, June 13, 2024

Latest Posts

ಕೊನೆಗೂ ಆನಂದ್ ಸಿಂಗ್ ಮುನಿಸು ತಣ್ಣಗಾಗಿದ್ದೇಕೆ..?

- Advertisement -

www.karnatakatv.net : ಬೆಂಗಳೂರು : ಖಾತೆ ಹಂಚಿಕೆಯಿಂದಾಗಿ ತೀವ್ರ ಅಸಮಾಧಾನಗೊಂಡಿದ್ದ ಸಚಿವ ಆನಂದ್ ಸಿಂಗ್ ಮುನಿಸು ಇದೀಗ ತಣ್ಣಗಾಗಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರನ್ನು ಭೇಟಿಯಾದ ಆನಂದ್ ಸಿಂಗ್ ಇದೀಗ ತಮಗೆ ನೀಡಿರೋ ಖಾತೆ ನಿಭಾಯಿಸೋದಾಗಿ ನಿರ್ಧರಿಸಿದ್ದಾರೆ.

ಸುಮಾರು 15 ನಿಮಿಷಗಳ ನಡೆದ ಚರ್ಚೆಯಲ್ಲಿ ಸಿಎಂ ಮತ್ತು ನಳೀನ್ ಕುಮಾರ್ ಸಚಿವ ಆನಂದ್ ಸಿಂಗ್ ಬೇಡಿಕೆಯನ್ನು ಈಡೇರಿಸೋದಾಗಿ ತಿಳಿಸಿದ್ದು, ಸದ್ಯಕ್ಕೆ ತಮಗೆ ನೀಡಿರೋ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುವಂತೆ ಮನವೊಲಿಸಿದ್ದಾರೆ. ಅಲ್ಲದೆ ಆನಂದ್ ಸಿಂಗ್  ಈಗಲೂ ಖಾತೆ ಬದಲಾವಣೆಯ ಬೇಡಿಕೆಯಿಟ್ಟಿದ್ದು ವರಿಷ್ಠರ ಗಮನಕ್ಕೆ ತಂದು ಬೇಡಿಕೆ ಈಡೇರಿಸೋದಾಗಿ ಸಿಎಂ ತಿಳಿಸಿದ್ದಾರೆ. ಹೀಗಾಗಿ ಅವರ ಆದೇಶವನ್ನು ನಾನು ಪಾಲಿಸಲಿದ್ದು ಮುಂದಿನ ದಿನಗಳಲ್ಲಿ ಖಾತೆ ಬದಲಾಯಿಸೋ ನಿರೀಕ್ಷೆಯಿದೆ ಅಂತ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಇನ್ನು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು ಈ ಕುರಿತು ಚರ್ಚಿಸೋ ಸಾಧ್ಯತೆಯಿದೆ.

ಕರ್ನಾಟಕ ಟಿವಿ -ಬೆಂಗಳೂರು

- Advertisement -

Latest Posts

Don't Miss