ಅನಂತ್ ಅಂಬಾನಿ ಮದುವೆಗೆ ಬಂದಿತ್ತು ಬಾಂಬ್ ಬೆದರಿಕೆ: ಆದರೆ ಸತ್ಯವೇ ಬೇರೆ

Movie News: ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಅನಂತ್ ಮತ್ತು ರಾಧಿಕಾ ಮದುವೆ. ಮುಖೇಶ್ ಅಂಬಾನಿ ಮನೆತನಕ ಕೊನೆಯ ಮಗನ ಮದುವೆ. ಹಾಗಾಗಿ ಮುಖೇತಶ್, ತನ್ನ ಕೊನೆಯ ಮಗನ ಮದುವೆಯನ್ನು ಭಾರೀ ಗ್ರ್ಯಾಂಡ್ ಆಗಿ ಮಾಡುತ್ತಿದ್ದಾರೆ.

ಮದುವೆಗೂ ಮುನ್ನ ಎರಡರಿಂದ ಮೂರು ಬಾರಿ ಪ್ರಿವೆಡ್ಡಿಂಗ್‌ ಕಾರ್ಯಕ್ರಮವಾಗಿದೆ. ಆ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ಮುಖೇಶ್ ದುಡ್ಡು ಕೊಟ್ಟು ಕರೆಸಿದ್ದಾರೆ. ಅಲ್ಲದೇ, ಬಂದ ಗೆಸ್ಟ್‌ಗಳಲ್ಲಿ ಕೆಲವರಿಗೆ 2ವರೆ 3 ಕೋಟಿ ರೂಪಾಯಿ ವಾಚನ್ನು ರಿಟರ್ನ್ ಗಿಫ್ಟ್ ಆಗಿ ನೀಡಲಾಗಿದೆ.

ಇಷ್ಟೆಲ್ಲ ಗ್ರ್ಯಾಂಡ್ ಆಗಿ, ಖುಷಿ ಖುಷಿಯಾಗಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಭಂಗ ತಂದಿದ್ದು ಮಾತ್ರ, ಒಂದು ಟ್ವೀಟ್. ಈ ಟ್ವೀಟ್‌ನಲ್ಲಿ ಅಂಬಾನಿ ಮದುವೆಯಲ್ಲಿ ಬಾಂಬ್ ಬಿದ್ದರೆ, ಅರ್ಧ ಪ್ರಪಂಚವೇ ಅಲ್ಲಾಡುತ್ತದೆ ಅನ್ನೋ ರೀತಿ ಟ್ವೀಟ್ ಮಾಡಲಾಗಿತ್ತು.

ಏಕೆಂದರೆ, ಈ ಕಾರ್ಯಕ್ರಮದಲ್ಲಿ ವಿಶ್ವದ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು. ಟ್ವೀಟ್ ಯಾವ ರೇಂಜ್‌ಗೆ ವೈರಲ್ ಆಯಿತೆಂದರೆ, ಪೊಲೀಸರು ಎಚ್ಚೆತ್ತುಕೊಂಡು, ಬಿಗಿ ಬಂದೋಬಸ್ತ್‌ನ್ನು ಹೆಚ್ಚು ಮಾಡಿದ್ದಾರೆ. ಆದರೆ ಇದು ತಮಾಷೆಗೆ ಮಾಡಿರಬಹುದಾದ ಟ್ವೀಟ್ ಅಂತಾ ಪೊಲೀಸರಿಗೂ ಗೊತ್ತಿತ್ತು. ಹಾಾಗಾಗಿ ಇದುವೆರಗೂ ಯಾರ ವಿರುದ್ಧವೂ ಎಫ್‌ಐಆರ್ ದಾಖಲಾಗಿಲ್ಲ.

About The Author