ರಾಜಕೀಯ ಸುದ್ದಿ: ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿಯವರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೆ ನವದೆಹಲಿಯಲ್ಲಿ ತೆಜಸ್ವಿನಿ ಅನಂತ್ ಕುಮಾರ್ ಅವರು ಪ್ರಧಾನಿಗಳನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ಟ್ವೀಟ್ ಮಾಡಿದ ಅವರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಇನ್ನು 2019 ರ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರ ಸ್ಥಾನದಲ್ಲಿ ತೇಜಸ್ವಿನಿಯವರಿಗೆ ಟಿಕೆಟ್ ನೀಡುಲಾಗುತ್ತೆ ಎನ್ನಲಾಗಿತ್ತು. ಆದರೆ ಅಚ್ಚರಿ ಎನ್ನುವಂತೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಇನ್ನು ಕಳೆದ ವಿಧಾನಸಭೆ ಚುನಾವಣೆಯ ಮೊದಲು ಬಿಜೆಪಿ ಪಕ್ಷ ತೊರೆದ ಬಿಜೆಪಿ ನಾಯಕರು ತೇಜಸ್ವಿನಿ ಅವರಿಗೆ ಕಾಂಗ್ರೆಸ್ ಸೇರುವಂತೆ ಮನವೊಲಿಸಲು ಪ್ರಯತ್ನ ನಡೆಸಲಾಗಿತ್ತು ಎಂಬ ಸುದ್ದಿ ಹರಿದಾಡುತ್ತಿತ್ತು.
ಆದರೆ ಇದ್ಯಾವುದಕ್ಕೂ ತಲೆಕೆಡಸಿಕೊಳ್ಳದ ತೇಜಸ್ವನಿಯವರು ನಾನು ಬಿಜೆಪಿಯಲ್ಲಿ ದೃಡವಾಗಿ ನಿಂತಿದ್ದೇನೆ ನೀವು ಯಾವುದೇ ಊಹಾಪೋಹಗಳಿಗೆ ತಲೆಕೆಡಸಿಕೊಳ್ಳಬೇಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದರು.
CT Ravi: ಸಭಾಧ್ಯಕ್ಷರ ಏಕಪಕ್ಷೀಯ ವರ್ತನೆ ಕುರಿತು ಗವರ್ನರ್ ರಿಗೆ ವಿವರ