www.karnatakatv.net : ಕೊರೊನಾ ಮುಂಚಿತವಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಅಂದ್ರೆ ಎಲ್ಲರೂ ಸಾಮಾನ್ಯವಾಗಿ ರಿಯಾಕ್ಟ್ ಮಾಡೋರು.. ಕೊರೊನಾ ನಂತರ ನಮ್ಮ ವೈದ್ಯರು, ವೈದ್ಯಕೀಯ ಸಿಬ್ಬಂದಿ ಗಡಿ ಕಾಯುವ ಯೋಧರಷ್ಟೆ ಗೌರವಕ್ಕೆ ಪಾತ್ರರಾಗ್ತಿದ್ದಾರೆ.. ಇವಾಗ ಯಾಕೆ ಈಮಾತು ಅಂತಿರಾ..? ಹೌದು ಇಂದು ರಾಷ್ಟ್ರೀಯ ಅರವಳಿಕೆ ಮತ್ತು ಶಸ್ತ್ರ ಚಿಕಿತ್ಸೆ ತಜ್ಞರದಿನ.. ಅಂದ್ರೆ, ಅನಸ್ತೇಷಿಯಾ ಮತ್ತು ಓಟಿ ಟೆಕ್ನೆಷಿಯನ್ ದಿನಾಚರಣೆ..
ಕೊರೊನಾ ವಾರಿಯರ್ ಗಳಾದ ಓಟಿ ಟೆಕ್ನೀಷಿಯನ್ಸ್ಗೆ ಜನ ಗೌರವ ಕೊಡ್ತಿದ್ದಾರೆ ಆದ್ರೆ ಈ ಬಗ್ಗೆ ಸರ್ಕಾರ ಎಳ್ಳಷ್ಟು ಗಮನ ಕೊಡ್ತಿಲ್ಲ.. ಆಸ್ಪತ್ರೆಗಳಿಗೆ ವೈದ್ಯರು ಬೇಕಾಗುವ ಹಾಗೆ ಅನಸ್ತೇಷಿಯಾ ಮತ್ತು ಓಟಿ ಟೆಕ್ನೆಷಿಯನ್ ಗಳು ಬೇಕೆ ಬೇಕು.. ಯಾಕಂದರೆ ಇವರು ಇಲ್ಲದೆ ಯಾವುದೇ ಆಪರೇಷನ್ ಮಾಡಲು ಸಾಧ್ಯವಿಲ್ಲ.. ಕೊರೊನಾ ಕಾಲದಲ್ಲಿ ವೈದ್ಯರಷ್ಟೆ ವೈದ್ಯಕೀಯ ಸಿಬ್ಬಂದಿ ಕೂಡ ಮುಖ್ಯ.. ವೆಂಟಿಲೇಟರ್ ಆಪರೇಟ್ ಮಾಡಲು ಬಾರದೇ ಎಷ್ಟೇ ವೆಂಟಿಲೇಟರ್ಸ್ ಸರ್ಕಾರಿ ಆಸ್ಪತ್ರೆಗಳಲ್ಲಿ ಧೂಳು ಹಿಡಿಯುತ್ತಿವೆ. ಇದಿಷ್ಟೆ ಅಲ್ಲ ಸಾವಿರಾರು ಜನ ವೆಂಟಿಲೇಟರ್ ಇಲ್ಲದೇ ಸಾವನ್ನಪ್ಪಿದ್ದಾರೆ ಅನ್ನೋದು ಎಷ್ಟು ಸತ್ಯವೋ.. ಹಾಗೆಯೇ 50% ವೆಂಟಿಲೇಟರ್ ಗೆ ಹೋದ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಕಾರಣ ವೆಂಟಿಲೇಟರ್ ಆಪರೇಟ್ ಮಾಡಲು ನುರಿತರನ್ನ ಸರ್ಕಾರ ನೇಮಕ ಮಾಡಿಕೊಳ್ಳದಿರೋದು.. ಈಗಲಾದರೂ ಸರ್ಕಾರ ನಾವು ಈ ಕುರಿತು ಕೋರ್ಸ್ ಮಾಡಿದ್ದೇವೆ ನಮ್ಮನ್ನ ನೇಮಕ ಮಾಡಿಕೊಳ್ಳಲಿ.. ಜನರ ಜೀವ ಉಳಿಸಲಿ ಎಂದು ಓಟಿ ಟೆಕ್ನೆಷಿನ್ ಮತ್ತು ಅನಸ್ತೇಷಿಯಾದ ಉಪಾಅಧ್ಯಕ್ಷರಾದ ಬಸವರಾಜ್ ಕೆ ಅರವಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ..